Asianet Suvarna News Asianet Suvarna News

ರಾಮ ಜನ್ಮಭೂಮಿ ಹೋರಾಟಗಾರರ ಕೇಸ್ ರೀ ಓಪನ್: ಇದೆಲ್ಲ ಆಕಸ್ಮಿಕವೆಂದ ಗೃಹ ಸಚಿವ ಪರಮೇಶ್ವರ

ರಾಜ್ಯದ ಎಲ್ಲ ಹಳೆಯ ಪೆಂಡಿಂಗ್‌ ಕೇಸ್‌ ಕ್ಲೋಸ್ ಮಾಡುವಾಗ ಎಲ್ಲವನ್ನು ರೀ ಓಪನ್‌ ಮಾಡಿದಾಗ ರಾಮಜನ್ಮಭೂಮಿ ಕೇಸ್‌ ಆಕಸ್ಮಿಕವಾಗಿ ಮುನ್ನೆಲೆಗೆ ಬಂದಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.

Ram Janmabhoomi fighters case reopened it was accidental said Home Minister Parameshwar sat
Author
First Published Jan 1, 2024, 5:46 PM IST | Last Updated Jan 1, 2024, 5:46 PM IST

ಬೆಂಗಳೂರು (ಜ.01): ರಾಜ್ಯದ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ವರ್ಷಾನುಗಟ್ಟಲೆ ಕ್ಲಿಯರ್‌ ಆಗದೇ ಪೆಂಡಿಂಗ್ ಉಳಿದಿರುವ ಪ್ರಕರಣಗಳನ್ನು ಕ್ಲಿಯರ್ ಮಾಡುವಂತೆ ಆದೇಶ ಕೊಡಲಾಗಿದೆ. ಆದರಲ್ಲಿ ಹುಬ್ಬಳ್ಳಿಯಲ್ಲಿ ಬಾಕಿಯಿದ್ದ 32 ಕೇಸ್‌ಗಳನ್ನು ರೀ ಓಪನ್ ಮಾಡಾಗಿದ್ದು, ಇದರಲ್ಲಿ ರಾಮ ಜನ್ಮಭೂಮಿಗಾಗಿ ಹೋರಾಟ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಇದೆಲ್ಲವೂ ಆಕಸ್ಮಿಕವೆಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ರಾಮ ಭಕ್ತರ ಮೇಲೆ ಸರ್ಕಾರ ದ್ವೇಷ ಸಾಧಿಸುತ್ತಿದೆ ಎಂಬ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆ ರೀತಿ ಏನು ಇಲ್ಲ. ಹಳೆ ಕೇಸುಗಳನ್ನೆಲ್ಲ ಕ್ಲಿಯರ್ ಮಾಡಬೇಕು ಎಂದು ಸೂಚನೆ ಕೊಡಲಾಗಿದೆ. ರಾಜ್ಯಾದ್ಯಂತ ಇರುವ ಹಳೆ ಪ್ರಕರಣಗಳನ್ನ ಕ್ಲಿಯರ್ ಮಾಡುವಂತೆ ಸಂದೇಶ ಕೊಟ್ಟಿದ್ದೆವು. ವರ್ಷಾನುಗಟ್ಟಲೆ ಬಾಕಿ ಉಳಿದಿರುವ ಕೇಸ್ ಗಳನ್ನು ಕ್ಲಿಯರ್ ಮಾಡಲು ಹೇಳಿದ್ದೆವು. ಅದರಲ್ಲಿ ಹುಬ್ಬಳ್ಳಿಯಲ್ಲಿ 32 ಕೇಸುಗಳು ಪೆಂಡಿಂಗ್ ಇತ್ತು. ಅದನ್ನು ಓಪನ್ ಮಾಡಿ ಕ್ಲಿಯರ್ ಮಾಡುವ ವೇಳೆ ಈ ಕೇಸ್ ಬಂದಿದೆ. ಈ ಪ್ರಕರಣದಲ್ಲಿ ಅರೆಸ್ಟ್ ಮಾಡಿ ಕಸ್ಟಡಿಗೆ ಕೊಟ್ಟಿದಾರೆ. ಎಲ್ಲರಿಗೂ ಹೇಗೆ ಮಾಡಿದ್ದಾರೀ ಇವರಿಗೂ ಹಾಗೆ ಮಾಡಿದ್ದಾರೆ. ಇದರಲ್ಲಿ ಬೇರೆ ಉದ್ದೇಶ ಇಟ್ಕೊಂಡಿಲ್ಲ ಅದು ತಪ್ಪು ಕಲ್ಪನೆ. ಇದನ್ನ ಬಿಟ್ರೆ ಬೇರೆ ಏನಿಲ್ಲ ಎಂದು ಹೇಳಿದ್ದಾರೆ.

