Asianet Suvarna News Asianet Suvarna News

Basavalingaiah Hiremath Passed Away: ಕಂಚಿನಕಂಠದ ಗಾಯಕ ಬಸವಲಿಂಗಯ್ಯ ಹಿರೇಮಠ ಇನ್ನಿಲ್ಲ

*  ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಬಸವಲಿಂಗಯ್ಯ ಹಿರೇಮಠ ನಿಧನ
*  ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಬಸವಲಿಂಗಯ್ಯ ಹಿರೇಮಠ 
*  ಅಪಾರ ಬಂಧು ಬಳಗವನ್ನ ಅಗಲಿದ ಬಸವಲಿಂಗಯ್ಯ

Renowned Folk Artist Basavalingaiah Hiremath Passes Away in Bengaluru at the age of 63 grg
Author
Bengaluru, First Published Jan 9, 2022, 9:38 AM IST

ಬೆಂಗಳೂರು(ಜ.09): ಖ್ಯಾತ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ(63)(Basavalingaiah Hiremath)ಅವರು ಇಂದು(ಭಾನುವಾರ) ಬೆಳಗಿನ ಜಾವ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ(Passed Away). ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಬಸವಲಿಂಗಯ್ಯ ಹಿರೇಮಠ ಅವರನ್ನು ಕಳೆದ ಕೆಲವು ದಿನಗಳ ಹಿಂದೆ ಮಣಿಪಾಲ ಆಸ್ಪತ್ರೆಯಲ್ಲಿ(Manipal Hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. 

ಬಸವಲಿಂಗಯ್ಯ ಹಿರೇಮಠ ಅವರು ಪತ್ನಿ ವಿಶ್ವೇಶ್ವರಿ, ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ. ಪತ್ನಿ ವಿಶ್ವೇಶ್ವರಿ ಸಹ ಜಾನಪದ ಕಲಾವಿದೆಯಾಗಿದ್ದು ಜೊತೆಯಾಗಿಯೇ ಸಂಗೀತ ಕಾರ್ಯಕ್ರಮಗಳನ್ನ ನೀಡುತ್ತಿದ್ದರು. 
ಬೆಳಗಾವಿ(Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರು ಗ್ರಾಮದಲ್ಲಿ 1959 ರಲ್ಲಿ ಜನಿಸಿದ ಬಸವಲಿಂಗಯ್ಯ ಹಿರೇಮಠ ಅವರು ಎಂಎ(ಜಾನಪದ) ಸ್ನಾನತಕೋತ್ತರ ಪದವಿಯನ್ನ ಪಡೆದಿದ್ದರು. ತಮ್ಮ ಐದನೇ ವಯಸ್ಸಿನಲ್ಲಿಯೇ ಹಾರ್ಮೋನಿಯಮ್‌ ನುಡಿಸುತ್ತ ಭಜನಾ ಸಂಗೀತ ಕಲಿತಿದ್ದರು. ಶಾಲಾ, ಕಾಲೇಜು ದಿನಗಳಲ್ಲಿ ಗ್ರಾಮೀಣ ರಂಗಭೂಮಿ ನಾಟಕಗಳಲ್ಲಿ ನಟನಾಗಿ, ಹಾಡುಗಾರನಾಗಿ ರಾಜ್ಯಾದ್ಯಂತ ಸಂಚರಿಸಿ ಪ್ರದರ್ಶನ ನೀಡಿದ್ದರು. ಇನ್ನು ಕನ್ನಡದ ಮೂಡಲಮನೆ ಧಾರವಾಹಿಯಲ್ಲಿ ನಟಿಸಿ ಬಹಳಷ್ಟು ಖ್ಯಾತಿಯನ್ನ ಗಳಿಸಿದ್ದರು. ಎದೆತುಂಬಿ ಹಾಡುವೆನು ಸಂಗೀತ ಕಾರ್ಯಕ್ರಮದಲ್ಲಿ ಎಸ್‌.ಪಿ.ಬಾಲಸುಬ್ರಮಣ್ಯಂ ಅವರೊಂದಿಗೆ ನಿರ್ಣಾಯಕರಾಗಿ ಭಾಗವಹಿಸಿದ್ದರು. ಕರ್ನಾಟಕ ವಾರ್ತಾ ಇಲಾಖೆಯಿಂದ ಧಾರವಾಡ ಹಾಗೂ ಕಲಬುರಗಿ ವಿಭಾಗ ಮಟ್ಟದ ಬೀದಿ ನಾಟಕ ತರಬೇತಿ ಕಾರ್ಯಾಗಾರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

Sindhutai Sapkal Passes Away: 1050 ಅನಾಥ ಮಕ್ಕಳ ಪೋಷಿಸಿದ್ದ ಪದ್ಮಶ್ರೀ ಸಿಂಧುತಾಯಿ ನಿಧನ

ಪ್ರಶಸ್ತಿಗಳು: 

ಕರ್ನಾಟಕ ಜಾನಪದ ಪ್ರವರ್ಧಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2005), ಅತ್ತಿಮಬ್ಬೆ ಪ್ರಶಸ್ತಿ, ಕೆ.ಅರ್‌. ಲಿಂಗಪ್ಪ, ಅಭಿನವ ಶರೀಫ, ಕಂಚಿನಕಂಠದ ಗಾಯಕ, ಗಾನ ಕೋಗಿಲೆ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರನ್ನ ಅರಸಿ ಬಂದಿದ್ದವು.

