ಶಕ್ತಿ ಯೋಜನೆ ಬಸ್‌ಗಳಿಗೆ 2,000 ಖಾಸಗಿ ಡ್ರೈವರ್‌ಗಳ ನೇಮಕ: ರಸ್ತೆಗಿಳಿಯಲಿವೆ ದುರಸ್ತಿಗೊಂಡ 500 ಬಸ್‌ಗಳು

ರಾಜ್ಯದಲ್ಲಿ ಶಕ್ತಿ ಯೋಜನೆಗೆ ಬಸ್‌ಗಳ ಕೊರತೆ ಉಂಟಾಗಿದ್ದು, 500 ಬಸ್‌ಗಳನ್ನು ದುರಸ್ತಿಗೊಳಿಸಿದೆ. ಆದರೆ, ಈಗ ಬಸ್‌ಗಳ ಚಾಲನೆಗೆ ಡ್ರೈವರ್‌ಗಳ ಕೊರತೆ ಎದುರಾಗಿದ್ದು, ಖಾಸಗಿ ಚಾಲಕರ ನೇಮಕಕ್ಕೆ ಕೆಎಸ್‌ಆರ್‌ಟಿಸಿ ಮುಂದಾಗಿದೆ. 

Recruitment of private drivers for Shakti Yojana KSRTC buses 500 repaired buses to run roads sat

ಬೆಂಗಳೂರು (ಆ.07): ರಾಜ್ಯದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಮೊದಲ ಗ್ಯಾರಂಟಿ ಯೋಜನೆಯಾದ "ಶಕ್ತಿ ಯೋಜನೆ"ಗೆ (ಮಹಿಳೆಯರಿಗೆ ಸಾರಿಗೆ ಇಲಾಖೆ ಬಸ್‌ಗಳಲ್ಲಿ ಉಚಿತ ಪ್ರಯಾಣ) ಬಸ್‌ಗಳ ಕೊರತೆ ಎದುರಾಗಿತ್ತು. ಆದರೆ, ಸಾರಿಗೆ ಇಲಾಖೆಯಲ್ಲಿ ಈಗಾಗಲೇ ಹಳೆಯ 900ಕ್ಕೂ ಅಧಿಕ ಬಸ್‌ಗಳನ್ನು ದುರಸ್ತಿಗೊಳಿಸಿ ಮರು ಚಾಲನೆಗೆ ಸಿದ್ಧತೆ ಮಾಡಿಕೊಂಡಿದೆ. ಈಗ ಬಸ್‌ಗಳಿಗೆ ಡ್ರೈವರ್‌ ಕೊರತೆ ಎದುರಾಗಿದ್ದು, ಇದರ ಬೆನ್ನಲ್ಲಿಯೇ ಕೆಎಸ್‌ಆರ್‌ಟಿಸಿ (ಸಾರಿಗೆ ಇಲಾಖೆ) ನಿಗಮದಿಂದ ಖಾಸಗಿ ಡ್ರೈವರ್‌ಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಹೌದು, ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೊಂಡ ನಂತರ, ಶಕ್ತಿ ಒತ್ತಡ ನಿವಾರಣೆಗೆ ಖಾಸಗಿ ಡ್ರೈವರ್ ಗಳ‌ ನೇಮಕಕ್ಕೆ ಕೆಎಸ್ಆರ್‌ಟಿಸಿ ಇಲಾಖೆ ಮುಂದಾಗಿದೆ. ಡ್ರೈವರ್ ಗಳ ಕೊರತೆ ನೆಪವೊಡ್ಡಿ ಔಟ್ ಸೋರ್ಸ್ ಏಜೆನ್ಸಿ ಯಿಂದ ಚಾಲಕರ ನೇಮಕ ಪ್ರಕ್ರಿಯೆ ಮಾಡಲಾಗುತ್ತಿದೆ. ಶಕ್ತಿ ಯೋಜನೆ ಹಿನ್ನೆಲೆ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಚಾಲಕರಿಗೆ ಕೆಲಸದ ಒತ್ತಡ ಹೆಚ್ಚಳವಾಗಿದೆ. ಆದ್ದರಿಂದ ಅವರಿಗೆ ಕೆಲಸದ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಖಾಸಗಿ ಚಾಲಕರ ಕೈಗೆ ಸಾರಿಗೆ ಇಲಾಖೆಯ ಬಸ್‌ಗಳನ್ನು ಕೊಡುವುದಕ್ಕೆ ಮುಂದಾಗಿದೆ. ಕಳೆದ,  2-3 ವರ್ಷಗಳಿಂದ ಚಾಲಕ, ನಿರ್ವಾಹಕರು ಹಾಗೂ ಇತರೆ ಸಿಬ್ಬಂದಿಯ ನೇಮಕ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಚಾಲಕರ ಕೊರತೆ ಎದುರಾಗಿದ್ದು, ಈಗ ಖಾಸಗಿ ಚಾಲಕರನ್ನು ನೇಮಕ ಮಾಡಿಕೊಳ್ಳಲಲು ಮುಂದಾಗಿದೆ.

