Asianet Suvarna News Asianet Suvarna News

ರಾಜ್ಯದ ಮಸೀದಿಗಳು, ಮದರಸಾಗಳಲ್ಲಿ ಹುಡುಕಿದರೆ ರಾಮೇಶ್ವರಂ ಕೆಫೆ ಬಾಂಬರ್ ಸಿಗ್ತಾನೆ: ಶರಣ್ ಪಂಪ್‌ವೆಲ್

ಕರ್ನಾಟಕ ರಾಜ್ಯದ ಎಲ್ಲ ಮಸೀದಿಗಳು ಹಾಗೂ ಮದರಸಾಗಳಲ್ಲಿ ಹುಡುಕಿದರೆ ರಾಮೇಶ್ವರಂ ಕೆಫೆ ಬಾಂಬರ್ ಸಿಗುತ್ತಾನೆ ಎಂದು ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಹೇಳಿದ್ದಾರೆ.

Rameshwaram Cafe Bomber will be found if you search in Karnataka All mosques and madrasas sat
Author
First Published Mar 10, 2024, 1:53 PM IST

ಮಂಗಳೂರು (ಮಾ.10): ರಾಜ್ಯದಲ್ಲಿ ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಪ್ರಸಾರ ಮಾಡುವ ಮದರಸಾಗಳೇ ಭಯೋತ್ಪಾದಕರ ಅಡಗು ತಾಣಗಳಾಗಿವೆ. ಭಯೋತ್ಪಾದಕರಿಗೆ ಮೌಲ್ವಿಗಳು ಶಿಕ್ಷಣ ನೀಡುತ್ತಿದ್ದಾರೆ. ಹೀಗಾಗಿ, ರಾಷ್ಟ್ರೀಯ ತನಿಖಾ ದಳ (National investigation agency-NIA) ಸಿಬ್ಬಂದಿ ಮಸೀದಿ ಹಾಗೂ ಮದರಸಾಗಳಲ್ಲಿ ಹುಡುಕಿದರೆ ರಾಮೇಶ್ವರಂ ಕೆಫೆ ಬಾಂಬರ್ ಸಿಗುತ್ತಾನೆ ಎಂದು ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಕುಂದಲಹಳ್ಳಿಯಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ ಶಂಕಿತ ಉಗ್ರನನ್ನು ಬಂಧಿಸಬೇಕಾದರೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಪೊಲೀಸರು ರಾಜ್ಯದಲ್ಲಿರುವ ಎಲ್ಲ ಮದರಸಾಗಳನ್ನು ಶೋಧನೆ ಮಾಡಬೇಕು. ಯಾಕೆಂದರೆ, ಮದರಸಗಳೇ ಭಯೋತ್ಪಾದಕರ ತಾಣವಾಗಿದೆ. ಭಯೋತ್ಪಾದಕರಿಗೆ ಮೌಲ್ವಿಗಳು ಶಿಕ್ಷಣ ನೀಡುತ್ತಿದ್ದಾರೆ. ಬಾಂಬರ್ ಮಸೀದಿಗೆ ಹೋಗಿ ನಮಾಜ್ ಮಾಡಿ ಬಟ್ಟೆ ಬದಲಿಸಿದ್ದಾನೆ ಎಂದು ಆರೋಪ ಮಾಡಿದರು.

ರಾಮೇಶ್ವರಂ ಕೆಫೆ ಬಾಂಬರ್ ಕ್ಲಿಯರ್ ಪಿಕ್ಚರ್ ಬಿಡುಗಡೆ ಮಾಡಿದ ಎನ್‌ಐಎ!

ರಾಮೇಶ್ವರಂ ಕೆಫೆ ಬಾಂಬರ್ ಬಳ್ಳಾರಿಯಲ್ಲಿ ಓಡಾಟ ಮಾಡಿದ್ದಾನೆ. ನಂತರ, ಭಟ್ಕಳಕ್ಕೆ ಬಂದಿದ್ದಾನೆ ಅನ್ನೋ ಮಾಹಿತಿಯನ್ನು ಎನ್‌ಐಎ ನೀಡಿದ್ದಾರೆ. ಎನ್ ಐ ಎ ಪೊಲೀಸ್ ನವರು ಕರ್ನಾಟಕದಲ್ಲಿರುವ  ಮದರಸ ಮಸೀದಿ ಮೇಲೆ ದಾಳಿ ಮಾಡಿ ತನಿಖೆ ಮಾಡಬೇಕು. ಇನ್ನು ಬಾಂಬರ್ ಭಟ್ಕಳದಲ್ಲಿದ್ದಾನೆ ಎಂದು ಮಾಹಿತಿ ಬಂದಿದೆ. ಹೀಗಾಗಿ, ಭಟ್ಕಳದಲ್ಲಿರುವ ಎಲ್ಲ ಮಸೀದಿಗಳು ಹಾಗೂ ಮದರಸಗಳ ಮೇಲೆ ದಾಳಿ ಮಾಡಿದರೆ, ಶೇ.100ಕ್ಕೆ 100ರಷ್ಟು ಬಾಂಬರ್ ಎಲ್ಲಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ತಿಳಿಸಿದರು.

