Asianet Suvarna News Asianet Suvarna News

ರೇಣುಕಾಸ್ವಾಮಿಗೆ ಮಗ ಹುಟ್ಟಿದ ದಿನವೇ ದರ್ಶನ್ ಬೆನ್ನುನೋವಿಗೆ ರಿಲೀಫ್!

ಬಳ್ಳಾರಿ ಜೈಲಿನಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದ ನಟ ದರ್ಶನ್‌ಗೆ ಕೊನೆಗೂ, ರೇಣುಕಾಸ್ವಾಮಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ ನಂತರ ಮುಕ್ತಿ ಸಿಕ್ಕಂತಾಗಿದೆ. ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮಗ ಹುಟ್ಟುತ್ತಿದ್ದಂತೆ, ಬಳ್ಳಾರಿಯ ಜೈಲಿನಲ್ಲಿದ್ದ ದರ್ಶನ್‌ಗೆ ವೈದ್ಯರ ಸಲಹೆ ಮೇರೆಗೆ ಹಾಸಿಗೆ, ದಿಂಬು ಹಾಗೂ ಚೇರು ಒದಗಿಸಲಾಗಿದೆ.

Renukaswamy child birth then back pain faced Darshan get bed and Pillow sat
Author
First Published Oct 16, 2024, 6:49 PM IST | Last Updated Oct 16, 2024, 6:49 PM IST

ಬಳ್ಳಾರಿ/ ಚಿತ್ರದುರ್ಗ (ಅ.16):  ಬಳ್ಳಾರಿ ಜೈಲಿನಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದ ನಟ ದರ್ಶನ್‌ಗೆ ಕೊನೆಗೂ, ರೇಣುಕಾಸ್ವಾಮಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ ನಂತರ ಮುಕ್ತಿ ಸಿಕ್ಕಂತಾಗಿದೆ. ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮಗ ಹುಟ್ಟುತ್ತಿದ್ದಂತೆ, ಬಳ್ಳಾರಿಯ ಜೈಲಿನಲ್ಲಿದ್ದ ದರ್ಶನ್‌ಗೆ ವೈದ್ಯರ ಸಲಹೆ ಮೇರೆಗೆ ಹಾಸಿಗೆ, ದಿಂಬು ಹಾಗೂ ಚೇರು ಒದಗಿಸಲಾಗಿದೆ. ಈ ಹಿಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ಗೆ ಐಷಾರಾಮಿ ಸೌಲಭ್ಯಗಳನ್ನು ನಿರಾಕರಿಸಲಾಗಿತ್ತು.

ನಟಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳಿಸಿದ್ದಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಅವರು ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಭೀಕರವಾಗಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾನೆ. ಇದಾದ ನಂತರ ಕೊಲೆ ಕೇಸಿನಲ್ಲಿ ಜೈಲು ಸೇರಿ 120 ದಿನಗಳನ್ನು ಪೂರೈಸುತ್ತಿರುವ ನಟ ದರ್ಶನ್‌ಗೆ ವಿಪರೀತ ಬೆನ್ನುನೋವು ಕಾಣಿಸಿಕೊಂಡಿತ್ತು. ಹಾಸಿಗೆ, ದಿಂಬು ಕೊಡುವಂತೆ ಎಷ್ಟು ಕೇಳಿದರೂ ಕೊಟ್ಟಿರಲಿಲ್ಲ. ಇದೀಗ ರೇಣುಕಾಸ್ವಾಮಿ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಅವರ ತಂದೆ ನನ್ನ ಮಗ ರೇಣುಕಾಸ್ವಾಮಿಯೇ ಹುಟ್ಟಿಬಂದಿದ್ದಾನೆ ಎಂದು ಹೇಳಿದ್ದಾರೆ. ಅಂದರೆ, ರೇಣುಕಾಸ್ವಾಮಿ ಮಗ ಹುಟ್ಟಿದ ಮೇಲೆ ಕೊಲೆ ಆರೋಪಿ ದಾಸನ ಬೆನ್ನು ನೋವಿಗೆ ತಾತ್ಕಾಲಿಕ ಮುಕ್ತಿ ಸಿಗುತ್ತಿದೆ ಎಂದು ಹೇಳಲಾಗುತ್ತದೆ. ಅಂದರೆ, ರೇಣುಕಾಸ್ವಾಮಿಗೆ ಮಗು ಹುಟ್ಟಿದ ದಿನವೇ ವೈದ್ಯರ ವರದಿ ಮೇರೆಗೆ ಜೈಲಿನಲ್ಲಿರುವ ದರ್ಶನ್‌ಗೆ ಬಹುದಿನಗಳಿಂದ ಬೇಡಿದ್ದ ಹಾಸಿಗೆ, ದಿಂಬು ಹಾಗೂ ಇತ್ಯಾದಿ ಬೆನ್ನು ನೋವು ನಿವಾರಕ ಸಾಮಗ್ರಿಗಳನ್ನು ಒದಗಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ನಟ ದರ್ಶನ್ , ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ: ರವಿಶಂಕರ್ ದೀಪಕ್‌ಗೆ ರಿಲೀಫ್!

ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹೋದ ಬೆನ್ನಲ್ಲಿಯೇ ಅಲ್ಲಿ ನನಗೆ ಕುಳಿತುಕೊಳ್ಳಲು ಚೇರು ಇಲ್ಲ, ಮಲಗಲು ಮೆತ್ತನೆಯ ಹಾಸಿಗೆ ದಿಂಬು ಇಲ್ಲ, ಕೆಳಗೆ ಕುಳಿತುಕೊಳ್ಳುವುದಕ್ಕೆ ಆಗುತ್ತಿಲ್ಲ ನನಗೆ ಮನೆಯಿಂದ ಚೇರ್, ಮೆತ್ತನೆಯ ಹಾಸಿಗೆ, ದಿಂಬುಮ ಬೆಡ್‌ಶೀಟ್ ಕೊಡುವಂತೆ ಮನವಿ ಮಾಡಿದ್ದರು. ಆದರೆ, ಜೈಲಿನಲ್ಲಿ ಈ ಸವಲತ್ತುಗಳನ್ನು ಕೊಡಲು ಸಾಗುವುದಿಲ್ಲ ಎಂದು ನಿರಾಕರಣೆ ಮಾಡಲಾಗಿತ್ತು. ಇದಾದ ಕೆಲವು ದಿನಗಳ ನಂತರ ನಟ ದರ್ಶನ್‌ಗೆ ಅಲ್ಲಿದ್ದ ನಟೋರಿಯಸ್ ರೌಡಿ ಶೀಟರ್‌ಗಳು ಐಷಾರಾಮಿ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಕುಳಿತುಕೊಳ್ಳಲು ಚೇರ್, ಸಿಗರೇಟ್, ಕಾಫಿ ಹಾಗೂ ಮಲಗುವುದಕ್ಕೂ ಐಷಾರಾಮಿ ವ್ಯವಸ್ಥೆ ಮಾಡಿದ್ದಾರೆ. ಈ ಸಂಬಂಧಪಟ್ಟ ಫೋಟೋ ಎಲ್ಲೆಡೆ ವೈರಲ್ ಆದ ಬೆನ್ನಲ್ಲಿಯೇ ನಟ ದರ್ಶನ್‌ನನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ವರ್ಗಾವಣೆ ಮಾಡಲಾಯಿತು. ಇದೀಗ ನಟ ದರ್ಶನ್‌ಗೆ ಜೈಲಿನಲ್ಲಿ ಭಾರಿ ಬೆನ್ನು ನೋವು ಕಾಣಿಸಿಕೊಂಡಿದೆ. ಈ ಬಗ್ಗೆ ಸರ್ಕಾರಿ ಆಸ್ಪತ್ರೆ ವೈದ್ಯರೇ ವರದಿಯಲ್ಲಿ ತಿಳಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸಿಗೆ ಸಂಬಂಧಿಸಿದಂತೆ ಒಟ್ಟು 3,990ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಈ ಕೇಸಿನ ತೀರ್ಪು ಬರುವವರೆಗೂ ನಮ್ಮನ್ನು ಜಾಮೀನಿನ ಮೇಲೆ ಹೊರಗಿರಲು ಬಿಡಿ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೂ, ಅದನ್ನು ಕೋರ್ಟ್‌ನಿಂದ ತಿರಸ್ಕಾರ ಮಾಡಲಾಗಿದೆ. ಇದರಿಂದ ಬೆನ್ನು ನೋವಿನಿಂದ ಪರದಾಡುತ್ತಿದ್ದ ನಟ ದರ್ಶನ್‌ಗೆ ವೈದ್ಯರ ಸಲಹೆಯ ಮೇರೆಗೆ ಹಾಸಿಗೆ, ದಿಂಬು ಹಾಗೂ ಚೇರ್ ಕೊಡುವುದಕ್ಕೆ ಶಿಫಾರಸು ಮಾಡಲಾಗಿತ್ತು. ಇಂದು ಚಿತ್ರದುರ್ಗದಲ್ಲಿ ಬೆಳಗ್ಗೆ ರೇಣುಕಾಸ್ವಾಮಿ ಪತ್ನಿಗೆ ಗಂಡು ಮಗು ಹುಟ್ಟಿದೆ. ಈ ಕರೆ ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ಕೈದಿ ದರ್ಶನ್‌ಗೆ ಸಂಜೆ ವೇಳೆಗೆ ಜಿಲ್ಲಾ ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಮೆಡಿಕಲ್ ಬೆಡ್, ದಿಂಬು ಹಾಗೂ ಚೇರುಗಳನ್ನು ಕೊಡಲಾಗಿದೆ.