ರೈತನಿಗೆ ಹೆಣ್ಣು ಕೊಡೊಲ್ಲವೆಂದವರಿಗೆ ಸವಾಲು: ಟೊಮೆಟೊ ಮಾರಿ ಹೊಸ ಕಾರಿನಲ್ಲಿ ಕನ್ಯಾ ಕೇಳೋಕೆ ಹೋಗ್ತೀನೆಂದ ರೈತರು

528 ಬಸ್‌ಗಳಿಗೆ ಡ್ರೈವರ್‌ಗಳ ನೇಮಕ:  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಗುಜರಿ ಸೇರಬೇಕಿದ್ದ ಹಳೆಯ ಬಸ್‌ಗಳಿಗೆ ಕಾಯಕಲ್ಪ ನೀಡಿದೆ. ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆಗೆ ಬಸ್‌ಗಳ ಕೊರತೆಯಾದ ಹಿನ್ನೆಲೆಯಲ್ಲಿ 10 ಲಕ್ಷ ಕಿ.ಮೀ.ಗಳ ಸಂಚಾರ ಪೂರೈಸಿದ 528 ಬಸ್‌ಗಳನ್ನು ಪುನಶ್ಚೇತನಗೊಳಿಸಿ ರಸ್ತೆಗಿಳಿಸುತ್ತಿದೆ. ಈ ಬಸ್‌ಗಳಿಗೆ ಈಗ ಹೊಸ ಖಾಸಗಿ ಡ್ರೈವರ್‌ಗಳನ್ನು ನೇಮಕ ಮಾಡಿ ಬಸ್‌ಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿದೆ. ಜೊತೆಗೆ, ಶಕ್ತಿ ಯೋಜನೆಯಡಿ ಮಹಿಳೆಯರು ಬಸ್‌ಗಳ ಕೊರತೆ ಎದುರಿಸುತ್ತಿದ್ದು, ಈ ಸಮಸ್ಯೆ ಪರಿಹಾರಕ್ಕೂ ಅನುಕೂಲ ಆಗಲಿದೆ.

ಚಾಲಕರ ಕೊರತೆಯಿಂದ ಟ್ರಿಪ್‌ಗಳ ಸಂಖ್ಯೆ ಕಡಿತ: ಇನ್ನು ಚಾಲಕರಿಲ್ಲದೆ ಎಲ್ಲ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಾಗದೆ ಹೆಣಗಾಡುತ್ತಿರುವ ಕೆಎಸ್‌ಆರ್‌ಟಿಸಿ, ಭಾರಿ ವಾಹನ, ಸರಕು ಸಾಗಣೆ ವಾಹನ ಚಲಾಯಿಸುವರನ್ನ ನೇಮಕಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಚಾಲಕರ ಕೊರತೆಯಿಂದಾಗಿ ಮಾರ್ಗ ಮತ್ತು ಟ್ರಿಪ್‌ಗಳ ಸಂಖ್ಯೆಯನ್ನೇ ಕಡಿತ ಮಾಡಿದೆ. ಸಮಸ್ಯೆ ಪರಿಹಾರಕ್ಕೆ ತಾತ್ಕಾಲಿಕವಾಗಿ 2000 ಸಾವಿರ ಖಾಸಗಿ ಡ್ರೈವರ್ ಗಳ ನೇಮಕಕ್ಕೆ ಪ್ಲಾನ್ ಮಾಡಲಾಗಿದೆ. ಆದರೆ, ಕೆಎಸ್ಆರ್ಟಿಸಿ 
ಖಾಸಗಿ ಡ್ರೈವರ್ ಗಳ ನೇಮಕಕ್ಕೆ ಸಾರಿಗೆ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Bengaluru: ಫ್ರೀ ಟಿಕೆಟ್‌ ತೆಗೆದುಕೊಳ್ಳದೇ ಮಾರ್ಡನ್‌ ಗರ್ಲ್‌ ರಂಪಾಟ; ಕಂಡಕ್ಟರ್‌ಗೆ ಅವಾಜ್‌

ಖಾಸಗಿ ಚಾಲಕರ ನೇಮಕಕ್ಕೆ ನಿಗಮದಲ್ಲೇ ಅಪಸ್ವರ: ಸಾರಿಗೆ ಇಲಾಖೆಯಿಂದ ಚಾಲಕರ ನೇಮಕಕ್ಕೆ ಹಣಕಾಸಿನ ಅನುಮೋದನೆಯನ್ನು ಸರ್ಕಾರ ನೀಡದ ಹಿನ್ನೆಲೆಯಲ್ಲಿ, ಕೆಎಸ್‌ಆರ್‌ಟಿಸಿಯಿಂದ ಗುತ್ತಿಗೆ ಆಧಾರದ ಮೇಲೆ ಖಾಸಗಿ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಸಾರಿಗೆ ನಿಗಮದ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಳ ಆಗಿದೆ. ಖಾಸಗಿ ಚಾಲಕರ ನೇಮಕ ಮಾಡಿಕೊಂಡಲ್ಲಿ ಬಸ್‌ಗಳನ್ನು ಯಾವ ಸ್ಥಿತಿಯಲ್ಲಿ ಇಡುತ್ತಾರೆ, ಅವರಿಗೆ ಯಾವ ಜವಾಬ್ದಾರಿ ಇರುತ್ತದೆ. ಹೆಚ್ಚಿನ ಜವಾಬ್ದಾರಿ ವಹಿಸದೇ ಬಸ್‌ಗಳ ಸ್ಥಿತಿಯನ್ನು ಹದಗೆಡಿಸಲಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ. ಹೀಗಾಗಿ, ಸರ್ಕಾರ ಕೂಡಲೇ ಖಾಯಂ ನೌಕರರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸಾರಿಗೆ ನೌಕರರ ಸಂಘಟನೆಯಿಂದ ಆಗ್ರಹ ಮಾಡಲಾಗಿದೆ.

Latest Videos
Follow Us:
Download App:
  • android
  • ios