ಇನ್ನು ರಾಜ್ಯದ ಮದರಸಗಳು ಭಯೋತ್ಪಾದಕರ ತಾಣವಾಗುತ್ತಿದೆ. ಭಯೋತ್ಪಾದಕರಿಗೆ ಶಿಕ್ಷಣ ನೀಡುವ ಕೆಲಸವನ್ನ ಕರ್ನಾಟಕದ ಕೆಲವು ಮದರಸಗಳು ಮಾಡುತ್ತಿದೆ. ಅಲ್ಲಿದ್ದಂತಹ ಮೌಲ್ವಿಗಳು ಮಾಡುತ್ತಿದ್ದಾರೆ. ಎನ್‌ಐಎ ಹಾಗೂ ಪೊಲೀಸ್ ಇಲಾಖೆಗೆ ಬಲವಾಗಿ ಆಗ್ರಹ ಮಾಡುತ್ತೇನೆ. ತಾವು ಕರ್ನಾಟಕದಲ್ಲಿರುವ ಎಲ್ಲ ಮಸೀದಿಗಳು ಹಾಗೂ ಮದರಸಾಗಳ ಮೇಲೆ ದಾಳಿ ಮಾಡಿದರೆ, ರಾಮೇಶ್ವರಂ ಕೆಫೆಯ ಮೇಲೆ ಬಾಂಬ್ ಹಾಕಿದ ಆರೋಪಿ ಸಿಗುತ್ತಾನೆ ಎಂದು ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಹೇಳಿದ್ದಾರೆ.

Rameshwaram cafe blast: ಆರೋಪಿ ಸುಳಿವಿಗೆ ₹10 ಲಕ್ಷ ಬಹುಮಾನ, ಅಮಾಯಕರಿಗೆ ತೊಂದರೆ?

ಬೆಂಗಳೂರು (ಮಾ.09): ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಬ್ಲಾಸ್ಟ್ ಆರೋಪಿಯ ಸ್ಪಷ್ಟ ಫೋಟೋವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಿಡುಗಡೆ ಮಾಡಿದೆ. ಇನ್ನು ಈತನ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದಿಂದ ಬಾಂಬರ್‌ಗಾಗಿ ಭಾರಿ ಶೋಧನೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬಾಂಬರ್‌ನ ಎಲ್ಲ ಸಂಚಾರ ಸುಳಿವನ್ನು ಜಾಲಾಡುತ್ತಿದ್ದರೂ ಬಾಂಬರ್ ಮಾತ್ರ ಪೊಲೀಸರ ಕಣ್ತಪ್ಪಿಸಿಕೊಂಡೇ ಓಡಾಡುತ್ತಿದ್ದಾರೆ. ಹೀಗಾಗಿ, ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ಶಂಕಿತ ಉಗ್ರ ಬಳ್ಳಾರಿಯಲ್ಲಿ ಸಂಚಾರ ಮಾಡಿದ ಸಿಸಿಟಿವಿ ಕ್ಯಾಮರಾವನ್ನು ಆಧರಿಸಿ ರಾಷ್ಟ್ರೀಯ ತನಿಖಾ ದಳದಿಂದ ಇರುವುದರಲ್ಲಿಯೇ ಸ್ಪಷ್ಟವಾದ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ.

ರಾಷ್ಟ್ರೀಯ ತನಿಖಾ ದಳದಿಂದ ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಶಂಕಿತ ಉಗ್ರ ಬಳ್ಳಾರಿಯಲ್ಲಿ ಸಂಚಾರ ಮಾಡಿದ 4 ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಇನ್ನು ಆರೋಪಿ ಪತ್ತೆಗಾಗಿ ಸಾರ್ವಜನಿಕರ ಸಹಕಾರಕ್ಕಾಗಿ ಪೋಟೋ ರಿಲೀಸ್ ಮಾಡಲಾಗಿದ್ದು, ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08029510900, 8904241100 ಕರೆ ಮಾಡಿ ಅಥವಾ info.blr.nia@gov.in ಗೆ ಇಮೇಲ್ ಮಾಡುವಂತೆ ಮನವಿ ಮಾಡಲಾಗಿದೆ. 

Follow Us:
Download App:
  • android
  • ios