Asianet Suvarna News Asianet Suvarna News

ಮಕ್ಕಳು ಕಮಲದ ಹೂ ಹಿಡಿದು ನೃತ್ಯ ಮಾಡಿದ್ದಕ್ಕೆ ಬಹುಮಾನ ತಾರತಮ್ಯ; ಆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದ ಶಾಸಕ ಶಿವಲಿಂಗೇಗೌಡ!

ಅರಸೀಕೆರೆಯಲ್ಲಿ ನಡೆದಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ನೃತ್ಯ ಪ್ರದರ್ಶನದ ವೇಳೆ ಕಮಲದ ಹೂ ಕಾರ್ಡ್‌ ಬೋರ್ಡ್ ಕಂಡು ಶಿಕ್ಷಕಿಯ ವಿರುದ್ಧ ಏಕವಚನದಲ್ಲಿ ಮಾತಾಡಿ ಕಮಲದ ಹೂ ತೆಗೆಯುವಂತೆ ಆಕ್ಷೇಪ ವ್ಯಕ್ತಪಡಿಸಿದ್ದ ಘಟನೆ ಸಂಬಂಧ ಅರಸೀಕೆರೆ ಶಾಸಕ ಸ್ಪಷ್ಟನೆ ನೀಡಿದ್ದಾರೆ.

Republic Day Incident MLA Shivalingegowda clarification at Hassan rav
Author
First Published Jan 29, 2024, 3:10 PM IST

ಹಾಸನ (ಜ.29) : ಅರಸೀಕೆರೆಯಲ್ಲಿ ನಡೆದಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ನೃತ್ಯ ಪ್ರದರ್ಶನದ ವೇಳೆ ಕಮಲದ ಹೂ ಕಾರ್ಡ್‌ ಬೋರ್ಡ್ ಕಂಡು ಶಿಕ್ಷಕಿಯ ವಿರುದ್ಧ ಏಕವಚನದಲ್ಲಿ ಮಾತಾಡಿ ಕಮಲದ ಹೂ ತೆಗೆಯುವಂತೆ ಆಕ್ಷೇಪ ವ್ಯಕ್ತಪಡಿಸಿದ್ದ ಘಟನೆ ಸಂಬಂಧ ಅರಸೀಕೆರೆ ಶಾಸಕ ಸ್ಪಷ್ಟನೆ ನೀಡಿದ್ದಾರೆ.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಮ್ಮ ನಗರದ ಒಂದು ಶಾಲೆ ಮಕ್ಕಳಿಂದ ನೃತ್ಯ ಮಾಡಿಸಿತ್ತು. ಈ ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಾಣಿ ಹುಲಿ, ಪಕ್ಷಿ ನವಿಲು ಹಾಗೂ ಅಶೋಕ ಸ್ತಂಭವನ್ನು ಉಪಯೋಗಿಸಿದ್ದರು. ಅದರ ಜೊತೆಯಲ್ಲಿ ಕಮಲದ ಹೂ ಪ್ರದರ್ಶನ ಮಾಡಿದ್ದರು. ಮೂರು ಲಾಂಛನಗಳು ಚಿಕ್ಕದಾಗಿ, ಕಮಲದ ಹೂಗಳನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಎದ್ದು ಕಾಣುವ ರೀತಿ ತೋರಿಸಿದ್ದರು. ಹೀಗಾಗಿ ಮೂರು ಚಿಹ್ನೆಗಳು ಕಡಿಮೆ ಹಾಕಿ ಕಮಲವನ್ನು ದೊಡ್ಡದಾಗಿ ಹಾಕಿದ್ದೀರಾ ಎಂದು ಶಿಕ್ಷಕಿಯನ್ನು ಪ್ರಶ್ನಿಸಿದ್ದು ನಿಜ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ರಾಷ್ಟ್ರ ಪ್ರೇಮ, ಸಂವಿಧಾನ, ರಾಷ್ಟ್ರಧ್ವಜ ಇವೆಲ್ಲದರ ಮೇಲೆ ನನಗೆ ಅಪಾರವಾದ ಪ್ರೇಮ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರಿ ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ವಂಚನೆ; ಬಗೆದಷ್ಟು ಬಯಲಾಗ್ತಿದೆ ಕಾಂಗ್ರೆಸ್ ನಾಯಕಿ ಕರ್ಮಕಾಂಡ!

ಇನ್ನು ಅಂದು ಪ್ರದರ್ಶಸಿದ ನೃತ್ಯಗಳಿಗೆ ಬಹುಮಾನ ವಿತರಿಸುವಲ್ಲಿ ನನ್ನ ಪಾತ್ರವಿಲ್ಲ. ಅದನ್ನು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನೆ ಮಾಡಬಹುದು ನಾನು ಅಂತಹ ಕೀಳುಮಟ್ಟದ ರಾಜಕಾರಣ ಮಾಡುವವನಲ್ಲ ಎಂದು ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.

