Asianet Suvarna News Asianet Suvarna News

Rajakaluve Encroachment: ಮತ್ತೆ ಘರ್ಜಿಸಲು ಆರಂಭಿಸಿದ ಬುಲ್ಡೋಜರ್‌

  • ಮತ್ತೆ ಘರ್ಜಿಸಲು ಆರಂಭಿಸಿದ ಬುಲ್ಡೋಜರ್‌!
  • ಮಹದೇವಪುರ, ಬೊಮ್ಮನಹಳ್ಳಿ, ದಾಸರಹಳ್ಳಿ, ಯಲಹಂಕದಲ್ಲಿ ಜೆಸಿಬಿ ಆರ್ಭಟ
  • ತೆರವು ಕಾರ್ಯ ಚುರುಕು ಕೆಲವೆಡೆ ಜನರಿಂದ ವಿರೋಧ
  • ಬಿಬಿಎಂಪಿಯೊಂದಿಗೆ ನಗರ ಜಿಲ್ಲಾಡಳಿತದಿಂದಲೂ ಒತ್ತುವರಿ ತೆರವು ಆರಂಭ

 

Rajakaluve Encroachment  bulldozer has started roaring again rav
Author
First Published Sep 16, 2022, 4:57 AM IST

 ಬೆಂಗಳೂರು (ಸೆ.16) : ನಗರದಲ್ಲಿ ರಾಜಕಾಲುವೆ ಹಾಗೂ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಗುರುವಾರವೂ ಮುಂದುವರೆದಿದ್ದು, ಮಹದೇವಪುರ, ಬೊಮ್ಮನಹಳ್ಳಿ, ದಾಸರಹಳ್ಳಿ ಹಾಗೂ ಯಲಹಂಕ ವಲಯದ 29 ಕಡೆ ತೆರವು ಕಾರ್ಯಾಚರಣೆ ನಡೆಸಲಾಗಿದೆ. ದಾಸರಹಳ್ಳಿ ವಲಯದ ನೆಲಗದರನಹಳ್ಳಿ ರಸ್ತೆಯ ರುಕ್ಮಿಣಿ ನಗರದಲ್ಲಿ 11 ಕಡೆ ಒತ್ತುವರಿ ಕಾರ್ಯಾಚರಣೆ ನಡೆಸಲಾಗಿದ್ದು, 3 ಗುಂಟೆಗೂ ಅಧಿಕ ಜಾಗದಲ್ಲಿ ಕಾಂಪೌಂಡ್‌, ಮೆಟ್ಟಿಲು. ಶೌಚಾಲಯ ಎಲೆಕ್ಟ್ರಿಕಲ್‌ ಬಾಕ್ಸ್‌ ಕೊಠಡಿ ಹಾಗೂ ಕಾಲುವೆಯ ಮೇಲಿದ್ದ ಮನೆಯ ಗೋಡೆಯನ್ನು ತೆರವು ಮಾಡಲಾಗಿದೆ.

ರಾಜಕಾಲುವೆ, ಕೆರೆ ಒತ್ತುವರಿ ಮಾಡಿದ 600 ಕಟ್ಟಡಗಳಿಗೆ ನೋಟಿಸ್‌: ತುಷಾರ್‌ ಗಿರಿನಾಥ್

ಯಲಹಂಕ ವಲಯಲ್ಲಿ ಎರಡು ಕಡೆ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಕುವೆಂಪು ನಗರ ವಾರ್ಡ್‌ ಸಿಂಗಾಪುರ ಲೇಔಟ್‌ ಸಿಂಗಾಪುರ ಕೆರೆ ಹಿಂಭಾಗದಲ್ಲಿರುವ ಲ್ಯಾಂಡ್‌ ಮಾರ್ಕ್ ಅಪಾಟ್‌್ರ್ಮಂಟ್‌ ತೂಬುಗಾಲುವೆ ಮೇಲೆ ನಿರ್ಮಿಸಲಾದ ಸೆಕ್ಯೂರಿಟಿ ಕೊಠಡಿ ತೆರವುಗೊಳಿಸಲಾಗಿದೆ. ಸಿಂಗಾಪುರ ಕೆರೆಯ ಬಳಿಯ ಮಳೆ ನೀರುಗಾಲುವೆ ಒತ್ತುವರಿ ಮಾಡಿಕೊಂಡು ಲೇಔಟ್‌ ನಿರ್ಮಾಣ ಮಾಡಿದ್ದು, ಒತ್ತುವರಿ ಜಾಗವನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ.

