Asianet Suvarna News Asianet Suvarna News

ಕೊರೋನಾ 3ನೇ ಅಲೆ ತಡೆಯೋದು ಹೇಗೆ ? ರಾಜೀವ್ ಚಂದ್ರಶೇಖರ್ ಜೊತೆ ಮಾತುಕತೆ

  • ಕೊರೋನಾ ವೈರಸ್ ಮೂರನೇ ಅಲೆ ತಡೆಯುವುದು ಹೇಗೆ ?
  • ಕೇಂದ್ರದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಜೊತೆ ಮಾತುಕತೆ
Rajeev Chandrasekhar to join Namma Bengaluru Foundation in Webinar to discuss on how to prevent COVID-19 Third wave dpl
Author
Bangalore, First Published Aug 6, 2021, 1:12 PM IST

ಬೆಂಗಳೂರು(ಆ.06): ಕೇಂದ್ರದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಜೊತೆ ಮಾತುಕತೆ ನಮ್ಮ ಬೆಂಗಳೂರು ಫೌಂಡೇಷನ್‌ನಿಂದ ವೆಬಿನಾರ್ ನಡೆಯಲಿದೆ. ಇದರಲ್ಲಿ ಕೊರೋನಾ ವೈರಸ್ ಮೂರನೇ ಅಲೆಯನ್ನು ತಡೆಯುವ ಕುರಿತು ಚರ್ಚೆ ನಡೆಯಲಿದೆ. ಆಗಸ್ಟ್ 7ರಂದು ಸಂಜೆ 7.30ರಿಂದ 8.30ರ ತನಕ ಚರ್ಚೆ ನಡೆಯಲಿದೆ.

ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕೇಂದ್ರದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ವೆಬಿನಾರ್‌ನಲ್ಲಿ ಭಾಗವಹಿಸಲಿದ್ದು, ಕೊರೋನಾ ಮೂನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಲಿದ್ದಾರೆ.

ಸಾಮಾಜಿಕ ಜಾಲತಾಣ ಬ್ಲಾಕ್‌ ಮಾಡುವ ಚಿಂತನೆ ಇಲ್ಲ: RC

ಆಸಕ್ತರು  https://us02web.zoom.us/j/85954354185?pwd=c2l2bDFBTzQ0dzNadm1ydk5sYkpBdz09 ನಲ್ಲಿ ಸಂಜೆ 7.20ಕ್ಕೆ ಲಾಗಿನ್ ಆಗಿ ಈ ವೆಬಿನಾರ್‌ನಲ್ಲಿ ಭಾಗವಹಿಸಬಹುದಾಗಿದೆ.

ದೇಶದಲ್ಲಿ ಕೊರೋನಾ ಭೀಕರ ಎರಡನೇ ಅಲೆಯ ನಂತರ ಈಗ ಮೂರನೇ ಅಲೆಯ ಭೀತಿ ಹೆಚ್ಚಾಗಿದೆ. ಈಗಾಗಲೇ ನೆರೆ ರಾಜ್ಯ ಕೇರಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಮೂರನೇ ಅಲೆ ತಡೆಯುವ ಪ್ರಯತ್ನವನ್ನು ನಡೆಸಲಾಗುತ್ತಿದೆ.

ಕರ್ನಾಟಕದಲ್ಲಿ ಎರಡು ದಿನಗಳ ಹಿಂದೆ 1769 ಕೇಸುಗಳು ಪತ್ತೆಯಾಗಿತ್ತು. ಕರ್ನಾಟಕದಲ್ಲಿ ಸದ್ಯ 24305 ಸಕ್ರಿಯ ಸೋಂಕಿತರಿದ್ದಾರೆ. ಕೇರಳದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 176048 ಇದ್ದು ಗಡಿಭಾಗದಲ್ಲಿ ಎಚ್ಚರ ವಹಿಸಲಾಗುತ್ತಿದೆ.

Follow Us:
Download App:
  • android
  • ios