Bengaluru: ಫ್ರೀ ಟಿಕೆಟ್ ತೆಗೆದುಕೊಳ್ಳದೇ ಮಾರ್ಡನ್ ಗರ್ಲ್ ರಂಪಾಟ; ಕಂಡಕ್ಟರ್‌ಗೆ ಅವಾಜ್
ಬೆಂಗಳೂರಿನ ಬನಶಂಕರಿ ಡಿಪೋದ ಬಿಎಂಟಿಸಿ ಬಸ್‌ನಲ್ಲಿ ಶಕ್ತಿ ಯೋಜನೆಯಡಿ ದಾಖಲೆಗಳನ್ನು ತೋರಿಸಿ ಉಚಿತ ಟಿಕೆಟ್ ತೆಗೆದುಕೊಳ್ಳದೇ ಯುವತಿಯೊಬ್ಬಳು ರಂಪಾಟ ಮಾಡಿದ ವೀಡಿಯೋ ವೈರಲ್ ಆಗುತ್ತಿದೆ.
ಬೆಂಗಳೂರು (ಜು.26): ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆ (ಕರ್ನಾಟಕದ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ) ಅಡಿಯಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಸೂಕ್ತ ದಾಖಲೆಗಳನ್ನು ತೋರಿಸಿ ಉಚಿತವಾಗಿ ಟಿಕೆಟ್ ತೆಗೆದುಕೊಳ್ಳದೇ ಮಾರ್ಡನ್ ಟೆಕ್ಕಿ ಯುವತಿ, ಬಸ್ ಕಂಡಕ್ಟರ್‌ಗೆ ಅವಾಜ್ ಹಾಕಿದ್ದಾಳೆ.
ಬೆಂಗಳೂರಿನ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣದ ವೇಳೆ ಟೆಕ್ಕಿ ಯುವತಿಯೊಬ್ಬರು ಕಿರಿಕ್ ಮಾಡಿದ್ದಾಳೆ. ಶಕ್ತಿ ಯೋಜನೆ ಅಡಿಯಲ್ಲಿ ದಾಖಲೆ ತೋರಿಸುವುದೂ ಇಲ್ಲ, ಕಾಸು ಕೊಟ್ಟು ಟಿಕೆಟ್ ತೆಗೆದುಕೊಳ್ಳುವುದಿಲ್ಲವೆಂದು ಬಸ್‌ನಲ್ಲಿ ಕಂಡಕ್ಟರ್ ಜೊತೆಗೆ ಕಿರಿಕ್ ಮಾಡಿದ್ದಾಳೆ. ಇಷ್ಟಕ್ಕೇ ಸುಮ್ಮನಾಗದ ಯುವತಿ, ನಾನು ಸೆಂಟ್ರಲ್ ಗವರ್ನಮೆಂಟ್ ಸಿಬ್ಬಂದಿ ದುಡ್ಡುಕೊಡಲ್ಲ. ಏನ್ ಮಾಡ್ಕೊತಿಯೋ ಮಾಡ್ಕೊ ಎಂದು ಕಂಡಕ್ಟರ್ ಗೆ ಅವಾಜ್ ಹಾಕಿದ್ದಾಳೆ. ಆಯ್ತು ನೀವು ಕೇಂದ್ರ ಸರ್ಕಾರದ ಉದ್ಯೋಗಿ ಎಂಬುದಕ್ಕೆ ಗುರುತಿನ ಚೀಟಿ (Identity card) ಏನಿದೆ ತೋರಿಸಿ ಎಂದ್ರೂ ಕೇಳದ ಯುವತಿ ಸುಖಾಸುಮ್ಮನೆ ರಾದ್ದಾಂತ ಮಾಡಿದ್ದಾಳೆ.