ಬೊಮ್ಮನಹಳ್ಳಿ ವಲಯದ ಕೋಣನಕುಂಟೆ ವ್ಯಾಪ್ತಿಯಲ್ಲಿ ಒಟ್ಟು 11 ಕಡೆ ಒತ್ತುವರಿ ತೆರವು ಮಾಡಲಾಗಿದೆ. ಈ ಪೈಕಿ ವಾಣಿಜ್ಯ ಕಟ್ಟಡ, 10 ಶೆಡ್‌ ಸೇರಿದಂತೆ ಸುಮಾರು 15 ಅಡಿ ಅಗಲ ಹಾಗೂ 330 ಅಡಿ ಉದ್ದದಷ್ಟುರಾಜಕಾಲುವೆ ಒತ್ತುವರಿ ತೆರವು ಮಾಡಲಾಗಿದೆ. ಹೊಂಗಸಂದ್ರದಲ್ಲಿ 3 ಒತ್ತುವರಿ ತೆರವು ಮಾಡಲಾಗಿದ್ದು, ಈ ಪೈಕಿ 7.5 ಮೀಟರ್‌ ಜಾಗದಲ್ಲಿ 160 ಚ.ಅಡಿಯಷ್ಟು1 ಕಟ್ಟಡ, 10 ಅಡಿಯ ಕಾಂಪೌಂಡ್‌ ಹಾಗೂ ಒಂದು ತೆರವು ಮಾಡಲಾಗಿದೆ.

ಮಹದೇವಪುರ ವಲಯ ಯಮಲೂರು ಬಳಿಯ ಎಪ್ಸಿಲಾನ್‌ ಹಿಂಭಾಗ ಬಳಿಯಿರುವ ಮುನೇಶ್ವರ ದೇವಸ್ಥಾನದ ಬಳಿ ಚರಂಡಿಯ ಮೇಲೆ ಅನಧಿಕೃತವಾಗಿ ಅಳವಡಿಸಿದ್ದ ಸ್ಲಾ್ಯಬ್‌ ತೆರವುಗೊಳಿಸಲಾಗಿದೆ. ಮುನ್ನೆನಕೊಳಲು ಶಾಂತಿನಿಕೇತನ ಲೇಔಡ್‌ನಲ್ಲಿದ್ದ ಎರಡು ಶೆಡ್‌ ತೆರವುಗೊಳಿಸಲಾಗಿದೆ.

ಸರ್ವೇ ಕಾರ್ಯಕ್ಕೆ ಒತ್ತು

ಒತ್ತುವರಿ ತೆರವಿನ ಜತೆಗೆ ಸರ್ವೇಗೆ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಮಹದೇವಪುರ ವಲಯ ವ್ಯಾಪ್ತಿಯ ವಾಗ್ದೇವಿ ಲೇಟ್‌, ಮುನ್ನೆಕೊಳಲು, ಕಸವನಹಳ್ಳಿ, ಎಬಿಕೆ ಗ್ರಾಮ, ಪ್ರೆಸ್ಟೀಜ್‌ ಟೆಕ್‌ಪಾರ್ಕ್, ವಿಪ್ರೋ, ಸನ್ನಿಬ್ರೂಕ್ಸ್‌ ದೊಡ್ಡಕನ್ನಹಳ್ಳಿ, ಬೆಳತ್ತೂರು ಗ್ರಾಮ, ಸದ್ರಮಂಗಲ ಗ್ರಾಮ, ಬೊಳ್ಳೆನಿನಿ ಸಾಸಾ ಅಪಾರ್ಚ್‌ಮೆಂಟ್‌ ಹಾಗೂ ಸಾಯಿ ಗಾರ್ಡನ್‌ ಲೇಔಟ್‌ನಲ್ಲಿ ಬಿಬಿಎಂಪಿ ಅಧಿಕಾರಿಗಳು, ಸರ್ವೇ ಸಿಬ್ಬಂದಿ ರಾಜಕಾಲುವೆ ಒತ್ತುವರಿ ಸರ್ವೇ ನಡೆಸಿದ್ದಾರೆ. ಒತ್ತುವರಿ ಪತ್ತೆ ಪೂರ್ಣವಾದ ಕೂಡಲೆ ಒತ್ತುವರಿದಾರರಿಗೆ ನೋಟಿಸ್‌ ನೀಡಿದ್ದಾರೆ.

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಮಸ್ಯೆಯಾದರೆ ನೀವೇ ಹೊಣೆ

ಯಮಲೂರಿನಲ್ಲಿ ಅಪಾರ್ಚ್‌ಮೆಂಟ್‌ಗಳ ನಿರ್ಮಾಣಕ್ಕೆ ಜಾಗ ನೀಡಿದ್ದ ಭೂಮಾಲಿಕರು ಒತ್ತುವರಿ ತೆರವು ಕಾರ್ಯಾಚರಣೆಗೆ ವಿರೋಧಿಸಿ ಬಿಬಿಎಂಪಿ ಅಧಿಕಾರಿಗಳ ಜತೆಗೆ ವಾಗ್ವಾದ ನಡೆಸಿದರು. ಹಿಂದಿನ ಕಾಲದಿಂದಲೂ ಈ ಪ್ರದೇಶದಲ್ಲಿ ಇದ್ದೇವೆ. ಇಲ್ಲಿ ರಾಜಕಾಲುವೆ ಇದ್ದ ಕುರುಹು ಕೂಡ ಇರಲಿಲ್ಲ. ಈಗ ರಾಜಕಾಲುವೆ ಇದೆ ಎಂದು ಹೇಳಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿರುವುದು ಸರಿಯಲ್ಲ ಎಂದು ವಾದಿಸಿದರು.