ಬಸವಲಿಂಗಯ್ಯ ಹಿರೇಮಠ ನಿಧನಕ್ಕೆ ಶಿವಾಚಾರ್ಯ ಶ್ರೀ ಸಂತಾಪ 

ಬಸವಲಿಂಗಯ್ಯ ಹಿರೇಮಠ ನಮ್ಮ ನಡುವಿನ ಅಪರೂಪದ ನಟ, ಜಾನಪದ ಗಾಯಕ. ಅವರದು ಕಂಚಿನ ಕಂಠ. ಹಾಡುತ್ತಿದ್ದರೆ ಇನ್ನೂ ಕೇಳಬೇಕು ಎನ್ನುವ ಕಂಠಸಿರಿ. ಸಣ್ಣಾಟ, ದೊಡ್ಡಾಟ, ಶ್ರೀಕೃಷ್ಣ ಪಾರಿಜಾತ, ಸಂಗ್ಯಾ ಬಾಳ್ಯಾ ಹೀಗೆ ಲೆಕ್ಕವಿಲ್ಲದಷ್ಟು ನಾಟಕಗಳಿಗೂ ಸಂಗೀತ ಸಂಯೋಜಿಸಿ ದಣಿವಿಲ್ಲದೆ ಹಾಡಿದವರು. ಕಿರುತರೆಯಲ್ಲೂ ಹಾಡಿ, ಪಾತ್ರ ಅಭಿನಯಿಸಿ ಪ್ರೇಕ್ಷಕರ ಮನ ಸೂರೆಗೊಂಡವರು. ಅವರ ಧರ್ಮಪತ್ನಿ ವಿಶ್ವೇಶ್ವರಿ ಸಹ ಅತ್ಯತ್ತಮ ನಟಿ ಮತ್ತು ನಿರ್ದೇಶಕಿ. ಅವರಿಬ್ಬರದೂ ಅಪರೂಪದ ಜೋಡಿ. ಸಂಸಾರ ಮತ್ತು ರಂಗ ಸಂಸಾರವನ್ನು ಎಲ್ಲರೂ ಮೆಚ್ಚುವಂತೆ ನಡೆಸಿಕೊಂಡು ಬಂದಿದ್ದರು ಅಂತ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು(Panditaradhya Shivacharya Swamiji) ಹಿರೇಮಠ ಅವರೊಂದಿಗಿನ ನೆನಪುಗಳನ್ನ ಮೆಲುಕು ಹಾಕಿದ್ದಾರೆ.

ನಮ್ಮೊಂದಿಗೆ ಮಧುರ ಸಂಬಂಧ ಇಟ್ಟುಕೊಂಡವರು. ನಮ್ಮಲ್ಲಿ ನಾಟಕ, ಸಂಗೀತ ನಿರ್ದೇಶನ ಮಾಡಿ ಎಲ್ಲರ ಮೆಚ್ಚುಗೆ ಪಡೆದವರು. ಧಾರವಾಡವನ್ನೇ ಕೇಂದ್ರವಾಗಿಸಿಕೊಂಡು ರಂಗಭೂಮಿಗೆ ದುಡಿಯುತ್ತಿದ್ದರು. ಅಂತಹ ಹಾಡುಗಾರ ಇನ್ನಿಲ್ಲವೆಂದರೆ ನಂಬಲಾಗುತ್ತಿಲ್ಲ. ಅವರ ಅಗಲುವಿಕೆಯಿಂದ ಜಾನಪದ ರಂಗಭೂಮಿಗೆ ಅಪಾರ ನಷ್ಟ ಎಂದರೆ ಅತಿಶಯೋಕ್ತಿ ಆಗದು. ಆದರೂ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದ ಎಲ್ಲ ಸದಶ್ಯರಿಗೂ ಬಸವಾದಿ ಶಿವಶರಣರು ಕರುಣಿಸಲಿ ಎಂದು ಹಾರೈಸುತ್ತೇವೆ ಅಂತ ಶ್ರೀಗಳು ಸಂತಾಪ(Condolences) ಸೂಚಿಸಿದ್ದಾರೆ. 
 

Follow Us:
Download App:
  • android
  • ios