Asianet Suvarna News Asianet Suvarna News

Bengaluru: ತಿರುಚಿದ ಟಿಪ್ಪು ಇತಿಹಾಸ ವಿರೋಧಿಸಿ: ಎಂ.ಎಸ್‌.ಸತ್ಯು

ಟಿಪ್ಪು ಸುಲ್ತಾನ್‌ ಆಡಳಿತಾವಧಿಯಲ್ಲಿ ನಡೆದ ಹಲವು ಘಟನೆಗಳನ್ನು ತಿರುಚಿ ಪಠ್ಯದಲ್ಲಿ ಅಳವಡಿಸುವ ಮೂಲಕ ಮಕ್ಕಳಲ್ಲಿ ತಪ್ಪು ತಿಳುವಳಿಗೆ ಮೂಡುವಂತೆ ಮಾಡುವ ದೊಡ್ಡ ಪಿತೂರಿ ನಡೆಯುತ್ತಿದೆ. ಅದಕ್ಕೆ ನಾವು ವಿರೋಧ ಮಾಡುವುದು ಬಹಳ ಮುಖ್ಯ ಎಂದು ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕ ಎಂ.ಎಸ್‌.ಸತ್ಯು ಹೇಳಿದರು.

Resist the twisted tip history says ms satyu rav
Author
First Published Jan 29, 2023, 10:28 AM IST

ಬೆಂಗಳೂರು (ಜ.29) : ಟಿಪ್ಪು ಸುಲ್ತಾನ್‌ ಆಡಳಿತಾವಧಿಯಲ್ಲಿ ನಡೆದ ಹಲವು ಘಟನೆಗಳನ್ನು ತಿರುಚಿ ಪಠ್ಯದಲ್ಲಿ ಅಳವಡಿಸುವ ಮೂಲಕ ಮಕ್ಕಳಲ್ಲಿ ತಪ್ಪು ತಿಳುವಳಿಗೆ ಮೂಡುವಂತೆ ಮಾಡುವ ದೊಡ್ಡ ಪಿತೂರಿ ನಡೆಯುತ್ತಿದೆ. ಅದಕ್ಕೆ ನಾವು ವಿರೋಧ ಮಾಡುವುದು ಬಹಳ ಮುಖ್ಯ ಎಂದು ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕ ಎಂ.ಎಸ್‌.ಸತ್ಯು ಹೇಳಿದರು.

ಶನಿವಾರ ಕರ್ನಾಟಕ ಚಿತ್ರಕಲಾ ಪರಿಷತ್ತು(Karnataka chitrakala parishat) ಆವರಣದಲ್ಲಿ ಬೀಕಲ್ಚರ್‌ ಬೆಂಗಳೂರು(BECULTURE BANGALORE) ಆಯೋಜಿಸಿದ್ದ ಸಪ್ನ ಬುಕ್‌ಹೌಸ್‌ ಪ್ರಕಾಶನದ ನಾಟಕಕಾರ ಡಾ ಡಿ.ಎಸ್‌.ಚೌಗಲೆ ಅವರ ‘ವಖಾರಿಧೂಸ’ ನಾಟಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

Tipu Sultan: ಟಿಪ್ಪು ಬಗ್ಗೆ ಸುಳ್ಳು ಹೇಳಿ 'ಕಾರ್ನಾಡ್‌' ಇತಿಹಾಸವನ್ನು ತಿರುಚಿದ್ದಾರೆ: ಅಡ್ಡಂಡ ಕಾರ್ಯಪ್ಪ

