ಆರೆಸ್ಸೆಸ್ ನಿಷೇಧಿಸುವಂತೆ ಸಿಎಂಗೆ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ರಾಜೂ ಗೌಡ ವಾಗ್ದಾಳಿ. ಇದು ಜನಪ್ರಿಯತೆ ಗಳಿಸುವ ತಂತ್ರ., ಆರೆಸ್ಸೆಸ್ ಬ್ಯಾನ್ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ ನೆರೆ ಹಾನಿ ವಿಷಯವನ್ನು ಮರೆಮಾಚುವ ಬದಲು, ಕೆಲಸ ಮಾಡಿ ಹೀರೋ ಆಗಿ ಎಂದು ಖರ್ಗೆಗೆ ತರಾಟೆ.
ಯಾದಗಿರಿ,(ಅ.13): RSS ಬಗ್ಗೆ ಮಾತನಾಡಿದ್ರೆ ಜನಪ್ರಿಯರಾಗುತ್ತಾರೆ ಎಂಬ ಭ್ರಮೆಯಲ್ಲಿ ಪತ್ರ ಬರೆದಿದ್ದಾರೆ. ಆರೆಸ್ಸೆಸ್ ಬ್ಯಾನ್ ಮಾಡುವುದು ಯಾರಿಂದಲೂ ಆಗಿಲ್ಲ, ಮುಂದೆಯೂ ಆಗಲ್ಲ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ರಾಜೂ ಗೌಡ ವಾಗ್ದಾಳಿ ನಡೆಸಿದರು.
ಸಚಿವ ಪ್ರಿಯಾಂಕ್ ಖರ್ಗೆಯವರು RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ಕಾರ್ಯಕ್ರಮಗಳನ್ನು ಸರ್ಕಾರಿ ಸ್ಥಳಗಳಲ್ಲಿ ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೆದ ಪತ್ರದ ವಿಚಾರವಾಗಿ ಇಂದು ಯಾದಗಿರಿಯಲ್ಲಿ ಪ್ರತಿಕ್ರಿಯಿಸಿದ ರಾಜೂ ಗೌಡ ಅವರು, RSS ಬಗ್ಗೆ ಮಾತನಾಡಿ ಜನಪ್ರಿಯತೆ ಗಳಿಸುವ ಯತ್ನ ಬಿಡಿ. ನಿಮ್ಮ ಇಲಾಖೆಯಲ್ಲಿ ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ನೆರೆಯಿಂದ ಎಷ್ಟು ಹಾನಿಯಾಗಿದೆ, ಅದರ ಬಗ್ಗೆ ಮಾಹಿತಿ ಕೊಡಿ.
ಇದನ್ನೂ ಓದಿ: 'ನಿಮಗೆ ಧಂ ಇದ್ರೆ ಜಮೀರ್‌ಗೆ ಬಿಳಿ ಟೋಪಿ ಸಾಬಣ್ಣ ಅನ್ನಿ' ಡಿಕೆಶಿಗೆ ಪ್ರತಾಪ್ ಸಿಂಹ ಸವಾಲು!
ಆರೆಸ್ಸೆಸ್ ಯಾರಿಗೂ ತೊಂದರೆ ಮಾಡಿಲ್ಲ:
RSS ಯಾರಿಗೂ ತೊಂದರೆ ಮಾಡಿಲ್ಲ. ಇದು ಮಹಾಸಂಘಟನೆ ಜನಸೇವೆಯಲ್ಲಿ ತೊಡಗಿರುವ ಸಂಸ್ಥೆ – ಇದರಲ್ಲಿ ಜಾತಿ, ಪಕ್ಷಗಳಿಲ್ಲ. ಆರೆಸ್ಸೆಸ್ ಶತಾಬ್ದಿ ಸಂಭ್ರಮ ತಡೆಯಲು ಮಾಡಿದ ಷಡ್ಯಂತ್ರ. ಹೀರೋ ಆಗಲು ಸಿಎಂಗೆ ಪತ್ರ ಬರೆದಿದ್ದೀರಿ, ಆದರೆ ನೆರೆ ಹಾನಿ ವಿಷಯವನ್ನು ಡೈವರ್ಟ್ ಮಾಡುವುದು ಬಿಟ್ಟು, ಕೆಲಸ ಮಾಡಿ ನಿಜವಾದ ಹೀರೋ ಆಗಿ! ಎಂದು ಖರ್ಗೆಯವರನ್ನು ತರಾಟೆಗೆ ತೆಗೆದುಕೊಂಡರು.