ಇದನ್ನೂ ಓದಿ: ದರ್ಶನ್ ಜಾಮೀನು ನಿರಾಕರಣೆಗೆ ಇಲ್ಲಿವೆ 3 ಕಾರಣಗಳು! ದಾಸನ ಪ್ಲಾನ್ ಬಿ ಏನು?

ಬೆಡ್, ದಿಂಬು ಕೊಡಲು ಹೇಳಿದ ವೈದ್ಯರಾರು?
ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವು ತಾಳಲಾಗುತ್ತಿಲ್ಲ ಎಂದು ದರ್ಶನ್ ಹೇಳಿದ್ದರಿಂದ ತಪಾಸಣೆಗೆ ಒಳಪಡಿಸಲು ಜೈಲಿನ ಸಿಬ್ಬಂದಿ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಅವರು ತಪಾಸಣೆ ಮಾಡಿದ್ದಾರೆ. ಈ ಬಗ್ಗೆ ನಿನ್ನೆ ಮೆಡಿಕಲ್ ಚೆಕಪ್ ವರದಿ ಬಂದಿದೆ. ಈ ಬಳಿಕ ವೈದ್ಯರು ದರ್ಶನ್‌ಗೆ ಬೆಡ್, ದಿಂಬು, ಚೇರು ನೀಡಲು ಸೂಚಿಸಿದ್ದರು. ಆದರೆ, ಇವುಗಳನ್ನು ಮನೆಯಿಂದ ತರಿಸಿಕೊಳ್ಳಲು ಅವಕಾಶ ನೀಡದೇ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿದ್ದ ಮೆಡಿಕಲ್ ಬೆಡ್, ದಿಂಬು ಹಾಗೂ ಚೇರನ್ನು ಕೊಡಲಾಗಿದೆ. ಇವುಗಳನ್ನು ಆಂಬುಲೆನ್ಸ್ ಮೂಲಕ ತಂದು ಜೈಲಿನೊಳಗಿದ್ದ ದರ್ಶನ್‌ಗೆ ಕೊಡಲಾಗಿದೆ.

Latest Videos
Follow Us:
Download App:
  • android
  • ios