ಬಿಜೆಪಿ ಶಾಸಕ ಮುನಿರತ್ನಗೆ 'ಏಯ್ ಕರಿ ಟೋಪಿ ಎಂಎಲ್ಲೆ' ಎಂದ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ. ಡಿಕೆಶಿಯವರ ಮಾತುಗಳು ರೌಡಿಗಳಂತಿವೆ, ಈ ವರ್ತನೆ ಅವರ ಸಿಎಂ ಆಗುವ ಕನಸಿಗೆ ಅಡ್ಡಿಯಾಗಬಹುದು ಇದೇ ರೀತಿ ಮುಂದುವರೆದರೆ 2028ಕ್ಕೆ ಅವರೂ 'ಜಾಬ್‌ಲೆಸ್' ಆಗುತ್ತಾರೆ 

ಮೈಸೂರು (ಅ.13): ಡಿಕೆ ಶಿವಕುಮಾರ ಸಿಎಂ ಆಗಬೇಕು ಅಂತಾ ಕನಸು ಕಾಣುತ್ತಿದ್ದಾರೆ. ಸಿಎಂ ಆಗುವ ಕನಸು ಕಂಡರೆ ಸಾಲದು, ಘನತೆ, ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ನಿಮ್ಮ ಮಾತು ಒಳ್ಳೆ ರೌಡಿಗಳ ತರ ಇರುತ್ತೆ ಎಂದು ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಬಿಜೆಪಿ ಶಾಸಕ ಮುನಿರತ್ನಗೆ 'ಏಯ್ ಕರಿ ಟೋಪಿ ಎಂಎಲ್ಲೆ ಬಾ ಇಲ್ಲಿ' ಎಂಬ ಡಿಕೆಶಿ ಹೇಳಿಕೆಗೆ ವಿಚಾರವಾಗಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ಅವರು, ರಾಜರಾಜೇಶ್ವರಿನಗರದಲ್ಲಿ ಕುಸುಮ ಗೆಲ್ಲಿಸಬೇಕು ಅಂತಾ ತನು ಮನ ಧನ ಎಲ್ಲ ಹಾಕಿದ್ರು. ಆದ್ರೂ ಕುಸುಮ ಸೋತರು. ಅಲ್ಲಿನ ಜನರು ಕುಸುಮ ಕೈಹಿಡಿಯಲಿಲ್ಲ. ಇದರಿಂದ ಹತಾಶೆಗೊಂಡು ಯಾವ ರೀತಿ ನಡೆದುಕೊಳ್ಳುತ್ತೀದ್ದಾರೆ ಎಂಬುದಕ್ಕೆ ನಿನ್ನೆಯ ಒಂದು ಘಟನೆ ಸಾಕು. 'ಡಿಕೆ ಶಿವಕುಮಾರ ಅವ್ರೇ, ಒಬ್ಬ ಚುನಾಯಿತ ಪ್ರತಿನಿಧಿಯನ್ನ ಏಕವಚನದಲ್ಲಿ ಕರೆಯುತ್ತೀರ?. ನಿನ್ನೆಯ ಸಭೆಯಲ್ಲಿ ಶಾಸಕ ಮುನಿರತ್ನ ಬದಲು ಜಮೀರ್ ಇದ್ದಿದ್ರೆ 'ಏಯ್ ಬಿಳಿ ಟೋಪಿ ಸಾಬಣ್ಣ ಬಾ ಇಲ್ಲಿ' ಅಂತಿದ್ರಾ? ನಿಮಗೆ ಧಮ್ ಇದ್ರೆ ಹಾಗೆ ಕರೀರಿ ನೋಡೋಣ ಎಂದು ಸವಾಲು ಹಾಕಿದರು.

