ರೈತನಿಗೆ ಹೆಣ್ಣು ಕೊಡೊಲ್ಲವೆಂದವರಿಗೆ ಸವಾಲು: ಟೊಮೆಟೊ ಮಾರಿ ಹೊಸ ಕಾರಿನಲ್ಲಿ ಕನ್ಯಾ ಕೇಳೋಕೆ ಹೋಗ್ತೀನೆಂದ ರೈತರು

ರೈತನಿಗೆ ಹೆಣ್ಣು ಕೊಡುವುದಿಲ್ಲ ಎಂಬುದನ್ನು ಸವಾಲಾಗಿ ಸ್ವೀಕರಿಸಿ 12 ಎಕರೆಯಲ್ಲಿ ಟೊಮೆಟೊ ಬೆಳದು 1 ಕೋಟಿ ರೂ. ಗಳಿಸಿದ ರೈತ ಕನ್ಯೆ ನೋಡುವುದಕ್ಕೆ ಹೊಸ ಕಾರು ಖರೀದಿಸಿ ಹೋಗುವುದಾಗಿ ಸವಾಲು ಹಾಕಿದ್ದಾನೆ. 

Tomato grower chamarajanagar millionaire farmer going on new Mahindra car for marriage proposal sat

ಚಾಮರಾಜನಗರ (ಆ.07): ರಾಜ್ಯದಲ್ಲಿ ರೈತಾಪಿ ಕೆಲಸ ಮಾಡುವ ಯುವಕರಿಗೆ ಹೆಣ್ಣು ಕೊಡೊಲ್ಲ ಎಂದು ವಾಪಸ್‌ ಕಳಿಸಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಯುವಕನೊಬ್ಬ ಈಗ 12 ಎಕರೆಯಲ್ಲಿ ಟೊಮೆಟೊ ಬೆಳೆದು ಕೋಟ್ಯಾಧಿಪತಿ ಆಗಿದ್ದಾನೆ. ಅಲ್ಲದೇ, ಟೊಮೆಟೊ ಮಾರಿದ ಹಣದಲ್ಲಿ ಮಹೇಂದ್ರ XUV ಹೊಸ ಕಾರು ಖರೀದಿಸಿ ಅದರಲ್ಲಿಯೇ ಹೆಣ್ಣು ಕೇಳೋದಕ್ಕೆ ಹೋಗುತ್ತೇನೆ ಎಂದು ಸವಾಲು ಹಾಕಿದ್ದಾನೆ. 

ಇಡೀ ದೇಶದಲ್ಲಿ ಟೊಮೆಟೊ ಬೆಲೆಗೆ ಬಂಗಾರದ ಬೆಲೆ ಬಂದಿದೆ. ಇನ್ನು ಟೊಮೆಟೊ ಬೆಳೆದ ಎಲ್ಲ ರೈತರೂ ಕೂಡ ಲಕ್ಷಾಧಿಪತಿ ಮತ್ತು ಕೋಟ್ಯಾಧಿಪತಿಗಳಾಗಿದ್ದಾರೆ. ಆದರೆ, ರೈತರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗು ಚಾಮರಾಜನಗರ ರೈತನಿಗೂ ಎದುರಾಗಿತ್ತು. ಹೆಣ್ಣು ಕೇಳುವುದಕ್ಕೆ ಬೈಕ್‌ನಲ್ಲಿ ಹೋದಾಗ ರೈತನಿಗೆ ಹೆಣ್ಣು ಕೊಡುವುದಿಲ್ಲ ಎಂದು ಹೇಳಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ್ದ ರೈತರ ಯುವಕ 12 ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದಾನೆ. ಅದರಲ್ಲಿಯೂ ಕೇವಲ 6 ತಿಂಗಳಲ್ಲಿ ಟೊಮೆಟೊ ಬೆಳೆದು 1 ಕೋಟಿ ರೂ.ಗಿಂತ ಅಧಿಕ ಆದಾಯ ಗಳಿಸಿದ ರೈತ, ಹೊಸ ಮಹೇಂದ್ರ ಎಕ್ಸ್‌ಯುವಿ 700 ಕಾರನ್ನು ಖರೀದಿಸಿ, ಅದರಲ್ಲಿಯೇ ಹೆಣ್ಣು ಕೇಳುವುದಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾನೆ. 