ನಾಟಕದಲ್ಲಿ ರಾಜಕೀಯ ಇರಬೇಕೋ ಬೇಡವೋ ಎಂಬ ಪ್ರಶ್ನೆ ಜನರಲ್ಲಿದೆ. ಮೈಸೂರಿನ ರಂಗಾಯಣದಲ್ಲಿ ಇತ್ತೀಚೆಗೆ ಪ್ರದರ್ಶಿಸಿದ ಚಂದ್ರಶೇಖರ ಕಂಬಾರರ ನಾಟಕವೊಂದನ್ನು ತಿರುಚಿ, ಪಾತ್ರಗಳಲ್ಲಿ ಸಿದ್ದರಾಮಯ್ಯ ಅವರನ್ನೆಲ್ಲಾ ಸೇರಿಸಲಾಗಿತ್ತು. ಹಾಗೆಯೇ ಗಿರೀಶ್‌ ಕಾರ್ನಾಡ್‌ ಬರೆದಿರುವುದು ಟಿಪ್ಪುವಿನ ಕನಸುಗಳು ಎಂಬ ನಾಟಕಕ್ಕೂ ಅಡ್ಡಾಂಡ ಕಾರ್ಯಪ್ಪ ಅವರ ಟಿಪ್ಪುವಿನ ನಿಜ ಕನಸುಗಳು ಎಂದು ಕೃತಿಗೂ ಸಾಕಷ್ಟುಭಿನ್ನತೆಗಳಿವೆ. ಚರಿತ್ರೆಯಲ್ಲಿ ನಡೆದ ವಿಚಾರಗಳನ್ನು ನಾವು ಬದಲಿಸಲು ಸಾಧ್ಯವಿಲ್ಲ. ಹಾಗೆಯೇ ಚರಿತ್ರೆಯ ನಿಜ ಸಂಗತಿಗಳನ್ನು ಅರಿತುಕೊಳ್ಳುವ ಆಂದೋಲನ ನಾಟಕಗಳ ಮೂಲಕ ಅನಾವರಣಗೊಳ್ಳಬೇಕು ಎಂದು ಹೇಳಿದರು.

ಶೃಂಗೇರಿ ಮಠವನ್ನು ಮರಾಠರ ದಾಳಿಯಿಂದ ರಕ್ಷಿಸಿದ್ದು ಟಿಪ್ಪು ಸುಲ್ತಾನ್‌. ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ ಇಂದಿಗೂ ಹಾಗೆಯೇ ಇದೆ. ಆದರೆ ದೇವಾಲಯದ ಎದುರುಗಡೆ ಇದ್ದ ಟಿಪ್ಪುವಿನ ಅರಮನೆಯನ್ನು ಸುಟ್ಟು ಹಾಕಿಬಿಟ್ಟಿದ್ದಾರೆ. ಟಿಪ್ಪು ಸುಲ್ತಾನ್‌ ಶ್ರೀರಂಗಪಟ್ಟಣದಲ್ಲಿ ಇದ್ದಾಗ ಆಡಳಿತಕ್ಕೆ ಸಂಬಂಧಿಸಿದ ಯಾವುದೇ ಕಾರ್ಯ ಶುರು ಮಾಡುವುದಕ್ಕೂ ಮೊದಲು ಶ್ರೀರಂಗನಾಥ ದೇವಸ್ಥಾನದಲ್ಲಿ ಮಂಗಳಾರತಿ ಮಾಡಿ ಆ ನಂತರ ಕೆಲಸ ಆರಂಭಿಸುತ್ತಿದ್ದ ಎಂಬ ಇತಿಹಾಸ ಸುಳ್ಳಾಗದು. ಈಗ ಬಿಜೆಪಿಯಂತ ಹಿಂದೂವಾದಿಗಳು ಶ್ರೀರಂಗಪಟ್ಟಣದ ಮಸೀದಿ, ಈ ಹಿಂದೆ ಹಿಂದು ದೇವಸ್ಥಾನ ಆಗಿತ್ತು ಅಂತಾರೆ. ಅದು ಸುಳ್ಳು. ಚರಿತ್ರೆಯಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.

ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಕೋಲಾರದಲ್ಲಿ ಟಿಪ್ಪು ವಿವಿ ಸ್ಥಾಪನೆ: ಮಾತು ಕೊಟ್ಟ ಇಬ್ರಾಹಿಂ

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ನಾಟಕಗಾರ ಡಾ ಬೇಲೂರು ರಘುನಂದನ, ರಂಗಭೂಮಿ ಚಿಂತಕಿ ಡಾ ವಿಜಯಮ್ಮ ಉಪಸ್ಥಿತರಿದ್ದರು.

Follow Us:
Download App:
  • android
  • ios