Asianet Suvarna News Asianet Suvarna News

ಮಾಜಿ ಸಚಿವ ಕೆ.ಜೆ.ಜಾರ್ಜ್ ಗೆ ಎದುರಾಯ್ತು ಮತ್ತೆ ಸಂಕಷ್ಟ

ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ರೀತಿಯ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ.

Ravi Krishna Reddy Submits Documents About KJ George illegal Assets
Author
Bengaluru, First Published Nov 29, 2019, 1:39 PM IST

ಬೆಂಗಳೂರು [ನ.29]:  ಮಾಜಿ ಸಚಿವ ಕೆ.ಜೆ.ಜಾರ್ಜ್ ವಿದೇಶಗಳಲ್ಲಿ ಅಕ್ರಮ ಆಸ್ತಿ ಗಳಿಕೆ ಮಾಡಿರುವ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ  ಜಾರಿ ನಿರ್ದೇಶನಾಲಯಕ್ಕೆ ಮತ್ತಷ್ಟು ದಾಖಲೆ ಸಲ್ಲಿಸಿದ್ದಾರೆ. 

ಅಮೇರಿಕಾ ಹಾಗೂ ಆಸ್ಟ್ರೇಲಿಯಾದಲ್ಲಿನ ಆಸ್ತಿಗಳ ಕುರಿತು ದಾಖಲೆ ಸಲ್ಲಿಕೆ ಮಾಡಿದ್ದು, ಭ್ರಷ್ಟಾಚಾರದಿಂದ ಗಳಿಸಿರುವ ಹಣವನ್ನು ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿಂದೆಯೂ ದಾಖಲೆ ಸಮೇತ ದೂರು ನೀಡಿದ್ದ ರವಿಕೃಷ್ಣಾರೆಡ್ಡಿ ಇದೀಗ ಮತ್ತೊಮ್ಮೆ ದಾಖಲೆ ಸಲ್ಲಿಸಿದ್ದಾರೆ. 

ಈ ಹಿಂದೆ ಸಲ್ಲಿಸಿದ್ದ ದಾಖಲೆಗಳನ್ನು ಆಧರಿಸಿ ಇಡಿ ಅಧಿಕಾರಿಗಳು ಪ್ರಾಥಮಿಕ ತನಿಖೆಗೆ ಮುಂದಾಗಿದ್ದು, ಇದೀಗ ಮತ್ತೆ ದಾಖಲೆ ಸಲ್ಲಿಸಿ ತನಿಖಾ ಪ್ರಗತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. 

ಇನ್ನುದಾಖಲೆ ಸಲ್ಲಿಕೆ ಪ್ರಕ್ರಿಯೆ ಬಳಿಕ ಪ್ರತಿಕ್ರಿಯಿಸಿದ ರವಿಕೃಷ್ಣಾ ರೆಡ್ಡಿ ಇಡಿ ಇಲಾಖೆಗೆ ಬಂದು 20 ಪುಟಗಳಷ್ಟು ಮಾಹಿತಿ ಸಲ್ಲಿಸಿದ್ದೇನೆ. ಸುಮಾರು ನೂರಾರು ಕೋಟಿ ಅವ್ಯವಹಾರ ನಡೆಸಿದ್ದಾರೆ. ದೂರು ನೀಡಿದ್ದರಿಂದ ಅದರ ಪ್ರತಿಯೊಂದು ಫಾಲೋ ಅಪ್ ಮಾಡುತ್ತಿದ್ದೇನೆ ಎಂದಿದ್ದಾರೆ. 

ಇನ್ನೂ ಮುಗೀಲಿಲ್ಲ ಡಿಕೆಶಿಗೆ ಟ್ರಬಲ್: ಮತ್ತೊಬ್ಬ ಕೈ ಮುಖಂಡನಿಗೀಗ ED ಭೀತಿ...

ಕೆಲವು ಬ್ಯಾಂಕ್ ಗಳಲ್ಲಿ ಜಾರ್ಜ್ ಸಾಲವನ್ನು ಪಡೆದಿದ್ದಾರೆ. ಆ ಸಾಲವನ್ನು ತೀರಿಸಲು ಬೇರೆ ಬೇರೆ ಅಕೌಂಟುಗಳಿಂದ ಹಣ ವರ್ಗಾವಣೆಯಾಗಿದೆ. ಅದರ ಮಾಹಿತಿಯನ್ನು ಇಡಿ ಇಲಾಖೆಗೆ ನೀಡಿದ್ದೇವೆ. ಅದರ ಮಾಹಿತಿಯನ್ನು ಇಡಿ ಕಲೆ ಹಾಕಬೇಕಾಗಿದೆ. ಸಿಂಗಪುರ, ಮಾರಿಷಸ್ ನಲ್ಲಿ ಕಂಪನಿಗೆ ಹಣ ಹೂಡಿಕೆಯಾಗಿದೆ. ಅದನ್ನು ಈಗ ವೈಟ್ ಮನಿಯಾಗಿ ಬದಲಾವಣೆ ಮಾಡಲಾಗಿದೆ. ಈ ಸಂಬಂಧವೂ ದಾಖಲೆ ನೀಡುವಂತೆ ಅಧಿಕಾರಿಗಳಿಗೆ ದಾಖಲೆ ನೀಡಿದ್ದಾಗಿ ರವಿಕೃಷ್ಣಾ ರೆಡ್ಡಿ ತಿಳಿಸಿದರು. 

ಜಾರ್ಜ್ ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ಆದರೆ ಈ ಬಗ್ಗೆ ಕೋರ್ಟಿಂದ ಯಾವುದೇ ರಿತಿಯ ಸಮನ್ಸ್ ಬಂದಿಲ್ಲ. ಕೋರ್ಟಿಂದ ಸಮನ್ಸ್ ಬಂದ ನಂತರ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿದರು. 

Follow Us:
Download App:
  • android
  • ios