Asianet Suvarna News Asianet Suvarna News

ನಿವೇಶನ, ಕಟ್ಟಡ ವಾರ್ಷಿಕ ಗುತ್ತಿಗೆ ಶುಲ್ಕ ಇಳಿಸಲು ಪಾಲಿಕೆಗೆ ಮನವಿ

-ಕನ್ನಡ ಶಾಲೆಗಳು, ವಿವಿಧ ಸಂಘಟನೆಗಳಿಂದ ಸರ್ಕಾರಕ್ಕೆ ಪತ್ರ

- ಮಾರ್ಗಸೂಚಿ ಆಧಾರದಲ್ಲಿ ದರ ನಿಗದಿ

- ಪ್ರಸ್ತುತ ದರಕ್ಕಿಂತ ಶೇ. 10ರಷ್ಟು ಮಾತ್ರವೇ ಏರಿಸಿ ಎಂದು ಮನವಿ

Request to BBMP to down the annual lease fee for the building site corona business license san
Author
Bengaluru, First Published Mar 3, 2022, 4:15 AM IST | Last Updated Mar 3, 2022, 4:15 AM IST

ಬೆಂಗಳೂರು (ಮಾ.3): ಪಾಲಿಕೆಯಿಂದ ವಾರ್ಷಿಕ ಗುತ್ತಿಗೆ (Annual Lease Fee) ಆಧಾರದ ಮೇಲೆ ನಿವೇಶನ ಹಾಗೂ ಕಟ್ಟಡ ಪಡೆದ ಕನ್ನಡ ಶಾಲೆಗಳು (Kannada School), ವಿವಿಧ ಸಂಘ-ಸಂಸ್ಥೆಗಳಿಗೆ ವಾರ್ಷಿಕ ಶುಲ್ಕವನ್ನು ಮಾರ್ಗಸೂಚಿ ದರದ ಮೇಲೆ ನಿಗದಿಗೊಳಿಸಿದ್ದರಿಂದ ಸಂಘಗಳು ಏಕಾಏಕಿ ಎಂಟ್ಹತ್ತು ಪಟ್ಟು ದುಬಾರಿ ಶುಲ್ಕ ಪಾವತಿಸುವ ಸಂಕಷ್ಟಕ್ಕೆ ಸಿಲುಕಿವೆ. ತಕ್ಷಣ ಈ ನಿರ್ಧಾರ ಬದಲಿಸಬೇಕು ಎಂದು ವಿವಿಧ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.

ಬಿಬಿಎಂಪಿ (BBMP) ಹಲವು ಆಸ್ತಿಗಳನ್ನು ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಕನಿಷ್ಠ ಶುಲ್ಕ ನಿಗದಿಪಡಿಸಿ ಕನ್ನಡ ಶಾಲೆ, ಸಂಘ ಸಂಸ್ಥೆಗಳಿಗೆ ನೀಡಿದೆ. ಪಾಲಿಕೆ ಸದಸ್ಯರ ಕೊನೆಯ ಮಾಸಿಕ ಸಭೆಯಲ್ಲಿ ಶುಲ್ಕ ಪರಿಷ್ಕರಣೆ ನಿರ್ಣಯದ ವೇಳೆ ಮಾರ್ಗಸೂಚಿ ದರದ ಶೇ.2ರಷ್ಟುಶುಲ್ಕ ನಿಗದಿಪಡಿಸಲು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದರಿಂದ ವಾರ್ಷಿಕ .5 ಸಾವಿರ ಶುಲ್ಕ ಪಾವತಿಸುತ್ತಿದ್ದ ಕನ್ನಡ ಶಾಲೆ, ಸಂಘ-ಸಂಸ್ಥೆಗಳು ಸುಮಾರು .50 ಸಾವಿರ ಪಾವತಿ ಮಾಡಬೇಕಾದ ಸಂಕಷ್ಟಕ್ಕೆ ಸಿಲುಕಿದೆ. ಸಂಘಟನೆಗಳಿಗೆ ಹೊರೆಯಾಗಿರುವ ನಿರ್ಣಯ ತಿದ್ದುಪಡಿ ಮಾಡಬೇಕೆಂದು ಬಿಎಂಶ್ರೀ ಪ್ರತಿಷ್ಠಾನ, ಉದಯಭಾನು ಕಲಾಸಂಘ ಸೇರಿದಂತೆ ಸಾಹಿತಿಗಳು, ಕಲಾವಿರು ಒತ್ತಾಯಿಸಿದ್ದಾರೆ.

ಪ್ರಸ್ತುತ ದರಕ್ಕಿಂತ ಶೇ.10 ಹೆಚ್ಚಿಸಿ: ಮಾರುಕಟ್ಟೆಅಥವಾ ಮಾರ್ಗಸೂಚಿ ದರದ ಆಧಾರದ ಮೇಲೆ ಶುಲ್ಕ ವಿಧಿಸಿದರೆ ಸಂಘ ಸಂಸ್ಥೆಗಳು ಪಾವತಿಸುವುದು ಕಷ್ಟ. ಹಾಗಾಗಿ, ಪ್ರಸ್ತುತ ಪಾವತಿಸುತ್ತಿರುವ ಮೊತ್ತಕ್ಕೆ ಶೇ.10ರಷ್ಟುಹೆಚ್ಚುವರಿಯಾಗಿ ಪಾವತಿಸಿಕೊಂಡು ಗುತ್ತಿಗೆ ನವೀಕರಣ ಮಾಡಬೇಕೆಂದು ಮುಖ್ಯಮಂತ್ರಿ ಸೇರಿದಂತೆ ಶಾಸಕರು, ಸಚಿವರು, ಮಾಜಿ ಮೇಯರ್‌ಗಳಿಗೆ ಸಂಘಟನೆಗಳು ಪತ್ರ ಬರೆದಿವೆ.