ಇದನ್ನೂ ಓದಿ:'ಆರೆಸ್ಸೆಸ್ ಒಂದು ಪ್ಯಾಸಿಸ್ಟ್ ಸಂಸ್ಥೆ..' ಪ್ರಿಯಾಂಕ್‌ ಖರ್ಗೆ ಬೆನ್ನಿಗೆ ನಿಂತ ಸಚಿವ ದಿನೇಶ್ ಗುಂಡೂರಾವ್

ಡಿಕೆಶಿಯವ್ರೇ ನಿಮ್ಮ ನಡೆವಳಿಕೆ ನೋಡಿ ಸಿದ್ದರಾಮಯ್ಯನವರು ಖುಷಿ ಪಡ್ತಿದ್ದಾರೆ. ಯಾಕೆಂದರೆ ಇದನ್ನೇ ಮುಂದೆ ಇಟ್ಟುಕೊಂಡು ನಿಮ್ಮನ್ನ ಸಿಎಂ ಆಗದ ರೀತಿ ನೋಡಿಕೊಳ್ಳಬಹುದು. ಇನ್ನಾದರೂ ನಿಮ್ಮ ನಡೆವಳಿಕೆ ಬದಲಿಸಿಕೊಳ್ಳಿ. ಸಾರ್ವಜನಿಕರ ಎದುರಲ್ಲೇ ರೌಡಿಯಂತೆ ಮಾತನಾಡುವುದು ನಿಲ್ಲಿಸಿ. ನಿಮ್ಮ ಹಿತದೃಷ್ಟಿಯಿಂದ ಈ ಮಾತು ಹೇಳುತ್ತಿದ್ದೇನೆ. ಸ್ಥಳೀಯ ಶಾಸಕರಿಗೆ, ಸಂಸದರಿಗೆ ಗೌರವ ಕೊಡುವುದು ಕಲಿಯಿರಿ. ಕುಸುಮ ಅವರನ್ನು ಬೇಕಾದರೆ ಎಂ ಎಲ್ ಸಿ ಮಾಡಿಸಿ, ರಾಜ್ಯಸಭೆ ಸ್ಥಾನ ಕೊಡಿಸಿ ಯಾರಬೇಡ ಅಂತಾರೆ. ಅದನ್ನುಬಿಟ್ಟು ಸ್ಥಳೀಯ ಶಾಸಕರಿಗೆ ಯಾಕೆ ಕಿರುಕುಳ ಕೊಡ್ತೀರಾ? ಅಧಿಕಾರ ದುಡ್ಡಿನ ಮದದಲ್ಲಿ ಇದೇ ರೀತಿ ನಡೆದುಕೊಂಡರೆ 2028ಕ್ಕೆ ಡಿಕೆ ಶಿವಕುಮಾರ ಕೂಡ ಜಾಬ್‌ಲೆಸ್ ಆಗುತ್ತಾರೆ. ಆಗ ಅವರನ್ನು ಅಧಿಕಾರಕ್ಕೆ ಬಂದ ಬಿಜೆಪಿ ಇದೇ ರೀತಿ ನಡೆಸಿಕೊಂಡರೆ ಹೇಗರುತ್ತೆ? ಎಂದು ಖಾರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ: ನಾನು ಹಿಂದೂ ವಿರೋಧಿಯಲ್ಲ, ಆರೆಸ್ಸೆಸ್ ವಿರೋಧಿ: ಪ್ರಿಯಾಂಕ್ ಖರ್ಗೆ ಮತ್ತೆ ವಾಗ್ದಾಳಿ

ಡಿಕೆಶಿಯವರ ವಿವಾದಾತ್ಮಕ ಹೇಳಿಕೆಯು ಬಿಜೆಪಿ-ಕಾಂಗ್ರೆಸ್ ನಡುವಿನ ಘರ್ಷಣೆಯನ್ನು ಹೆಚ್ಚಿಸಿದೆ. ಪ್ರತಾಪ್ ಸಿಂಹರ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆರೆಸ್ಸೆಸ್ ಕುರಿತಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗಳು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.