ರೇಣುಕಾಸ್ವಾಮಿ ಕುಟುಂಬಕ್ಕೆ ₹5 ಲಕ್ಷ ಚೆಕ್ ನೀಡಿದ ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ಎಂಎನ್ ಸುರೇಶ್, ಹೇಳಿದ್ದೇನು?

ರೇಣುಕಾ ಸ್ವಾಮಿ ತಂದೆ ತಾಯಿ ದುಃಖ ನೋಡಿದ್ರೆ ನಮಗೂ ಕಣ್ಣೀರು ಬರುತ್ತದೆ. ಯಾರೇ ತಪ್ಪು ಮಾಡಿದ್ರೂ ಅದು ತಪ್ಪೇ. ಇಂತಹ ತಪ್ಪುಗಳನ್ನ ಚಿತ್ರರಂಗ ಖಂಡಿಸಿದೆ ಎಂದು ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್ ಹೇಳಿದರು. 

Renuka swamy murder case kannada film chamber president MN Suresh reacts at chitradurga rav

ಚಿತ್ರದುರ್ಗ (ಜೂ.15): ರೇಣುಕಾ ಸ್ವಾಮಿ ತಂದೆ ತಾಯಿ ದುಃಖ ನೋಡಿದ್ರೆ ನಮಗೂ ಕಣ್ಣೀರು ಬರುತ್ತದೆ. ಯಾರೇ ತಪ್ಪು ಮಾಡಿದ್ರೂ ಅದು ತಪ್ಪೇ. ಇಂತಹ ತಪ್ಪುಗಳನ್ನ ಚಿತ್ರರಂಗ ಖಂಡಿಸಿದೆ ಎಂದು ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್ ಹೇಳಿದರು. 

ಚಿತ್ರನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಕೊಲೆಯಾದ ಚಿತ್ರದುರ್ಗದ ರೇಣುಕಾ ಸ್ವಾಮಿ ಕುಟುಂಬಸ್ಥರನ್ನು ಇಂದು ಭೇಟಿಯಾಗಿ ಸಂತ್ವಾನ ಹೇಳಿ ಪಿಲ್ಮ್ ಚೇಂಬರ್ ವತಿಯಿಂದ ಅವರಿಗೆ 5 ಲಕ್ಷ ರೂ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವಿಲ್ಲಿಗೆ ಬಂದಿರೋದು ಸಂತಾಪಕ್ಕೆ ಅಷ್ಟೇ ಯಾವುದೇ ರಾಜೀ ಇಲ್ಲ. ನಮ್ಮ ಫಿಲ್ಮ್ ಚೇಂಬರ್‌ ವತಿಯಿಂದ ಐದು ಲಕ್ಷ ರೂಪಾಯಿ ನೀಡಿದ್ದೇವೆ. ಇಡೀ ಚಿತ್ರರಂಗ ಮುಂದೆಯೂ ಸಹ ನೊಂದ ಕುಟುಂಬದವರ ಜೊತೆ ನಿಲ್ಲಲಿದೆ. ಕುಟುಂಬಕ್ಕೆ ಐದು ಲಕ್ಷ ಸಾಂಕೇತಿಕವಾಗಿ ಕೊಡಲಾಗಿದೆ. ಮುಂದೆಯೂ ಇನ್ನೂ ಸಹಾಯ ಹೇಗೆ ಮಾಡಬೇಕು ಮಾಡ್ತಿವಿ. ಶಾಶ್ವತ ಪರಿಹಾರ ನೀಡಲು ನಿರ್ಧಾರ ಮಾಡುತ್ತೇವೆ. ಚಿತ್ರರಂಗ ಕ್ಷಮೆ ಕೇಳಲು ಇಲ್ಲಿಗೆ ಬಂದಿದ್ದೇವೆ ಇದನ್ನು ವೈಭವಿಕರಿಸಬಾರದು ಎಂದು ಮನವಿ ಮಾಡಿದರು. ಎಂದರು.

ಪತ್ನಿ ವಿಜಯಲಕ್ಷ್ಮೀ ಕೊಂಡ ಕಾರೇ ಬೇಕೆಂದು ಹಠ ಹಿಡಿದಿದ್ದ ಪವಿತ್ರಾಗೂ ಸೇಮ್ ಕಾರು ಕೊಡಿಸಿದ್ರಾ ದರ್ಶನ್..?

ರೇಣುಕಾ ಸ್ವಾಮಿ ಹತ್ಯೆ ಘಟನೆ ಬಗ್ಗೆ ಕಾನೂನಿನಡಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದೀಗ ರಾಷ್ಟ್ರೀಯ ಅಂತಾರಾಷ್ಟ್ರೀಯ ಸುದ್ದಿಯಾಗಿದೆ. ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ಬಂದಿದೆ ಎಂದರು. ಇನ್ನು ಇದೇ ವೇಳೆ ದರ್ಶನ್ ಸಿನಿಮಾ ಬ್ಯಾನ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ನಿರ್ಧಾರ ನಾವು ಮಾಡೋಕೆ ಆಗೊಲ್ಲ. ಕಲಾವಿದರ ಸಂಘ, ನಿರ್ಮಾಪಕರ ಸಂಘ, ಫ್ಯಾನ್ಸ್ ಪಾಲೋವರ್ಸ್ ಕೂಡ ಇದೆ. ಅಲ್ಲಿ ಸಭೆ ಮಾಡಿದ ನಂತರ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದರು.

ರಿವರ್ಸ್‌ ಗೇರ್ ಹಾಕಿದ ಮಹಿಳೆ; ಇಳಿಜಾರಿಗೆ ಹಿಂದಕ್ಕೆ ಚಲಿಸಿ ಕಿಯಾ ಕಾರು ಪಲ್ಟಿ!

ಇ ಹಿಂದೆಯೂ ರಾಜಕುಮಾರ್ ವಿಷ್ಣುವರ್ಧನ್ ಶಂಕರ್‌ನಾಗ್ ಅಂಬರೀಶ್‌ಗೂ ಫ್ಯಾನ್ ಇತ್ತು. ಆದರೆ ಇತ್ತೀಚಿನ ಫ್ಯಾನ್ಸ್ ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ಆ ರೀತಿ ಯಾರೂ ಪ್ರಚೋದನೆಗೆ ಒಳಗಾಗಬಾರದು. ಆ ರೀತಿ ಒಳಗಾಗಿಯೇ ಇಂತಹ ಘಟನೆ ನಡೆದುಹೋಗಿದೆ. ಕೊರೊನಾ ಬಳಿಕ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಚಿತ್ರರಂಗ, ವಾಣಿಜ್ಯ ಮಂಡಳಿ ಬಗ್ಗೆ ದೂಷಣೆ ಮಾಡಬೇಡಿ ಎಂದರು.

Latest Videos
Follow Us:
Download App:
  • android
  • ios