Asianet Suvarna News Asianet Suvarna News

ಬೆಂಗಳೂರಿನಲ್ಲಿ ಆಹಾರ ಧಾನ್ಯ ATM; ಸುಲಭ ಪಡಿತರ ಪೂರೈಕೆಗೆ ಮಹತ್ವದ ಹೆಜ್ಜೆ!

  • ಬೆಂಗಳೂರಿನಲ್ಲಿ ಪ್ರತಿ ಯೋಜನೆಗೂ ಹೈಕೆಟ್ ಸ್ಪರ್ಶ
  • ಪಡಿತರ ಪೂರೈಕೆಗೆ ನಗರದಲ್ಲಿ ಪ್ರಾಯೋಗಿಕ  ATM
  • ಅನ್ನಪೂರ್ತಿ  ಯೋಜನೆಯಡಿ ಆಹಾರ  ಧಾನ್ಯ ಪೂರೈಕೆ
Ration Food grain ATM for trial basis will launch in Bengaluru soon says Union Food Secretary Sudhanshu Pandey ckm
Author
Bengaluru, First Published Aug 3, 2021, 6:08 PM IST

ಬೆಂಗಳೂರು(ಆ.03):  ನಗರದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಅನ್ನಪೂರ್ತಿ  ಯೋಜನೆಯಡಿ ಆಹಾರ  ಧಾನ್ಯ ಎಟಿಎಂಗಳನ್ನು  ಪರಿಚಯಿಸಲಾಗುವುದು ಎಂದು  ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.  ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ವಲಸೆ ಕಾರ್ಮಿಕರಿಗೆ ಹೆಚ್ಚಿನ ವ್ಯಾಪ್ತಿಯೊಂದಿಗೆ ಪ್ರಯೋಜನಗಳನ್ನು ವಿಸ್ತರಿಸುವುದನ್ನು ಖಚಿತಪಡಿಸಿಕೊಳ್ಳಲು ಸಲಹೆ ನೀಡಿದರು.  

ಮನೆ ಬಾಗಿಲಿಗೆ ಪಡಿತರ : ಸರ್ಕಾರಕ್ಕೆ ಶಿಫಾರಸು

ಆಹಾರ ಯೋಜನೆ ಅನುಷ್ಠಾನ, ಬಳಕೆ, ಸಮಸ್ಯೆಗಳ ಕುರಿತು ಚರ್ಚಿಸಲು ಭಾರತ ಸರ್ಕಾರದ ಆಹಾರ ಸಚಿವಾಲಯದ ಕಾರ್ಯದರ್ಶಿ ಸುಧಾಂಶು ಪಾಂಡೆ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಪಿಎಂಜಿಕೆಎವೈ, ಎನ್.ಎಫ್.ಎಸ್.ಎ. ಮತ್ತು ಇತರ ಕಲ್ಯಾಣ ಕಾರ್ಯಕ್ರಮಗಳ ಅದರಲ್ಲೂ ಕೊರೋನಾ ಕಾಲದಲ್ಲಿ  ಆಹಾರ ಧಾನ್ಯಗಳ  ಪೂರೈಕೆ ಕುರಿತ ರಿಹಾರ ಕಾರ್ಯಕ್ರಮಗಳ ಪರಾಮರ್ಶೆ ನಡೆಸಿದರು. 

ರಾಜ್ಯ ಸರ್ಕಾರವು ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ನೋಂದಣಿ ವ್ಯವಸ್ಥೆ (ಎಫ್.ಆರ್.ಯು.ಐ.ಟಿ.ಎಸ್.) ಪೋರ್ಟಲ್ ಪ್ರಸ್ತುತಪಡಿಸಲಾಯಿತು. ಈ ಪೋರ್ಟಲ್  ಹೆಸರು, ಆಧಾರ್ ವಿವರ, ಮೊಬೈಲ್ ಸಂಖ್ಯೆ, ಬ್ಯಾಂಕ್ ಮತ್ತು ಭೂಮಿಯ ವಿವರ ಇತ್ಯಾದಿಗಳನ್ನು ದಾಖಲಿಸಿಕೊಳ್ಳುತ್ತದೆ.  ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.) ಮಾಡ್ಯೂಲ್ ಎಫ್.ಆರ್.ಯು.ಐ.ಟಿ.ಎಸ್., ಭೂಮಿ ಪೋರ್ಟಲ್   ನಿಂದ ರೈತರ ವಿವರಗಳನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ.

