ಸಾಮಾಜಿಕ ಜಾಲತಾಣ ಕಂಪೆನಿಗಳ ಜೊತೆ ಹೊಣೆಗಾರಿಕೆ ಮತ್ತು ಬಳಕೆದಾರರ ಸುರಕ್ಷತೆ ಕುರಿತಂತೆ ಸರ್ಕಾರ ಮಾತುಕತೆಯಲ್ಲಿ ತೊಡಗಿದೆ ಸಾಮಾಜಿಕ ಜಾಲತಾಣಗಳನ್ನು ಬ್ಲಾಕ್‌ ಮಾಡುವ ಯಾವುದೇ ಯೋಚನೆ ಸರ್ಕಾರ ಮುಂದಿಲ್ಲ ಸಂಸತ್ತಿನಲ್ಲಿ ಐಟಿ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಮಾಹಿತಿ

ನವದೆಹಲಿ (ಆ.06): ಸಾಮಾಜಿಕ ಜಾಲತಾಣ ಕಂಪೆನಿಗಳ ಜೊತೆ ಹೊಣೆಗಾರಿಕೆ ಮತ್ತು ಬಳಕೆದಾರರ ಸುರಕ್ಷತೆ ಕುರಿತಂತೆ ಸರ್ಕಾರ ಮಾತುಕತೆಯಲ್ಲಿ ತೊಡಗಿದೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳನ್ನು ಬ್ಲಾಕ್‌ ಮಾಡುವ ಯಾವುದೇ ಯೋಚನೆ ಸರ್ಕಾರ ಮುಂದಿಲ್ಲ ಎಂದು ಸಂಸತ್ತಿನಲ್ಲಿ ಐಟಿ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಗುರುವಾರ ಹೇಳಿದರು.

ರಾಜ್ಯಸಭೆಗೆ ಉತ್ತರ ನೀಡಿದ ಅವರು, ‘ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಕುಂದುಕೊರತೆಗಳಿರುವ ಬಗ್ಗೆ ಸರ್ಕಾರಕ್ಕೆ ಹಲವು ಮನವಿಗಳು ಬಂದಿವೆ. ಅವುಗಳನ್ನು ಬಗೆಹರಿಸಲು ಕಂಪೆನಿಗಳ ಜೊತೆ ಸರ್ಕಾರ ಸದಾ ಸಂಪರ್ಕದಲ್ಲಿದೆ. 

ಪೆಗಾಸಸ್ ವಿಚಾರವಾಗಿ ಚರ್ಚೆ, ಈ ಸುದ್ದಿ ಹಿಂದೆ ಯಾರಿದ್ದಾರೆಂದು ತಿಳಿಯೋಣ: ಆರ್‌ಸಿ

ಬಲಕೆದಾರರ ಸುರಕ್ಷತೆಯನ್ನು ಕಾಪಾಡಲು ಮತ್ತು ಅವುಗಳ ಹೊಣೆಗಾರಿಕೆ ಕುರಿತು ಸಲಹೆಗಳನ್ನು ಸರ್ಕಾರ ನೀಡುತ್ತಿದೆ. ಭಾರತದ ಪ್ರಜಾಪ್ರಭುತ್ವ ಸಂವಿಧಾನದ ರಕ್ಷಣೆ ಪಡೆದಿದೆ. 

ಸಾಮಾಜಿಕ ಜಾಲತಾಣಗಳು ಪ್ರಜಾಪ್ರಭುತ್ವವನ್ನು ನಾಶಪಡಿಸಲು ಸಾಧ್ಯವಿಲ್ಲ. ಐಟಿ ಕಾಯಿದೆ 2000ದ ಪ್ರಕಾರ ಮುಕ್ತ ಮತ್ತು ವಿಶ್ವಾಸಾರ್ಹ ಅಂತರ್ಜಾಲ ಸೇವೆ ಒದಗಿಸುವ ತಾಣಗಳಿಗೆ ಮುಕ್ತ ಅವಕಾಶ ನೀಡಲಿದೆ’ ಎಂದರು.