ರಾಮ ಜನ್ಮಭೂಮಿಗಾಗಿ 30 ವರ್ಷದ ಹಿಂದೆ ಹೋರಾಡಿದ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿರುವ ಕಾಂಗ್ರೆಸ್‌ ಸರ್ಕಾರ!

ಹಿಂದೂ ಕಾರ್ಯಕರ್ತರು ಇನ್ನೊಂದು ಕಾರ್ಯಕರ್ತರು ಎನ್ನುವ ಟಾರ್ಗೆಟ್ ಮಾಡಿ ಕೇಸ್‌ ರೀ ಓಪನ್ ಮಾಡಿ ಬಂಧಿಸುವ ಪ್ರಯತ್ನ ಮಾಡಿಲ್ಲ. ಕಾನೂನಿನ ಪ್ರಕಾರ ಯಾವ ಕ್ರಮ ಆಗಬೇಕು ಪೊಲೀಸ್ ಇಲಾಖೆ ಮಾಡುತ್ತದೆ. ಇದಕ್ಕೆ ಕೋಮು ಬಣ್ಣ ಕಟ್ಟುವುದು ಸೂಕ್ತ ಅಲ್ಲ. ಆಕಸ್ಮಿಕವಾಗಿ ಆಗಿರಬಹುದು ಅಷ್ಟೇ. ಅವರೊಬ್ಬರನ್ನೇ ಮಾಡಿದ್ದಾರೆ ಒಪ್ಪಿಕೊಳ್ಳಬಹುದಿತ್ತು. ಆದರೆ ಬೇರೆ ಬೇರೆ ಎಲ್ಲಾ ಹಳೆ ಪ್ರಕರಣಗಳನ್ನು ಕ್ಲಿಯರ್ ಮಾಡುವ ಸಂದರ್ಭದಲ್ಲಿ ಈ ಕೇಸ್ ಕೂಡ ಬಂದಿದೆ. ಇವರೊಬ್ಬರೇ ಅಲ್ಲ ಹಳೇ ಕೇಸ್ ಯಾವುದು ಇದೆ ಎಲ್ಲಾ ಕ್ಲಿಯರ್ ಮಾಡುವಂತದ್ದು ಸೂಚನೆ ಹಾಗಾಗಿ ಬಂದಿದೆ. ಈ ಕೇಸ್ ಯಾಕೆ ಪೆಂಡಿಂಗ್ ನಲ್ಲಿ ಇತ್ತು ಎಂಬ ಪ್ರಶ್ನೆ 
ಈ ರೀತಿ ಬಹಳ ಕಡೆ ಕೇಸುಗಳನ್ನು ಬಿಟ್ಟು ಬಿಡುತ್ತಾರೆ. ಯಾವಾಗ್ಲೂ ಒಮ್ಮೆ ಕೇಸ್ ರೀ ಓಪನ್ ಆಗುತ್ತದೆ. ಅಂತದ್ರಲ್ಲಿ ಇದು ಒಂದು ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಿ: ಯಶ್‌ಪಾಲ್‌ ಸುವರ್ಣ ಮನವಿ

ಹಿಂದೂ ಕಾರ್ಯಕರ್ತರ ಬಂಧನದ ಬಗ್ಗೆ ಪೊಲೀಸ್ ಕಮಿಷನರ್‌ಗೂ ನಾನು ಮಾತನಾಡುತ್ತೇನೆ. ಅಂಥದ್ದು ಏನಿತ್ತು ಈ ಪ್ರಕರಣದಲ್ಲಿ ಅನ್ನೋದರ ಕುರಿತಾಗಿ ಮಾತನಾಡುತ್ತೇನೆ. ನನಗೆ ಬಂದಿರುವ ರಿಪೋರ್ಟ್ ಪ್ರಕಾರ ಹಳೆ ಕೇಸ್ ಕ್ಲಿಯರ್ ಮಾಡುವ ಸಂದರ್ಭದಲ್ಲಿ ಇದು ಬಂದಿದೆ. ಎಲ್ಲಾ ಹಳೆಯ ಪ್ರಕರಣಗಳಲ್ಲೂ ಇದೇ ರೀತಿ ಕ್ರಮ ಆಗ್ತಾಯಿದೆ. ರಾಮಮಂದಿರ ಉದ್ಘಾಟನೆ ವೇಳೆ ಈ ಪ್ರಕರಣ ಚರ್ಚೆಯಾಗ್ತಿರುವ ವಿಚಾರ ಉದ್ದೇಶ ಪೂರ್ವಕವಾಗಿ ಈ ಸಮಯದಲ್ಲಿ ಯಾರಾದರೂ ಮಾಡುತ್ತಾರೆಯೇ? ಆ ರೀತಿ ಏನೂ ಇಲ್ಲ ಇದೊಂದು ಆಕಸ್ಮಿಕ ಅಷ್ಟೇ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.

Latest Videos
Follow Us:
Download App:
  • android
  • ios