ಒನ್ ನೇಷನ್- ಒನ್ ರೇಷನ್ ಜಾರಿಗೊಳಿಸಲು ಗಡುವು ಕೊಟ್ಟ ಸುಪ್ರೀಂ!

ಡಿಜಿಟಲೀಕರಣಗೊಂಡ ಭೂ ದಾಖಲೆ ದತ್ತಾಂಶ ಮತ್ತು  ಆಧಾರ್ ಆಧಾರಿತವಾಗಿ  ನೇರ ಸವಲತ್ತು ವರ್ಗಾವಣೆ (ಡಿಬಿಟಿ) ವೇದಿಕೆಯ ಮೂಲಕ ಎಂ.ಎಸ್.ಪಿ ವರ್ಗಾವಣೆಯನ್ನು ಇದು ಒಳಗೊಂಡಿದೆ.  ಸುಧಾಂಶು ಪಾಂಡೆ, ರಾಜ್ಯ ಸರ್ಕಾರವು ಈ ಪೋರ್ಟಲ್ ಗಳನ್ನು ವಹಿವಾಟುಗಳ ಪ್ರಯೋಗ, ಮಾಹಿತಿಯ ತಡೆರಹಿತ ಹರಿವಿಗಾಗಿ ಪಿ.ಎಫ್.ಎಂ.ಎಸ್, ಮತ್ತು ಎಫ್.ಸಿ.ಐ. ಡಿ.ಒ.ಎಸ್.ಗೆ ಸಂಪರ್ಕಿಸಲು ಸಲಹೆ ನೀಡಿದರು. ಇದು ರಾಜ್ಯ ಸರ್ಕಾರದ  ಬಂದಿರುವ ದೂರುಗಳನ್ನು ಸುಲಭವಾಗಿ ಇತ್ಯರ್ಥಪಡಿಸಲು ಹಾಗೂ ವೆಚ್ಚವನ್ನು ತಗ್ಗಿಸಲು ಅವಕಾಶ ಕಲ್ಪಿಸುತ್ತದೆ ಎಂದರು.

ಪೌಷ್ಟಿಕತೆಗೆ ವ್ಯಾಪಕವಾದ ಅಂಗೀಕಾರ ಪಡೆದಿರುವ ಸಿರಿಧಾನ್ಯ ಸಂಗ್ರಹ ಪ್ರದೇಶವಾಗಿರುವುದಕ್ಕಾಗಿ ರಾಜ್ಯವನ್ನು ಅಭಿನಂದಿಸಿದ ಭಾರತ ಸರ್ಕಾರದ ಆಹಾರ ಸಚಿವಾಲಯದ ಕಾರ್ಯದರ್ಶಿಯವರು, ಸಿರಿ ಧಾನ್ಯಗಳ ಬಳಕೆಯ ವಾಣಿಜ್ಯೀಕರಣಕ್ಕಾಗಿ ರಾಜ್ಯವು ಖಾಸಗಿ ಸಂಸ್ಕರಣಾ ಉದ್ಯಮಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು  ಎಂದರು.  ತಂತ್ರಜ್ಞಾನ   ಅಭಿವೃದ್ಧಿ ಮತ್ತು ಮೌಲ್ಯವರ್ಧನೆಗಾಗಿ ಹೈದರಾಬಾದ್ ನ ಭಾರತೀಯ ಸಿರಿಧಾನ್ಯ ಸಂಶೋಧನೆ ಕುರಿತ ಸಂಸ್ಥೆಯಲ್ಲಿನ ನ್ಯೂಟ್ರಿಹಬ್ ನ ವೈಜ್ಞಾನಿಕ ಪರಿಣತಿಯನ್ನು ಬಳಸಲು ಭಾರತ ಸರ್ಕಾರ ಕರ್ನಾಟಕದೊಂದಿಗೆ ಕೈಜೋಡಿಸುತ್ತದೆ ಎಂದು  ಪಾಂಡೆ ಹೇಳಿದರು.