ಟೊಮೆಟೊ ಬೆಳೆದ ರೈತನ ಅಭಿವೃದ್ಧಿ ಸಹಿಸದೇ, ಫಲಬಿಟ್ಟ ಟೊಮೆಟೊ ಗಿಡ ಕತ್ತರಿಸಿದ ಕಿಡಿಗೇಡಿಗಳು

ರೈತರಿಗೆ ಹೆಣ್ಣು ಕೊಡುವಂತೆ ಕೋಟ್ಯಾಧಿಪತಿ ರೈತ ರಾಜೇಂದ್ರನ ಮನವಿ: ರೈತರ ಮಕ್ಕಳಿಗೆ ಹೆಣ್ಣು ಕೊಡಲ್ಲ ಎಂದು ಮೂಗು ಮುರಿಯುವವರಿಗೆ ಪ್ರಗತಿಪರ ರೈತ ರಾಜೇಂದ್ರ ಸವಾಲು ಹಾಕಿದ್ದಾನೆ. ಕೇವಲ 6 ತಿಂಗಳಲ್ಲಿ ಒಂದು ಕೋಟಿ ಸಂಪಾದಿಸಿದ ಯುವ ರೈತ ಅನ್ನದಾತನ ತಾಖತ್ ತೋರಿಸಿದ್ದಾನೆ. ಈ ಹಿಂದೆ ಹೆಣ್ಣು ನೋಡಲು ಹೋದಾಗ ರೈತನೆಂದು ಮದುವೆಗೆ ನಿರಾಕರಿಸಿದ್ದ ಯುವತಿಯರು ಮತ್ತು ಅವರ ಪೋಷಕರು ಕಾಲ್ತೊಳೆದು ಹೆಣ್ಣು ಕೊಡುತ್ತಾರೆ ಎಂದು ಹೇಳಿದ್ದಾನೆ. ಸರ್ಕಾರಿ ಕೆಲಸ ಇದ್ದವರಿಗೆ ಮಾತ್ರ ಹೆಣ್ಣು ನೀಡುವುದಾಗಿ ಅವಮಾನಿಸಿದ್ದ ಅನೇಕರಿಗೆ ಇದು ಬುದ್ಧಿಪಾಠವಾಗಲಿದೆ. ಈಗ ಟೊಮ್ಯಾಟೋ ಬೆಳೆ ಕೈ ಹಿಡಿದ ಪರಿಣಾಮ ಹೊಸ ಮಹೇಂದ್ರ XUV 7oo ಕಾರು ಖರೀದಿಸಿ ಅದರಲ್ಲೇ ಹೆಣ್ಣು ನೋಡಲು ಹೋಗುತ್ತೇನೆಂದು ಹೇಳಿದ್ದಾನೆ.

ಒಂದು ಕೋಟಿ ಬೆಳೆಯ ಸುತ್ತಾ ಖಾಕಿ ಕಾವಲು: ಇನ್ನು 12 ಎಕರೆ ಜಮೀನಿನಲ್ಲಿ ಟೊಮ್ಯಾಟೋ ಬೆಳೆ ಬೆಳೆದು ಕೋಟ್ಯಾಧಿಪತಿಯಾದ ರೈತ ಈಗ ತನ್ನ ಟೊಮೆಟೊ ಬೆಳೆಯನ್ನು ಕಿಡಿಗೇಡಿಗಳು ಹಾಳು ಮಾಡದಿರಲಿ ಎಂದು ಪೊಲೀಸರಿಗೆ ದೂರು ಕೊಟ್ಟು ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾನೆ. ಕಳೆದ ನಾಲ್ಕು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಕೆಬ್ಬೇಪುರ ಗ್ರಾಮದ ಮಂಜುನಾಥ್‌ ಎಂಬುವವರ 1.5 ಎಕರೆ ಜಮೀನಿನ ಟೊಮೆಟೊ ಬೆಳೆಯನ್ನು ಕಿಡಿಗೇಡಿಗಳು ನಾಶಪಡಿದ್ದ ಹಿನ್ನೆಲೆಯಲ್ಲಿ ರೈತನ ಮನವಿಗೆ ಓಗೊಟ್ಟು ಪೊಲೀಸರು ಕೂಡ ಟೊಮೆಟೊ ಬೆಳೆಯ ಕಾವಲಿಗೆ ಮುಂದಾಗಿದ್ದಾರೆ.

Davanagere: ರೈತನ ಮೇಲಿನ ದ್ವೇಷಕ್ಕೆ 780 ಅಡಿಕೆ ಗಿಡ ಕತ್ತರಿಸಿದ ದುಷ್ಕರ್ಮಿಗಳು

ಟೊಮ್ಯಾಟೋ ಜಮೀನಿನ ಸುತ್ತಾ ಖಾಕಿ ಪಡೆಯ ಗಸ್ತು: ನಾಲ್ಕೈದು ದಿನಗಳ ಹಿಂದೆ ವ ಕೆಬ್ಬೇಪುರ ರೈತ ಮಂಜುನಾಥ್ ಅವರು ಬೆಳೆದ ಟೊಮ್ಯಾಟೋ ಬೆಳೆಯನ್ನ ನಾಶ ಪಡಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಮ್ಮ ಜಿಲ್ಲೆಯ ಟೊಮೆಟೊ ಬೆಳೆಗಾರರಿಗೆ ಹಾಗೂ ಅವರ ಬೆಳೆಗೆ ರಕ್ಷಣೆ ನೀಡುವಂತೆ ಕೆಳಹಂತದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ನಾಲ್ಕೈದು ಬಾರಿ ಟೊಮ್ಯಾಟೋ ಜಮೀನಿನ ಸುತ್ತಾ ಪೊಲೀಸರು ಗಸ್ತು ಹೊಡೆಯುತ್ತಿದ್ದಾರೆ. ಪೊಲೀಸರ ಗಸ್ತು ನೋಡಿ ರೈತರು ನೆಮ್ಮದಿ ನಿಟ್ಟುಸಿರು ಬಿಟ್ಟು ಸಂತಸಪಟ್ಟಿದ್ದಾರೆ. ಪೊಲೀಸರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Latest Videos
Follow Us:
Download App:
  • android
  • ios