Asianet Suvarna News Asianet Suvarna News

Sindhutai Sapkal Passes Away: 1050 ಅನಾಥ ಮಕ್ಕಳ ಪೋಷಿಸಿದ್ದ ಪದ್ಮಶ್ರೀ ಸಿಂಧುತಾಯಿ ನಿಧನ

* 1050 ಅನಾಥ ಮಕ್ಕಳನ್ನು ದತ್ತು ಪಡೆದಿದ್ದ ‘ಅನಾಥ ಮಕ್ಕಳ ತಾಯಿ’ 

* ಪದ್ಮಶ್ರೀ ಪುರಸ್ಕೃತ ಸಿಂಧುತಾಯಿ ಸಪ್ಕಾಲ್ ನಿಧನ

* ಸ್ವಂತ ಪ್ರರಿಶ್ರಮದಲ್ಲಿ ಹಂತ ಹಂತವಾಗಿ ಬೆಳೆದ ಸಿಂಧುತಾಯಿ

Mother of Orphans Padma Shri Awardee Sindhutai Sapkal Dies At Age 73 pod
Author
Bangalore, First Published Jan 5, 2022, 9:27 AM IST

ಪುಣೆ(ಜ.05): 1050 ಅನಾಥ ಮಕ್ಕಳನ್ನು ದತ್ತು ಪಡೆದಿದ್ದ ‘ಅನಾಥ ಮಕ್ಕಳ ತಾಯಿ’ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪುರಸ್ಕೃತ ಸಿಂಧುತಾಯಿ ಸಪ್ಕಾಲ್ (Padma Shri Awardee Sindhutai Sapkal) ಅವರು ಮಂಗಳವಾರ ಇಲ್ಲಿನ ಪುಣೆಯ ಗ್ಯಾಲಕ್ಷಿ ಕೇರ್​ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

1948ರ ನವೆಂಬರ್​ 14ರಂದು ಮಹಾರಾಷ್ಟ್ರದ ವರ್ಧಾ (Wardha, Maharashtra) ಜಿಲ್ಲೆಯ ಅತ್ಯಂತ ಕಡುಬಡ ಕುಟುಂಬದಲ್ಲಿ ಜನಿಸಿದ್ದ ಸಿಂಧುತಾಯಿ 4ನೇ ತರಗತಿಗೇ ಶಾಲೆ ತ್ಯಜಿಸಿದ್ದರು. 12ನೇ ವಯಸ್ಸಿಗೇ ವಿವಾಹವಾಗಿ ಮೂರು ಮಕ್ಕಳಿಗೆ ಜನ್ಮ ನೀಡಿದರು. ಗರ್ಭಿಣಿಯಾಗಿದ್ದಾಗಲೇ ಪತಿ ಅವರನ್ನು ತೊರೆದರು. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ತವರು ಮನೆಯವರೂ  ಕೈ ಹಿಡಿಯಲಿಲ್ಲ, ಬದಲಾಗಿ ಭಿಕ್ಷೆ ಬೇಡುವಂತೆ ಹೇಳಿ ಹೊರಗಟ್ಟಿದ್ದರು. 

ಆದರೂ ತಮ್ಮ ಸ್ವಂತ ಪ್ರರಿಶ್ರಮದಲ್ಲಿಅನಾಥಾಶ್ರಮಗಳಲ್ಲಿ ಕೆಲಸ ಮಾಡಿ ಹಂತ ಹಂತವಾಗಿ ಬೆಳೆದು 1050 ಅನಾಥ ಮಕ್ಕಳ ಪೋಷಣೆ ಮಾಡಿದ್ದರು.

ಸಿಂಧುತಾಯಿ ಜೀವನ ಎಲ್ಲರಿಗೂ ಪ್ರೇರಣೆ

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಡಾ. ಸಿಂಧೂತಾಯಿ ಸಪ್ಕಾಲ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಸಿಂಧುತಾಯಿ ಅವರ ಜೀವನದಲ್ಲಿ ತೆಗೆದುಕೊಂಡ ಧೈರ್ಯ, ಸಮರ್ಪಣಾ ಭಾವ ಮತ್ತು ಮಾಡಿದ ಸೇವೆ ಸ್ಪೂರ್ತಿದಾಯಕ.ಅವರು  ಅನಾಥರು, ಆದಿವಾಸಿಗಳು ಮತ್ತು ಬಡ ಜನರನ್ನು ಪ್ರೀತಿಸುತ್ತಿದ್ದರು ಹಾಗೂ ಅವರ ಸೇವೆ ಮಾಡುತ್ತಿದ್ದಳು. ಅವರ ಕುಟುಂಬ ಮತ್ತು ಅನುಯಾಯಿಗಳಿಗೆ ನನ್ನ ಸಂತಾಪ ಎಂದಿದ್ದಾರೆ.

ಸಿಂಧುತಾಯಿ ನಿಧನದಿಂದ ನೋವು

ಡಾ.ಸಿಂಧೂತಾಯಿ ಸಪ್ಕಾಲ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ.ಸಿಂಧೂತಾಯಿ ಸಪ್ಕಲ್ ಅವರು ಸಮಾಜಕ್ಕೆ ಸಲ್ಲಿಸಿದ ಉದಾತ್ತ ಸೇವೆಯನ್ನು ಸ್ಮರಣೀಯ. ಅವರು ಅಂಚಿನಲ್ಲಿರುವ ಸಮುದಾಯಗಳ ನಡುವೆಯೂ ಸಾಕಷ್ಟು ಕೆಲಸ ಮಾಡಿದರು. ಅವರ ಸಾವಿನಿಂದ ನನಗೆ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ.

ಒಟ್ಟಿನಲ್ಲಿ ಈ ಹೆಣ್ಣು ಮಾಡಿದ ಸಾಧನೆ ಎಲ್ಲರಿಗೂ ಮಾದರಿಯಾಗಿದ್ದು ಸುಳ್ಳಲ್ಲ. ಜೀವನದಲ್ಲಿ ಏನೇ ಕಷ್ಟ ಬಂದರೂ ಎದುರಿಸಬೇಕೆಂಬ ಛಲ ತುಂಬಿದ ಈ ತಾಯಿ, ತಮ್ಮ ಕಡೇ ಉಸಿರುವವರೆಗೂ ಸಮಾಜಕ್ಕೆ ತಮ್ಮ ಜೀವನವನ್ನು ಮೀಲಸಿಟ್ಟರು. ಇವರಂಥವರು ಮತ್ತೆ ಹುಟ್ಟಿ ಬರಲಿ. ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ. 

Follow Us:
Download App:
  • android
  • ios