Asianet Suvarna News Asianet Suvarna News

ಕುವೆಂಪು ಕೃತಿಗಳು ಒಂದೇ ದಿನಕ್ಕೆ ಆನ್‌ಲೈನ್‌ನಲ್ಲಿ ಖರೀದಿಗೆ ಲಭ್ಯ

ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯದ 12 ಕೃತಿಗಳ ಡಿಜಿಟಲ್​ ಆವೃತ್ತಿ ಲೋಕಾರ್ಪಣೆಯಾದ ಒಂದೇ ದಿನದಲ್ಲಿ ಆನ್​ಲೈನ್​ನಲ್ಲಿ ಲಭ್ಯವಾಗುತ್ತಿವೆ.

rashtrakavi kuvempu literary available digital editions rbj
Author
Bengaluru, First Published Nov 2, 2020, 10:43 PM IST

ಬೆಂಗಳೂರು, (ನ.02):  ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಲೋಕಾರ್ಪಣೆ ಮಾಡಿದ್ದ ರಾಷ್ಟ್ರಕವಿ ಕುವೆಂಪು ಅವರ 12 ಸಂಪುಟಗಳ ಡಿಜಿಟಲ್ ಆವೃತ್ತಿಗಳು ಓದುಗರಿಗೆ ಲಭ್ಯವಾಗುತ್ತಿದೆ.

ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್​. ಅಶ್ವತ್ಥನಾರಾಯಣ ಭಾನುವಾರ ಈ ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದರು. ಗೂಗಲ್​ಪ್ಲೇ ಬುಕ್​ನಲ್ಲಿ ಈ ಕೃತಿಗಳು ಮಾರಾಟಕ್ಕಿದ್ದು, ಸಾಹಿತ್ಯಾಸಕ್ತರೂ ಖರೀದಿ ಮಾಡಬಹುದು. ರಾಜ್ಯೋತ್ಸವ ಪ್ರಯುಕ್ತ ಮುದ್ರಿತ ಕೃತಿಗಳಿಗೆ ಶೇ.50 ರಿಯಾಯಿತಿಯನ್ನು ಹಂಪಿ ವಿಶ್ವವಿದ್ಯಾಲಯ ಈಗಾಗಲೇ ಘೋಷಿಸಿದೆ.

RCB ಗೆಲುವಿಗೆ ರುದ್ರಾಭಿಷೇಕ, ಮನದಾಳ ಬಿಚ್ಚಿಟ್ಟ ರಶ್ಮಿಕಾ: ನ.2ರ ಟಾಪ್ 10 ಸುದ್ದಿ

ಹಂಪಿ ವಿವಿಯ ಕನ್ನಡ ವಿಭಾಗದ ಪ್ರೊ. ಕೆ.ಸಿ.ಶಿವಾರೆಡ್ಡಿ ಈ ಸಂಪುಟಗಳನ್ನು ಸಂಪಾದಿಸಿದ್ದು, ಮುದ್ರಣ ಆವೃತ್ತಿಯೂ ಮಾರಾಟಕ್ಕಿದೆ. ವಿವಿಯ ಬೆಂಗಳೂರು ಕೇಂದ್ರದಲ್ಲಿ ಈ ಕೃತಿಗಳು ದೊರಕುತ್ತವೆ.

ಆನ್​ಲೈನ್​ನಲ್ಲಿ ಖರೀದಿಸಲು ಗೂಗಲ್​ಪ್ಲೇ ಬುಕ್​ಗೆ ಬಂದು ಕುವೆಂಪು ಬುಕ್ಸ್​ ಎಂದು ಟೈಪ್​ ಮಾಡಿದರೆ ಸಾಕು, ಅಷ್ಟು ಸಂಪುಟಗಳು ತೆರೆದುಕೊಳ್ಳುತ್ತವೆ. ಆಸಕ್ತರು ಖರೀದಿಗೂ ಮುನ್ನ ಅಷ್ಟೂ ಸಂಪುಟಗಳ ಶೇ.20 ಭಾಗವನ್ನು ಆನ್​ಲೈನ್​ನಲ್ಲಿಯೇ ಓದಬಹುದು. ಉಳಿದ ಭಾಗವನ್ನು ಓದಬೇಕಾದರೆ ಪುಸ್ತಕಗಳನ್ನು ಖರೀದಿ ಮಾಡಬೇಕು.

