ರವಿ ಡಿ. ಚನ್ನಣ್ಣನವರ್ ಸೇರಿ ಕರ್ನಾಟಕದ 9 IPS​ ಅಧಿಕಾರಿಗಳ ವರ್ಗಾವಣೆ

* ರವಿ ಡಿ. ಚನ್ನಣ್ಣನವರ್ ಸೇರಿ ಕರ್ನಾಟಕದ 9 ಐಪಿಎಸ್​ ಅಧಿಕಾರಿಗಳ ವರ್ಗಾವಣೆ
* ಅಕ್ರಮ ಆಸ್ತಿ ಆರೋಪ ಬೆನ್ನಲ್ಲೇ ರವಿ ಡಿ. ಚನ್ನಣ್ಣನವರ್ ಎತ್ತಂಗಡಿ
* ಚರ್ಚೆಗೆ ಗ್ರಾಸವಾಯ್ತು ರವಿ ಡಿ. ಚನ್ನಣ್ಣನವರ್ ವರ್ಗಾವಣೆ

 

Ravi D channannavar including 9 ips Officers transferred By Karnataka Govt rbj

ಬೆಂಗಳೂರು, (ಜ.27): 2 ದಿನಗಳ ಹಿಂದಷ್ಟೇ 19 ಉನ್ನತ ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಬಸವರಾಜ ಬೊಮ್ಮಾಯಿ ಸರ್ಕಾರ ಇದೀಗ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ(IPS Transfe) ಮಾಡಿದ ಆದೇಶ ಹೊರಡಿಸಿದೆ. 

ರವಿ ಡಿ.ಚನ್ನಣ್ಣನವರ್(Ravi D Channannavar) ಸೇರಿದಂತೆ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ(Karnataka Government) ಇಂದು (ಶುಕ್ರವಾರ) ಆದೇಶ ಹೊರಡಿಸಿದ್ದು, ಸಿಐಡಿ ಎಸ್​ಪಿ ಆಗಿದ್ದ ರವಿ ಡಿ. ಚನ್ನಣ್ಣನವರ್ ಅವರನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

ಬಿಜೆಪಿ ಸೇರ್ತಾರಾ ರವಿ ಚನ್ನಣ್ಣನವರ್? ಸ್ಪಷ್ಟನೆ ಕೊಟ್ಟ ಐಪಿಎಸ್​ ಅಧಿಕಾರಿ

ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು
* ಭೀಮಾಶಂಕರ ಗುಳೇದ್- ಡಿಸಿಪಿ, ಬೆಂಗಳೂರು ಪೂರ್ವ
* ಡಿ. ಕಿಶೋರ್ ಬಾಬು- ಬೀದರ್ ಪೊಲೀಸ್ ವರಿಷ್ಠಾಧಿಕಾರಿ(SP)
* ಅರುಣಾಂಗ್ಶು ಗಿರಿ- ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ
* ಡಿ.ಎಲ್. ನಾಗೇಶ್- ಸಿಐಡಿ ಎಸ್‌ಪಿ
* ಅಬ್ದುಲ್ ಅಹಾದ್- ಕೆಎಸ್‌ಆರ್‌ಟಿಸಿ ನಿರ್ದೇಶಕ
* ಟಿ. ಶ್ರೀಧರ್- ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್​ಪಿ
*ಟಿ.ಪಿ. ಶಿವಕುಮಾರ್- ಚಾಮರಾಜನಗರ ಎಸ್‌ಪಿ 
* ದಿವ್ಯಸಾರ ಥಾಮಸ್- ಪೊಲೀಸ್ ಅಕಾಡೆಮಿ ಉಪ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ.

ಸಿಐಡಿ ಎಸ್​​ಪಿ ಹುದ್ದೆಯಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ಶಡ್ಯೂಲ್ ಟ್ರೈಬ್ ಡೆವಲಪ್ಮೆಂಟ್ ಕಾರ್ಪೊರೇಷನ್ ಎಂಡಿ ಆಗಿ ರವಿ ಡಿ. ಚನ್ನಣ್ಣನವರ್ ಅವರನ್ನು ವರ್ಗಾವಣೆ ಮಾಡಲಾಗಿದೆ. 

