ಚಿತ್ರದುರ್ಗ[ಜ.06]: ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿರುವ ಶ್ರೀಮಂತರ ಬಗ್ಗೆ ಮಾಹಿತಿ ಇದ್ದು ಒಂದು ವೇಳೆ ಅದನ್ನು ಜನವರಿ ಅಂತ್ಯದೊಳಗೆ ಹಿಂದಿರುಗಿಸದಿದ್ದರೆ, ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮವಾಗಿ ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಈ ತಿಂಗಳ ಅಂತ್ಯದವರೆಗೆ ವಾಪಸ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ವಾಪಸ್‌ ಮಾಡದಿದ್ದರೆ, ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು. ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಹಂತದ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಏಕ ದೇಶ, ಏಕ ಪಡಿತರ ಚೀಟಿ: ಕರ್ನಾಟಕದಲ್ಲಿ ಚಾಲನೆ

ಕಳೆದ 10 ವರ್ಷಗಳಿಂದ ಇಲಾಖೆಯಲ್ಲಿ ಬಡ್ತಿ ಪ್ರಕ್ರಿಯೆ ನಡೆದಿರಲಿಲ್ಲ. ಈ ನಿಟ್ಟಿನಲ್ಲಿ ಡಿಡಿ, ಜೆಡಿ ಹಾಗೂ ಸಿಡಿಪಿಒ ಹಂತಗಳಲ್ಲಿ ಬಡ್ತಿ ಪ್ರಕ್ರಿಯೆ ನಡೆಯುತ್ತಿದೆ. ಇದರ ಜೊತೆಗೆ 628 ಸೂಪರವೈಸರ್‌ ಹುದ್ದೆಗಳಿಗೆ ಈ ವಾರದಲ್ಲಿ ಪೋಸ್ಟಿಂಗ್‌ ನಡೆಯಲಿದೆ ಎಂದು ಹೇಳಿದರು. 54 ಸಿಡಿಪಿಒ, 43 ಎಸಿಡಿಪಿಒ ಹುದ್ದೆಗಳಿಗೆ ಹತ್ತು ತಿಂಗಳಿಂದ ಪೋಸ್ಟಿಂಗ್‌ ಆಗಿರಲಿಲ್ಲ. ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ ಬೆಂಗಳೂರು ಹಂತದಲ್ಲಿ ಆಗಬೇಕಾದ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿ ಇದೀಗ ಜಿಲ್ಲಾ ಹಂತಗಳಲ್ಲಿ ಪ್ರವಾಸ ಮಾಡಿ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದೇನೆ ಎಂದರು.

ಬಿಪಿ​ಎಲ್‌ ಕುಟುಂಬ​ಗ​ಳಿ​ಗೆ ಭರ್ಜರಿ ಗುಡ್ ನ್ಯೂಸ್