ಉದ್ದಿಮೆ ಪರವಾನಗಿ ಶುಲ್ಕ ಪಾವತಿ ಅವಧಿ ವಿಸ್ತರಣೆ
ಬೆಂಗಳೂರು:
ಬಿಬಿಎಂಪಿ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಉದ್ದಿಮೆ ಪರವಾನಿಗೆ (business license) ನವೀಕರಣ ಶುಲ್ಕವನ್ನು (renewal fees) ದಂಡವಿಲ್ಲದೇ ಪಾವತಿಸುವ ಅವಧಿಯನ್ನು ಮಾ.31ರ ವರೆಗೆ ವಿಸ್ತರಿಸಿ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (BBMP Chief Health Officer) ಆದೇಶಿಸಿದ್ದಾರೆ. ಮಾ.1ರಿಂದ 31ರವರೆಗೆ ನವೀಕರಣ ಶುಲ್ಕದ ಶೇ.25ರಷ್ಟುದಂಡ ಪಾವತಿಸಲು ಅವಕಾಶ ಮಾಡಿಕೊಡಲಾಗಿತ್ತು. ಮಾಚ್‌ರ್‍ ಅಂತ್ಯದವರೆಗೆ ದಂಡ ರಹಿತ ಶುಲ್ಕ ಪಾವತಿಸಿ ನವೀಕರಣಕ್ಕೆ ಉದ್ದಿಮೆದಾರರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ವಿನಾಯಿತಿ ನೀಡಲಾಗಿದೆ. ಏಪ್ರಿಲ್‌ನಿಂದ ಶುಲ್ಕದ ಶೇ.100 ರಷ್ಟುದಂಡ ಪಾವತಿಸಿ ಉದ್ದಿಮೆ ಪರವಾನಗಿ ನವೀಕರಣ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ ಬಾಲಸುಂದರ್‌ ತಿಳಿಸಿದ್ದಾರೆ. 

PUC Time Table ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಬದಲಾವಣೆ. ಇಲ್ಲಿದೆ ಹೊಸ ವೇಳಾಪಟ್ಟಿ
ನಗರದಲ್ಲಿ ಮತ್ತಷ್ಟು ಕೊರೋನಾ ಇಳಿಕೆ
ಬೆಂಗಳೂರು:
ನಗರದಲ್ಲಿ ಕೊರೋನಾ (Corona) ಸೋಂಕಿನ ಪ್ರಕರಣ ಬಹಳಷ್ಟುಕಡಿಮೆ ಆಗುತ್ತಿದ್ದು, ಬುಧವಾರ 106 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 4 ಮಂದಿ ಮೃತರಾಗಿದ್ದಾರೆ. 370 ಮಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಸೋಂಕು ಸಾಂಕ್ರಾಮಿಕ ಸ್ವರೂಪ ಪಡೆದುಕೊಂಡ ಬಳಿಕ ಮೊದಲ ಬಾರಿಗೆ ಇಷ್ಟೊಂದು ಕಡಿಮೆ ಪ್ರಕರಣ ವರದಿಯಾಗಿದೆ. 2021ರ ನವೆಂಬರ್‌ 22ಕ್ಕೆ 112 ಪ್ರಕರಣ ದಾಖಲಾಗಿದ್ದು, ಈವರೆಗಿನ ಕನಿಷ್ಠ ಪ್ರಕರಣವಾಗಿತ್ತು. ಈವರೆಗೆ ಒಟ್ಟು 17.78 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಹೊರಗೆ ಹೋಟೆಲ್..ಒಳಗೆ ವೇಶ್ಯಾವಾಟಿಕೆ.. ಹುಬ್ಬಳ್ಳಿ ಕರಾಮತ್ತು!
ಸಕ್ರಿಯ ಪ್ರಕರಣಗಳ ಸಂಖ್ಯೆ 2,735ಕ್ಕೆ ಕುಸಿದಿದ್ದರೂ ದೇಶದ ದೊಡ್ಡ ನಗರಗಳ ಪೈಕಿ ಬೆಂಗಳೂರಲ್ಲೆ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ನವದೆಹಲಿಯಲ್ಲಿ 1,769 ಸಕ್ರಿಯ ಪ್ರಕರಣಗಳಿದ್ದು ಎರಡನೇ ಸ್ಥಾನದಲ್ಲಿದೆ. ನಾಲ್ವರು ಮೃತಪಟ್ಟಿದ್ದು ಈವರೆಗೆ ಒಟ್ಟು 16,925 ಮಂದಿಯ ಪ್ರಾಣವನ್ನು ಕೋವಿಡ್‌ (Covid-19) ಮಹಾಮಾರಿ ಕಿತ್ತುಕೊಂಡಿದೆ. ನಗರದ ಬೊಮ್ಮನಹಳ್ಳಿ, ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ ಮತ್ತು ಯಲಹಂಕದಲ್ಲಿ ತಲಾ ಒಂದೊಂದು ಕಂಟೈನ್ಮೆಂಟ್‌ ವಲಯಗಳಿವೆ.

Latest Videos
Follow Us:
Download App:
  • android
  • ios