ಘಟನೆ ಹಿನ್ನೆಲೆ

ಗಣರಾಜ್ಯೋತ್ಸವ ನಿಮಿತ್ತ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯುತ್ತಿತ್ತು. ಮಕ್ಕಳಿಗೆ ದೇಶದ ಎಲ್ಲ ರಾಷ್ಟ್ರೀಯ ಚಿಹ್ನೆಗಳನ್ನು ಹಾಕಿ ಮಕ್ಕಳಿಂದ ನೃತ್ಯ ಮಾಡಿಸುತ್ತಿದ್ದ ಶಿಕ್ಷಕರು. ಚಿಹ್ನೆಗಳ ಸಮುಚ್ಚಯದಲ್ಲಿ ಕಮಲದ ಹೂ ಇರುವುದು ಗಮನಿಸಿದ ಶಾಸಕ ಶಿವಲಿಂಗೇಗೌಡ  ಯಾಕೆ ಕಮಲದ ಹೂ ಹಾಕಿದ್ದೀರಿ? ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಶಿಕ್ಷಕಿ, ಇದು ಪಕ್ಷದ ಚಿಹ್ನ ಅಲ್ಲ ಸಾರ್, ರಾಷ್ಟ್ರೀಯ ಹೂ ಎಂದು ತಿಳಿಸಿದ್ದರು. ಅದರಿಂದ ಮತ್ತಷ್ಟೂ ಕೋಪಕೊಂಡ ಶಾಸಕ ಶಿವಲಿಂಗೇಗೌಡ 'ಏಯ್ ನಿಂಗೆ ಏನ್ ಗೊತ್ತು? ಇನ್ನೇನ್ ಉದ್ದಾರ ಮಾಡ್ತೀರ ಮಕ್ಕಳನ್ನ' ಎಂದು ಏಕವಚನದಲ್ಲಿ ನಿಂದಿಸಿದ್ದರು. ಇದೆಲ್ಲ ವಿಡಿಯೋದಲ್ಲಿ ದಾಖಲಾಗಿದೆ. ಶಾಸಕರು ಏಕವಚನದಿಂದ ನಿಂದಿಸಿದ್ದರಿಂದ ಶಿಕ್ಷಕಿ ಸಹ "ಈ ರೀತಿ ಮಾತಾಡೋದು ಸರಿಹೋಗಲ್ಲ ಸರ್' ಶಾಸಕರಿಗೆ ವಾರ್ನಿಂಗ್ ಕೊಟ್ಟಿದ್ದರು. ನೋಟಿಸ್ ನೀಡಬೇಕಾಗುತ್ತೆ ಅಂತಾ ಶಿಕ್ಷಕಿಗೆ ವಾರ್ನಿಂಗ್ ಮಾಡಿದ್ದ ಶಾಸಕರು.  ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಸ್ಥಳೀಯ ಮುಖಂಡರ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಸಾಲಗಾರರ ಕಾಟ ತಾಳಲಾರದೆ ಇಡೀ ಕುಟುಂಬ ನಾಪತ್ತೆ; ವಾರ ಕಳೆದರೂ ಪತ್ತೆಯಾಗಿಲ್ಲ!

ಮೊದಲ ಬಹುಮಾನ ಪಡೆದ ಶಾಲೆ ನಾಲ್ಕನೇ ಬಹುಮಾನ ನೀಡಿದ ಅಧಿಕಾರಿಗಳು:

ಭಾರತದ ರಾಷ್ಟ್ರೀಯ ಹೂ ಕಮಲ ಹೂವಿನ ಚಿತ್ರವನ್ನು ಪ್ರದರ್ಶಿಸಿ ನೃತ್ಯ ಮಾಡಿದ್ದ ಚಂದ್ರಶೇಖರ್ ಭಾರತೀ ಶಾಲೆಯ ವಿದ್ಯಾರ್ಥಿಗಳು. ನೃತ್ಯದಲ್ಲಿ ಪ್ರಥಮ ಸ್ಥಾನಪಡೆದರೂ. ಶಾಸಕರ ನೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ನಾಲ್ಕನೇ ಬಹುಮಾನ ನೀಡಿದ್ದ ಅಧಿಕಾರಿಗಳು. ಅಂದರೆ ಕಮಲ ಪ್ರದರ್ಶನ ಮಾಡಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಮೊದಲ ಬಹುಮಾನ ನೀಡಿದರೆ ಶಾಸಕರ ಕೆಂಗಣ್ಣಿಗೆ ಗುರಿಯಾಗಬಹುದು ಎಂಬುದಕ್ಕೋ, ಸ್ವತಃ ಶಾಸಕ ಸೂಚನೆಯೋ ಒಟ್ಟಿನಲ್ಲಿ ಪ್ರಥಮ ಬಹುಮಾನ ಕೊಡುವ ಬದಲು ನಾಲ್ಕನೇ ಬಹುಮಾನ ನೀಡಿದ್ದ ಆಯೋಜಕರು. ಈ ಬಗ್ಗೆ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದ್ದರು.

Follow Us:
Download App:
  • android
  • ios