Bengaluru: ಕನಕಪುರ ರಸ್ತೆಯಲ್ಲಿ 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆ
ಟಿಕೆಟ್ ತೆಗೆದುಕೊಳ್ಳದೇ ಕಂಡಕ್ಟರ್ ಗೆ ಅವಾಜ್ ಹಾಕಿದ ಟೆಕ್ಕಿ : ಮುಂದುವರೆದು, ಬಸ್ ಕಂಡಕ್ಟರ್ ವಿರುದ್ಧ ಬಾಯಿಗೆ ಬಂದ ಹಾಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾಳೆ. ನಾನು ಯಾಕೆ ಟಿಕೆಟ್ ತೆಗೆದುಕೊಳ್ಳಲಿ, ನನ್ನ ಮೊಬೈಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋ ಇದೆ ಇದನ್ನು ನೋಡಿ ಟಿಕೆಟ್ ಕೊಡಿ ಎಂದು ಕಂಡಕ್ಟರ್ ಬಳಿ ಗಲಾಟೆ ತೆಗೆದಿದ್ದಾಳೆ. ಆದರೆ, ಸ್ಮಾರ್ಟ್ ಫೋಟೋ ತೋರಿಸುವುದಾದರೂ ಡಿಜಿ ಲಾಕರ್‌ನಲ್ಲಿರುವ ಫೋಟೋ ತೋರಿಸಿ, ಇಲ್ಲವಾದಲ್ಲಿ ಮೂಲ ದಾಖಲೆಯ ಭೌತಿಕ ಪ್ರತಿ ಅಥವಾ ಜೆರಾಕ್ಸ್ ಪ್ರತಿ (original document hard copy or xerox copy) ನೀಡುವಂತೆ ಕಂಡಕ್ಟರ್ ತಾಕೀತು ಮಾಡಿದ್ದಾರೆ.
ಪ್ರಶ್ನೆ ಮಾಡಿದವರ ವೀಡಿಯೋ ಮಾಡಿದ ಯುವತಿ: ಬನಶಂಕರಿ ಡಿಪೋಗೆ ಸೇರಿದ ಬಸ್ ನಲ್ಲಿ ಟೆಕ್ಕಿಯಿಂದ ಕಿರಿಕ್ ಮಾಡಿದ್ದಾಳೆ. ತಮ್ಮ ಪ್ರಯಾಣದ ವೇಳೆ ಟಿಕೆಟ್ ಕೇಳಿದ್ರೆ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಾ ತಾನು ಟಿಕೆಟ್ ತೆಗೆದುಕೊಳ್ಳಲ್ಲ ಎಂದು ರಾದ್ದಾಂತ ಮಾಡಿದ್ದು, ಇತರೆ ಪ್ರಯಾಣಿಕರೂ ಇದ್ದನ್ನು ವೀಡಿಯೋ ಮಾಡಿದ್ದಾರೆ. ಇನ್ನು ಸುಖಾಸುಮ್ಮನೆ ಗಲಾಟೆ ಮಾಡುತ್ತಿರುವುದನ್ನು ಕಂಡ ಸಹ ಪ್ರಯಾಣಿಕರು ಕೂಡ ಬುದ್ಧಿ ಹೇಳಲು ಮುಂದಾಗಿದ್ದಾರೆ. ಜಿತೆಗೆ, ನೀವು ಸೆಂಟ್ರಲ್ ಗವರ್ನಮೆಂಟ್ ಅನ್ನೋದಕ್ಕೆ ಏನಿದೆ? ನಿಮ್ಮ ಕೆಲಸದ ಆಧಾರ ತೋರಿಸಿ ಎಂದು ಪ್ರಯಾಣಿಕರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಯುವತಿ ಬಸ್ ನಲ್ಲಿದ್ದ ಎಲ್ಲ ಪ್ರಯಾಣಿಕರಿಗೂ ಹವಾಜ್ ಹಾಕಿದ್ದಾಳೆ.
