ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಗಾಯಾಳು ಮಹಿಳೆಗೆ ಯಶಸ್ವಿ ಸರ್ಜರಿ
ಬಾಂಬ್ ಸ್ಫೋಟದ ಗಾಯಾಳು ಸ್ವರ್ಣಾಂಭಾಗೆ ಸತತ ನಾಲ್ಕು ತಾಸು ಯಶಸ್ವಿಯಾಗಿ ಸರ್ಜರಿ ಮಾಡಲಾಗಿದೆ ಎಂದು ಬ್ರೂಕ್‌ಫೀಲ್ಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ। ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು (ಮಾ.2): ಬಾಂಬ್ ಸ್ಫೋಟದ ಗಾಯಾಳು ಸ್ವರ್ಣಾಂಭಾಗೆ ಸತತ ನಾಲ್ಕು ತಾಸು ಯಶಸ್ವಿಯಾಗಿ ಸರ್ಜರಿ ಮಾಡಲಾಗಿದೆ ಎಂದು ಬ್ರೂಕ್‌ಫೀಲ್ಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ। ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಸರ್ಜರಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಗಾಯಾಳು ಸ್ವರ್ಣಾಂಭ ಅವರಿಗೆ ಸರ್ಜರಿ ಆಗಿದೆ. ದೇವರ ದಯೆಯಿಂದ ಸರ್ಜರಿ ಯಶಸ್ವಿಯಾಗಿದೆ. ಸತತ ನಾಲ್ಕು ತಾಸಿನ ಶ್ರಮದಿಂದ ನಾಲ್ವರು ಸರ್ಜನ್‌ಗಳು ಯಶಸ್ವಿಯಾಗಿ ಸರ್ಜರಿ ಮಾಡಿದ್ದಾರೆ ಎಂದರು.
ಒಂದೇ ತಿಂಗಳಲ್ಲಿ ನಿಜವಾಯ್ತು ಕೋಡಿಮಠದ ಶ್ರೀಗಳ 'ಸ್ಫೋಟಕ' ಭವಿಷ್ಯ! ಮುಂದೆ ಕಾದಿದೆ ಮತ್ತೊಂದು ಗಂಡಾಂತರ!
ಕೆನ್ನೆ ಒಳಗೆ ಗಾಜಿನ ಚೂರು ಹೋಗಿತ್ತು. ಕೆನ್ನೆ ಹಾಗೂ ಎದೆ ಸೇರಿದಂತೆ ಹಲವು ಭಾಗಗಳಲ್ಲಿ ಸರ್ಜರಿ ಮಾಡಲಾಗಿದೆ. ಸ್ಫೋಟದಲ್ಲಿ ಸ್ವರ್ಣಾಂಭಾ ಅವರಿಗೆ ಶೇ.40ರಷ್ಟು ಗಾಯಗಳಾಗಿದೆ. ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಒಂದು ದಿನ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುವುದು. ಆರೋಗ್ಯ ಸ್ಥಿರವಾದ ಬಳಿಕ ವಾರ್ಡ್‌ಗೆ ಶಿಫ್ಟ್ ಮಾಡುವುದಾಗಿ ಹೇಳಿದರು.
'ರಾಮೇಶ್ವರ ಕೆಫೆಯಲ್ಲಿ ಈ ಹಿಂದೆ 2 ಅನಾಥ ಬ್ಯಾಗ್ ಸಿಕ್ಕಿತ್ತು..: ಕೆಫೆ ಒಡತಿ ದಿವ್ಯಾ ರಾವ್ ಹೇಳಿದ್ದೇನು?
ಸ್ವರ್ಣಾಂಭಾ ಅವರಿಗೆ ಆಂತರಿಕ ಗಾಯಾಳುಗಳು ಆಗಿರುವ ಬಗ್ಗೆ ಸದ್ಯಕ್ಕೆ ತಿಳಿದು ಬಂದಿಲ್ಲ. ಮಧುಮೇಹಿ ಆಗಿರುವುದರಿಂದ ಗಾಯಗಳು ಒಣಗಲು ತಡವಾಗುತ್ತದೆ. ನಮ್ಮ ಕಡೆಯಿಂದ ಅವರಿಗೆ ಏನೆಲ್ಲಾ ಚಿಕಿತ್ಸೆ ನೀಡಬೇಕೋ ಎಲ್ಲವನ್ನೂ ಮಾಡಲಾಗುತ್ತದೆ. ಇನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗಾಯಾಳುಗಳ ಚಿಕಿತ್ಸಾ ವೆಚ್ಚದ ಭರಿಸುವಂತೆ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ವೈದ್ಯರು ಪ್ರತಿಕ್ರಿಯಿಸಿದರು.