ಕೋವಿಡ್ ಲಸಿಕೆ ಪಡೆಯದಿದ್ದರೆ ಪಡಿತರ ಚೀಟಿ ರದ್ದು

1,06,000 ಮೆಟ್ರಿಕ್ ಟನ್  ಶೇಖರಣಾ  ಸಾಮರ್ಥ್ಯವನ್ನು ಹೊಂದಿರುವ ವೈಟ್ ಫೀಲ್ಡ್ ನಲ್ಲಿರುವ ಕರ್ನಾಟಕದ ಅತಿದೊಡ್ಡ ಆಹಾರ ಧಾನ್ಯ ಶೇಖರಣಾ  ಸೌಲಭ್ಯವಾದ ಎಫ್.ಸಿ.ಐ.ನ ಕಾಪು ದಾಸ್ತಾನು ಸಮುಚ್ಛಯಕ್ಕೆ ಪಾಂಡೆ ಭೇಟಿ ನೀಡಿದ್ದರು. ಗೋದಾಮಿನಲ್ಲಿ ಪರಿಶೀಲನೆಯ ವೇಳೆ, ಎಫ್.ಸಿ.ಐ.ನ  ಸ್ಮಾರ್ಟ್ ಸೆಣಬಿನ ಚೀಲಗಳ ಬಳಕೆ ಪ್ರಯೋಗ ಮತ್ತು ಗೋದಾಮಿನಲ್ಲಿ ಭದ್ರವಾಗಿ ಸಂಗ್ರಹಿಸಲಾದ ಅಕ್ಕಿ ದಾಸ್ತಾನಿನ ಗುಣಮಟ್ಟವನ್ನು ಸಹ ನೋಡಿದರು. ಕರ್ನಾಟಕದಲ್ಲಿ ಎಫ್.ಸಿಐ ಕಾರ್ಯಾಚರಣೆಗಳನ್ನು ಪ್ರಧಾನ ವ್ಯವಸ್ಥಾಪಕರು (ವಲಯ) ಮತ್ತು ದಕ್ಷಿಣ ವಲಯದ ಕಾರ್ಯಾಚರಣೆಗಳ ಕಾರ್ಯನಿರ್ವಾಹಕ ನಿರ್ದೇಶಕರು (ದಕ್ಷಿಣ) ವಿವರಿಸಿದರು.

ಭಾರತ ಸರ್ಕಾರದ ಆಹಾರ ಕಾರ್ಯದರ್ಶಿಯವರು, ವೈಟ್ ಫೀಲ್ಡ್ ನ ಸಿಡಬ್ಲ್ಯೂಸಿಯ ಕಂಟೇನರ್ ಸರಕು ಸಾಗಣೆ  ಕೇಂದ್ರಕ್ಕೂ  ಭೇಟಿ ನೀಡಿದ್ದರು. ನಂತರ ನಲ್ಲೂರುಹಳ್ಳಿಯಲ್ಲಿ   ಎಫ್.ಪಿ.ಎಸ್.ಗೆ ಭೇಟಿ  ನೀಡಿದರು, ಇದು 2636  ಫಲಾನುಭವಿಗಳನ್ನೊಳಗೊಂಡ 842 ಪಡಿತರ ಚೀಟಿಗಳ ಅಗತ್ಯ ಪೂರೈಸುತ್ತದೆ.  ಇದೇ ವೇಳೆ  ಸಾರ್ವಜನಿಕ ವಿತರಣೆ ವ್ಯವಸ್ಥೆ ಅಡಿಯಲ್ಲಿ ವಿತರಿಸಲಾಗುವ ಆಹಾರ ಧಾನ್ಯಗಳ ಗುಣಮಟ್ಟವನ್ನು ಸಹ ಪರಿಶೀಲಿಸಲಾಯಿತು ಮತ್ತು ಅದು ತೃಪ್ತಿಕರವಾಗಿದೆ ಎಂದು ಮನಗಂಡರು. ಎಫ್.ಪಿ.ಎಸ್ ತಮ್ಮ ಪಿಒಎಸ್ ಯಂತ್ರದ ಮೂಲಕ ಬಯೋಮೆಟ್ರಿಕ್  ದೃಢೀಕರಣ ವ್ಯವಸ್ಥೆಯನ್ನು  ಪ್ರದರ್ಶಿಸಿತು,  ಇದಕ್ಕೆ ಭಾರತ ಸರ್ಕಾರದ ಆಹಾರ ಕಾರ್ಯದರ್ಶಿಯವರು ಪ್ರಶಂಸೆ ವ್ಯಕ್ತಪಡಿಸಿದರು.

Follow Us:
Download App:
  • android
  • ios