ಗ್ರಾಮಿ ಪ್ರಶಸ್ತಿಗೆ ರಿಕ್ಕಿ ಕೇಜ್, ವಾರಿಜಾಶ್ರಿ ನಾಮನಿರ್ದೇಶನ
ಕೇಜ್ ಅವರ ಆಲ್ಬಮ್ ‘ಬ್ರೇಕ್ ಆಫ್ ಡಾನ್’, ಗಾಯಕಿ ಹಾಗೂ ಬರಹಗಾರ್ತಿ ಅನೌಷ್ಕಾ ಶಂಕರ್ ಅವರ ಆಲ್ಬಮ್ ಚಾಪ್ಟರ್ 2: ಹೌ ಡಾರ್ಕ್ ಇಟ್ ಇಸ್ ಬಿಫೋರ್ ಡಾನ್, ವೆಕಾರಿಯಾ ಅವರ ವಾರಿಯರ್ಸ್ ಆಫ್ ಲೈಟ್ ಆಂಡ್ ಎಂಟರ್‌ಪ್ರೆನ್ಯುವರ್, ಟಂಡನ್ ಅವರ ತ್ರಿವೇಣಿ ನಾಮನಿರ್ದೇಶಿತಗೊಂಡಿವೆ. ವಾರಿಜಾ ಶ್ರೀ, ಕೇಜ್ ಹಾಗೂ ಶಂಕರ್ ಅವರ ಆಲ್ಬಮ್‌ನ ಭಾಗವಾಗಿದ್ದಾರೆ.
ನವದೆಹಲಿ(ನ.09): 2025ರ ಗ್ರಾಮಿ ಪ್ರಶಸ್ತಿಗೆ ರಿಕಿ ಕೇಜ್, ವಾರಿಜಾಶ್ರೀ ವೇಣುಗೋಪಾಲ್, ಅನೌಷ್ಕಾ ಶಂಕರ್, ರಾಧಿಕಾ ವೆಕಾರಿಯಾ ಮತ್ತು ಚಂದ್ರಿಕಾ ಟಂಡನ್ ನಾಮನಿರ್ದೇಶನಗೊಂಡಿದ್ದಾರೆ. ಇವರುಗಳಲ್ಲಿ ರಿಕಿ ಕೇಜ್ ಮತ್ತು ವಾರಿಜಾ ಶ್ರೀ ಅವರು ಕನ್ನಡಿಗರು ಎಂಬುದು ವಿಶೇಷ.
ಕೇಜ್ ಅವರ ಆಲ್ಬಮ್ ‘ಬ್ರೇಕ್ ಆಫ್ ಡಾನ್’, ಗಾಯಕಿ ಹಾಗೂ ಬರಹಗಾರ್ತಿ ಅನೌಷ್ಕಾ ಶಂಕರ್ ಅವರ ಆಲ್ಬಮ್ ಚಾಪ್ಟರ್ 2: ಹೌ ಡಾರ್ಕ್ ಇಟ್ ಇಸ್ ಬಿಫೋರ್ ಡಾನ್, ವೆಕಾರಿಯಾ ಅವರ ವಾರಿಯರ್ಸ್ ಆಫ್ ಲೈಟ್ ಆಂಡ್ ಎಂಟರ್‌ಪ್ರೆನ್ಯುವರ್, ಟಂಡನ್ ಅವರ ತ್ರಿವೇಣಿ ನಾಮನಿರ್ದೇಶಿತಗೊಂಡಿವೆ. ವಾರಿಜಾ ಶ್ರೀ, ಕೇಜ್ ಹಾಗೂ ಶಂಕರ್ ಅವರ ಆಲ್ಬಮ್‌ನ ಭಾಗವಾಗಿದ್ದಾರೆ.
ಸ್ವಾತಂತ್ರೋತ್ಸವಕ್ಕೆ ರಿಕ್ಕಿ ಕೇಜ್ ಉಡುಗೊರೆ: ಬ್ರಿಟಿಷ್ ಆರ್ಕೆಸ್ಟ್ರಾದಲ್ಲಿ ರಾಷ್ಟ್ರಗೀತೆಗೆ ವಿಶೇಷ ಟ್ಯೂನ್ !
ರಿಕಿ ಕೇಜ್ ಈಗಾಗಲೇ ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. 2025ರ ಫೆ.2ರಂದು ಪ್ರಶಸ್ತಿ ಘೋಷಣೆಯಾಗಲಿದೆ.