ಅಪಾರ್ಚ್‌ಮೆಂಟ್‌ ಸೇರಿ ಇನ್ನಿತರ ಕಟ್ಟಡಗಳ ನಿರ್ಮಾಣಕ್ಕೆ ಜಾಗ ನೀಡಿದ್ದೇವೆ. ಅವರಿಗೆ ಸಮಸ್ಯೆ ಎದುರಾದರೆ ನಾವೇ ಅದನ್ನು ಬಗೆಹರಿಸಬೇಕು. ಯಾವುದೇ ಕಾರಣಕ್ಕೂ ತೆರವು ಕಾರ್ಯಾಚರಣೆ ನಡೆಸಬಾರದು ಎಂದು ಅಧಿಕಾರಿಗಳೊಂದಿಗೆ ಭೂಮಾಲಿಕರು ವಾಗ್ವಾದ ನಡೆಸಿದರು.

ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆ 

  • ಸೆ.1-ಸೆ.9 34
  • ಸೆ.12 15
  • ಸೆ.13 18
  • ಸೆ.14 11
  • ಸೆ.15 29
  • ಒಟ್ಟು 107

ಜಿಲ್ಲಾಡಳಿತದಿಂದ ಒಂದು ಎಕರೆ ವಶ:

ಬೆಂಗಳೂರು ನಗರ ಜಿಲ್ಲಾಡಳಿವು ಗುರುವಾರ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡವರ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಯಲಹಂಕ ತಾಲೂಕಿನ ಕುದುರಗೆರೆ ಗ್ರಾಮದ ಸರ್ವೇ ನಂಬರ್‌ 55ರಲ್ಲಿ ಒಂದು ಎಕರೆ ಗೋಮಾಳ ಜಮೀನಿನ್ನು ವಶಕ್ಕೆ ಪಡೆದಿದೆ. ಖಾಸಗಿ ವ್ಯಕ್ತಿಯೊಬ್ಬರು ಅನಧಿಕೃತವಾಗಿ ಈ ಜಮೀನಿನಲ್ಲಿ ನಿರ್ಮಿಸುತ್ತಿದ್ದ ಶೆಡ್‌, ಕಾಂಪೌಂಡನ್ನು ತೆರವುಗೊಳಿಸಲಾಗಿದೆ. ಸರ್ಕಾರದ ಗೋಮಾಳ ಜಮೀನು ಖಾಲಿ ಇರುವುದನ್ನು ಗಮನಿಸಿದ ವ್ಯಕ್ತಿ, ಇಡೀ ಜಮೀನಿನ ಸುತ್ತಲೂ ಸುಮಾರು 10 ಅಡಿ ಎತ್ತರದ ಕಾಂಪೌಂಡ್‌ ನಿರ್ಮಿಸಿಕೊಂಡು ಒಳಗೆ ಕಟ್ಟಡ ನಿರ್ಮಾಣ ಮಾಡುತ್ತಿದ್ದರು.

Rajakaluve Encroachment ತೆರವಿಗೆ ಬಿಬಿಎಂಪಿ ಸ್ಪೆಷಲ್‌ ಡ್ರೈವ್‌; ನಿಮ್ಮ ಮನೆಯೂ ನೆಲಸಮವಾಗತ್ತಾ?

ತಹಸೀಲ್ದಾರ್‌ ರಾಮಲಕ್ಷ್ಮಯ್ಯ ನೇತೃತ್ವದಲ್ಲಿ ಗುರುವಾರ ಜೆಸಿಬಿಯೊಂದಿಗೆ ತೆರಳಿ ಮೊದಲು ಕಾಂಪೌಂಡ್‌ ಒಡೆದುಹಾಕಲಾಗಿದೆ. ನಂತರ ಅನಧಿಕೃತವಾಗಿ ನಿರ್ಮಿಸಲಾಗುತ್ತಿದ್ದ ಕಟ್ಟಡದ ಗೋಡೆಗಳು ಮತ್ತು ಕಂಬಗಳನ್ನು ತೆರವುಗೊಳಿಸಲಾಗಿದೆ. ನಂತರ ಈ ಸ್ಥಳದಲ್ಲಿ ಸರ್ಕಾರದ ಗೋಮಾಳ ಜಮೀನು ಆಗಿದ್ದು, ಒತ್ತುವರಿ ನಿಷೇಧಿಸಲಾಗಿದೆ ಎಂದು ಫಲಕ ಅಳವಡಿಸಿದ್ದಾರೆ.

Follow Us:
Download App:
  • android
  • ios