ತುಮಕೂರು[ಡಿ.31‘]: ಕೆಪಿಸಿಸಿ ಅಧ್ಯಕ್ಷ ಪಟ್ಟತಾನಾಗಿಯೇ ಒಲಿದು ಬಂದರೆ ನಿರ್ವಹಿಸುವ ಇಂಗಿತವನ್ನು ಮಾಜಿ ಸಂಸದ ಮುದ್ದಹನುಮೇಗೌಡ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸಲ್ಲಿ ಐದೇ ನಿಮಿಷದಲ್ಲಿ ಟೋಪಿ ತೆಗೆದುಬಿಡ್ತಾರೆ: ಡಿಕೆಶಿ

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ 10 ವರ್ಷ ಕಾಲ ಕೆಲಸ ಮಾಡಿದ ಅನುಭವ ಇದೆ. ಈ ಅನುಭವದ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕೊಟ್ಟರೂ ಸುಲಭವಾಗಿ ನಿರ್ವಹಿಸಿಕೊಂಡು ಹೋಗುತ್ತೇನೆ ಎಂದರು. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಮಾಧ್ಯಮದಲ್ಲಿ ನನ್ನ ಹೆಸರು ಬಂದಿದೆ ಅಷ್ಟೇ. ನಾನು ಆಕಾಂಕ್ಷಿತನಾಗಲು ಅದೇನು ಅಧಿಕಾರವಲ್ಲ, ಅದೊಂದು ಜವಾಬ್ದಾರಿ. ಆ ಜವಾಬ್ದಾರಿಯನ್ನು ಯಾಕೆ, ಯಾರಿಗೆ, ಯಾವಾಗ ಕೊಡಬೇಕೆಂದು ನಿರ್ಧರಿಸುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.

ಅಧ್ಯಕ್ಷ ಪಟ್ಟತಾನಾಗಿಯೇ ಒಲಿದು ಬಂದರೆ ಯಾವ ರಾಜಕಾರಣಿಯೂ ಬೇಡ ಅನ್ನುವುದಿಲ್ಲ. ಆದರೆ, ಹೈಕಮಾಂಡ್‌ ಮನಸ್ಸಿನಲ್ಲಿ ಏನಿದ ಎಂಬುವುದು ಗೊತ್ತಿಲ್ಲ. ಅವರ ಯಾವುದೇ ನಿರ್ಧಾರವನ್ನು ನಾವು ಸ್ವಾಗತಿಸುವುದಾಗಿ ತಿಳಿಸಿದರು.

ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ: ಅಲ್ಲಂ ವೀರಭದ್ರಪ್ಪ