ಸಿಐಡಿ ಎಸ್​ಪಿಯಾಗಿದ್ದ ಐಪಿಎಸ್ ಅಧಿಕಾರಿ ಭೀಮಾಶಂಕರ ಗುಳೇದ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಅಗಿ ವರ್ಗಾವಣೆ ಮಾಡಲಾಗಿದೆ. ಅಬ್ದುಲ್ ಅಹಾದ್ ಅವರನ್ನು ಎಸಿಬಿ ಎಸ್​ಪಿಯಿಂದ ಕೆಎಸ್​ಆರ್​​ಟಿಸಿ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಟಿ ಶ್ರೀಧರ್ ಅವರನ್ನು ಕೊಪ್ಪಳ ಎಸ್​ಪಿ ಹುದ್ದೆಯಿಂದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್​ಪಿಯಾಗಿ ವರ್ಗಾಯಿಸಲಾಗಿದೆ.

ಟಿ.ಪಿ ಶಿವಕುಮಾರ್ ಅವರನ್ನು ಬಂಧೀಖಾನೆ ಎಸ್​ಪಿಯಿಂದ ಚಾಮರಾಜನಗರ ಎಸ್​ಪಿಯಾಗಿ, ದಿವ್ಯಸಾರ ಥಾಮಸ್ ಅವರನ್ನು ಚಾಮರಾಜನಗರ ಎಸ್​ಪಿಯಿಂದ ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕರಾಗಿ, ಡೆಕ್ಕಾ ಕಿಶೋರ್ ಬಾಬು ಅವರನ್ನು ಬೀದರ್ ಎಸ್​ಪಿ ಆಗಿ ವರ್ಗಾವಣೆ ಮಾಡಲಾಗಿದೆ. 

ಅರುಣಾಂಗ್ಶು ಗಿರಿ ಅವರನ್ನು ಎಸಿಬಿ ಎಸ್ ಪಿಯಿಂದ ಕೊಪ್ಪಳ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಡಿ.ಎಲ್. ನಾಗೇಶ್ ಅವರನ್ನು ಬೀದರ್ ಎಸ್​ಪಿಯಿಂದ ಸಿಐಡಿ ಎಸ್​ಪಿ ಆಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಚರ್ಚೆಗೆ ಗ್ರಾಸವಾಯ್ತು ರವಿ ಡಿ ಚೆನ್ನಣ್ಣವರ ವರ್ಗಾವಣೆ
ಕೆಲವು ದಿನಗಳಿಂದ ರವಿ ಡಿ ಚೆನ್ನಣ್ಣವರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ವಿರುದ್ಧ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ತಮ್ಮ ವಿರುದ್ಧ ಭ್ರಷ್ಟಾಚಾರದ ಸುದ್ದಿ ಪ್ರಕಟಿಸದಂತೆ ಕೋರ್ಟ್ ನಿಂದ ಇತ್ತೀಚೆಗೆ ತಡೆಯಾಜ್ಞೆ ತಂದಿದ್ದರು. ಈ ಮಧ್ಯೆಯೇ ಇವರ ವರ್ಗಾವಣೆ ವಿಷಯ ಚರ್ಚೆಗೆ ಗ್ರಾಸವಾಗಿದೆ.

ಇನ್ನು ಅಕ್ರಮ ಮರಳು ದಂಧೆ ಪ್ರಕರಣವನ್ನು ಮುಚ್ಚಿ ಹಾಕಲು ಲಂಚ ಪಡೆದ  ಆರೋಪ ರವಿ ಡಿ.ಚನ್ನಣ್ಣನವರ್‌ ಮೇಲೆ ಕೇಳಿಬಂದಿದೆ. ಪ್ರಕರಣ ಸಂಬಂಧ ಮಂಜುನಾಥ್ ಎಂಬುವವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ರವಿ ಚನ್ನಣ್ಣನವರ್ 25 ಲಕ್ಷ, ಡಿವೈಎಸ್‍ಪಿ 15 ಲಕ್ಷ ಹಾಗೂ ಮತ್ತೊಬ್ಬ ಅಧಿಕಾರಿ 10 ಲಕ್ಷ ರೂಪಾಯಿ ಸ್ವೀಕರಿಸಿರುವ ಕುರಿತು ದೂರಿನಲ್ಲಿ ಸ್ಪಷ್ವವಾಗಿ ಉಲ್ಲೇಖಿಸಿದ್ದಾರೆ.

Latest Videos
Follow Us:
Download App:
  • android
  • ios