ಕರ್ನಾಟಕದವರಿಗೆ ಮಾತ್ರ ಶಕ್ತಿ ಯೋಜನೆ: ಇನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆ ಕರ್ನಾಟಕ ರಾಜ್ಯದ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯವಾಗುತ್ತದೆ. ಹೊರ ರಾಜ್ಯದ ಮಹಿಳೆಯರಿಗೆ ಕರ್ನಾಟಕದ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಇಲ್ಲ. ಇನ್ನು ಬೆಂಗಳೂರಿನ ಬಿಎಂಟಿಸಿ ಬಸ್‌ನಲ್ಲಿ ರಂಪಾಟ ಮಾಡಿದ ಯುವತಿ ಸೆಂಟ್ರಲ್ ಗವರ್ನ್‌ಮೆಂಟ್ ಉದ್ಯೋಗಿ ಆದ್ರೂ ಅಷ್ಟೇ ಅವರಿಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶವಿಲ್ಲ. ಒಂದು ವೇಳೆ ಕರ್ನಾಟಕದಬವರು ಆಗಿದ್ದಲ್ಲಿ ಮಾತ್ರ, ಸರ್ಕಾರ ಸೂಚಿಸಿದ ಮಾದರಿಯಲ್ಲಿ ಉಚಿತ ಪ್ರಯಾಣ ಮಾಡಬಹುದು. ಇಲ್ಲದಿದ್ದರೆ ದುಡ್ಡು ಕೊಟ್ಟೆ ಹೋಗ್ಬೇಕು.
ಬೆಂಗಳೂರಲ್ಲಿ ಹಳ್ಳಿ ಹುಡುಗಿ ದುರಂತ ಅಂತ್ಯ: ಪತಿಯೇ ಕೊಲೆಗೈದು ಕಥೆ ಕಟ್ಟಿದ: ಬೆಂಗಳೂರು (ಜು.26): ಕಳೆದ ಆರು ತಿಂಗಳ ಹಿಂದಷ್ಟೇ ಹಳ್ಳಿ ಹುಡುಗಿಯನ್ನು ಮದುವೆಯಾಗಿ ಬೆಂಗಳೂರಿಗೆ ಕರೆತಂದಿದ್ದ ನವ ವಿವಾಹಿತ, ನಿನ್ನೆ ತಡರಾತ್ರಿ ವೇಳೆ ಹೆಂಡತಿಯ ಕತ್ತು ಹಿಸುಕಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ. ಪೊಲೀಸರು ವಿಚಾರಣೆ ನಡೆಸಿದ ಬೆನ್ನಲ್ಲೇ ಸತ್ಯವನ್ನು ಬಾಯಿಬಿಟ್ಟಿದ್ದಾನೆ.
Bengaluru: ಹಳ್ಳಿ ಹುಡುಗಿ ಬೇಕು ಅಂತ ಮದ್ವೆಯಾಗಿ, ಆರೇ ತಿಂಗಳಿಗೆ ಕೊಲೆ ಮಾಡಿದ ಕಿತಾ'ಪತಿ'
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಳ್ಳುವುದಕ್ಕಾಗಿ ಬರುವ ಉದ್ಯೋಗಿಗಳು ತಾವಾಯ್ತು, ತಮ್ಮ ಕೆಲಸವಾಯ್ತು ಎಂದು ಮಾಡಿಕೊಂಡು ಸುಖ ಸಂಸಾರ ಮಾಡಿಕೊಂಡಿರದೇ ಅನೈತಿಕ ಚಟುವಟಿಕೆ ಹಾಗೂ ಅಪರಾಧ ಪ್ರಕರಣಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ. ಇನ್ನು ಬಾಣಸವಾಡಿಯಲ್ಲಿಯೂ ಕೂಡ ಇಂತಹದ್ದೇ ಘಟನೆ ನಡೆದಿದೆ. ನನಗೆ ಹಳ್ಳಿ ಹುಡುಗಿಯೇ ಇಷ್ಟವೆಂದು ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿ, ಪತ್ನಿಯನ್ನು ತನ್ನೊಂದಿಗೆ ಕರೆದುಕೊಂಡು ಬಂದು ಬೆಂಗಳೂರಿನಲ್ಲಿ ವಾಸವಿದ್ದ ಆರೋಪಿ, ಈಗ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.