ಡಿಜಿಟಲ್​ ವರ್ಷನ್​ ಓದಲು ಅತ್ಯಂತ ವೈಜ್ಞಾನಿಕವಾಗಿದ್ದು, ಸುಲಭವೂ ಆಗಿದೆ ಎಂದು ಡಾ.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ಖರೀದಿಗೆ ಈ ಲಿಂಕ್‌ ಕ್ಲಿಕ್‌ ಮಾಡಬಹುದು.
https://play.google.com/store/search?q=kuvempu&c=books
ಅಥವಾ, ಕೃತಿಗಳ ಪ್ರತ್ಯೇಕ ಓದು, ಖರೀದಿಗೆ ಈ ಲಿಂಕ್‌ ಕ್ಲಿಕ್‌ಗಳನ್ನು ಮಾಡಬಹುದು. 

01 ಕುವೆಂಪು ಸಮಗ್ರ ಕಾವ್ಯ ಸಂಪುಟ ೧:  Kuvempu Samagra Kavya Vol. 1
https://play.google.com/store/books/details?id=byIGEAAAQBAJ

02 ಕುವೆಂಪು ಸಮಗ್ರಕಾವ್ಯ ಸಂಪುಟ 2:  Kuvempu Samagra Kavya Vol. 2
https://play.google.com/store/books/details?id=tVoGEAAAQBAJ

03 ಕುವೆಂಪು ಸಮಗ್ರಕಾವ್ಯ ಸಂಪುಟ ೩: Kuvempu Samagra Kavya Vol. 3
https://play.google.com/store/books/details?id=vVoGEAAAQBAJ

04 ಕುವೆಂಪು ಸಮಗ್ರ ನಾಟಕ: Kuvempu Samagra Nataka
https://play.google.com/store/books/details?id=x1oGEAAAQBAJ

05 ಕುವೆಂಪು ಸಮಗ್ರಗದ್ಯ ಸಂಪುಟ 1: Kuvempu Samagra Gadya Vol. 1
https://play.google.com/store/books/details?id=0VoGEAAAQBAJ

06 ಕುವೆಂಪು ಸಮಗ್ರಗದ್ಯ ಸಂಪುಟ 2: Kuvempu Samagra Gadya Vol. 2
https://play.google.com/store/books/details?id=11oGEAAAQBAJ

07 ಕುವೆಂಪು ಸಮಗ್ರಗದ್ಯ ಸಂಪುಟ 3: Kuvempu Samagra Gadya Vol. 3 - Nenapina Doniyalli (Autobiography)
https://play.google.com/store/books/details?id=WlwGEAAAQBAJ

08 ಕುವೆಂಪು ಸಮಗ್ರಗದ್ಯ ಸಂಪುಟ 4: Kuvempu Samagra Gadya Vol. 4 - Malegalalli Madumagalu (Novel)
https://play.google.com/store/books/details?id=ZlsGEAAAQBAJ

09 ಕುವೆಂಪು ಸಮಗ್ರಗದ್ಯ ಸಂಪುಟ 5: Kuvempu Samagra Gadya Vol. 5 - Kanuru Heggaditi (Novel)
https://play.google.com/store/books/details?id=alsGEAAAQBAJ

10 ಕುವೆಂಪು ಸಮಗ್ರಗದ್ಯ ಸಂಪುಟ 6: Kuvempu Samagra Gadya Vol. 6 - Short Stories, Malenadina Chitragalu, Janapriya Valmiki Ramayana
https://play.google.com/store/books/details?id=cFsGEAAAQBAJ

11 ಕುವೆಂಪು ಸಮಗ್ರಗದ್ಯ ಸಂಪುಟ 7: Kuvempu Samagra Gadya Vol. 7 - Sri Ramakrishna Paramahamsa, Swami Vivekananda, Guruvinodane Devaredege
https://play.google.com/store/books/details?id=SFwGEAAAQBAJ

12 ಕುವೆಂಪು ಸಮಗ್ರಗದ್ಯ ಸಂಪುಟ 8: Kuvempu Samagra Hadya Vol. 8 - Miscellany Volume
https://play.google.com/store/books/details?id=VFwGEAAAQBAJ

Follow Us:
Download App:
  • android
  • ios