ರಾಜ್ಯದ 50 ಲಕ್ಷ ರೈತರಿಗೆ PM-Kisan ಹಣ ಬಿಡುಗಡೆ

  • 50 ಲಕ್ಷ ರೈತರಿಗೆ ಪಿಎಂ ಕಿಸಾನ್‌ ಹಣ
  • ಪ್ರಧಾನಿಯಿಂದ 12ನೇ ಕಂತು 1007 ಕೋಟಿ ರು. ರಾಜ್ಯಕ್ಕೆ ಬಿಡುಗಡೆ
Release PM Kisan funds to 50 lakh farmers of the state rav

 ಬೆಂಗಳೂರು (ಅ.18) : ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 12ನೇ ಕಂತಿನ ನೆರವನ್ನು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ್ದು, ರಾಜ್ಯದ 50.36 ಲಕ್ಷ ರೈತರಿಗೆ 1007.26 ಕೋಟಿ ರು. ವರ್ಗಾವಣೆ ಆಗಲಿದೆ. ಈ ಸಂಬಂಧ ದೆಹಲಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳಿಗೂ ಹಣ ಬಿಡುಗಡೆಗೆ ಚಾಲನೆ ನೀಡಿದರು. ವಿಧಾನಸೌಧದಲ್ಲಿ ಸಭೆ ನಡೆಸುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಚುವಲ್‌ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಹಲವು ಸಚಿವರು, ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಹಾಜರಿದ್ದರು.

PM - KISAN ಯೋಜನೆ: ರೈತರ ಬ್ಯಾಂಕ್‌ ಖಾತೆಗೆ 16 ಸಾವಿರ ಕೋಟಿ ರೂ. ವರ್ಗಾಯಿಸಿದ ಪ್ರಧಾನಿ Modi

ಮಾಚ್‌ರ್‍ 2019ರಿಂದ ಜುಲೈ 2022 ರವರೆಗೆ ರಾಜ್ಯದ 53.83 ಲಕ್ಷ ರೈತ ಕುಟುಂಬಗಳು ಕೇಂದ್ರ ಸರ್ಕಾರದಿಂದ ಒಟ್ಟು 9968.57 ಕೋಟಿ ರು. ಆರ್ಥಿಕ ಸಹಾಯಧನ ಪಡೆದಿವೆ. 2022-23ನೇ ಸಾಲಿನಲ್ಲಿ 1251.98 ಕೋಟಿ ರು. ವರ್ಗಾವಣೆಯಾಗಿದೆ.

ರಾಜ್ಯ ಸರ್ಕಾರವು ಕೇಂದ್ರದಿಂದ ಅನುಮೋದಿಸಲ್ಪಟ್ಟರೈತ ಕುಟುಂಬಗಳಿಗೆ 2019ರಿಂದ ಇಲ್ಲಿಯವರೆಗೆ 4821.37 ಕೋಟಿ ರು. ಆರ್ಥಿಕ ಸಹಾಯಧನ ನೀಡಿದೆ. 2022-23ನೇ ಸಾಲಿನಲ್ಲಿ 956.71 ಕೋಟಿ ರು. ಆರ್ಥಿಕ ನೆರವನ್ನು ರೈತರ ಬ್ಯಾಂಕ್‌ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲು ಮಂಜೂರಾತಿ ನೀಡಲಾಗಿದೆ.

ಯೋಜನೆಯಡಿ ಎಲ್ಲ ಪಾವತಿಗಳನ್ನು ಸಾಧ್ಯವಾದಷ್ಟುಆಧಾರ್‌ ಆಧಾರಿತ ಡಿಬಿಟಿ ಮುಖಾಂತರ ಮಾಡಬೇಕೆಂದು ಕೇಂದ್ರ ಸರ್ಕಾರ ಬಯಸುತ್ತದೆ. ರಾಜ್ಯಗಳ ಪೈಕಿ, ಕರ್ನಾಟಕವು ಅತಿ ಹೆಚ್ಚು ಶೇಕಡಾವಾರು (96%) ಆಧಾರ್‌ ಆಧಾರಿತ ವಹಿವಾಟುಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪ್ರಶಸ್ತಿ ದೊರೆತಿದೆ. ನಿರಂತರ ಮೇಲ್ವಿಚಾರಣೆಯ ಭಾಗವಾಗಿ ಫಲಾನುಭವಿ ರೈತ ಕುಟುಂಬಗಳ ಅರ್ಹತೆಯನ್ನು ನಿಯತಕಾಲಿಕವಾಗಿ ಪರಿಶೀಲಿಸಲಾಗುತ್ತಿದೆ.

Bharat ಬ್ರ್ಯಾಂಡ್‌ ಯೂರಿಯಾ ನಾಳೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ವರ್ಷ ಪಾವತಿ ಮೊತ್ತ ( ಕೋಟಿ ರು.)

ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರ

  • 2018-19 3.96 0.00
  • 2019-20 2769.50 905.75
  • 2020-21 3113.86 983.80
  • 2021-22 2829.27 1975.12
  • 2022-23 1251.98 956.71
  • ಒಟ್ಟು 9968.57 4821.37
Latest Videos
Follow Us:
Download App:
  • android
  • ios