ರಾಯಚೂರು ಜಿಲ್ಲೆಯ ಅಂಗನವಾಡಿಗಳಲ್ಲಿ ಮೊಟ್ಟೆ ಹಣದಲ್ಲಿ ಅಕ್ರಮ ನಡೆದಿದೆ. ಮೇಲ್ವಿಚಾರಕಿ ಕಮಲಾಕ್ಷಿ ಕಾರ್ಯಕರ್ತೆಯರಿಂದ ಕಮಿಷನ್ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿಯಮ ಉಲ್ಲಂಘಿಸಿ ನೇರವಾಗಿ ಕಾರ್ಯಕರ್ತೆಯರಿಗೆ ಹಣ ವರ್ಗಾವಣೆ ಮಾಡಿ ಕಮಿಷನ್ ಪಡೆಯಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.

ರಾಯಚೂರು (ಮಾ.31): ಉತ್ತರ ಕರ್ನಾಟಕದಲ್ಲಿ ಅದರಲ್ಲಿಯೂ ರಾಯಚೂರು ಜಿಲ್ಲೆಯಲ್ಲಿ ಮಕ್ಕಳು ಊಟವೂ ಸಿಗದೇ ಅಪೌಷ್ಠಿಕತೆಯಿಂದ ಬಳಲುತ್ತಿವೆ. ಇಂತಹ ಮಕ್ಕಳಿಗೆ ಮೊಟ್ಟೆ ಕೊಡಲು ಸರ್ಕಾರ ಯೋಜನೆ ಜಾರಿ ಮಾಡಿದರೆ, ಸರ್ಕಾರದ ಮೊಟ್ಟೆಗಳನ್ನು ನುಂಗಿ ನೀರು ಕುಡಿಯುವ ಅಸಲಿ ಮೊಟ್ಟೆ ಕಳ್ಳಿಯರು ಇಲ್ಲಿದ್ದಾರೆ ನೋಡಿ. ಇವರು ಸಾಮಾನ್ಯದವರೇನೂ ಅಲ್ಲ, ಮಾಜಿ ಸಚಿವರ ಸಹೋದರಿ ಎನ್ನುವುದು ನಾಚಿಕೆಗೇಡಿನ ವಿಚಾರವಾಗಿದೆ.

ರಾಯಚೂರಿನಲ್ಲಿ ಅಂಗನವಾಡಿ ಮಕ್ಕಳ ಮೊಟ್ಟೆ ಹಣದಲ್ಲಿ ಕಮಿಷನ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ನಿಯಮ ಉಲ್ಲಂಘಿಸಿ ಹಣ ವರ್ಗಾವಣೆ ಮಾಡಿ, ಬಳಿಕ ಮೇಲ್ವಿಚಾರಕಿಯರ ಮೂಲಕ ಕಮೀಷನ್ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ರಾಯಚೂರು ಜಿಲ್ಲೆ ದೇವದುರ್ಗ ಪಟ್ಟಣದಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ. ಅಂಗನವಾಡಿ ಕಾರ್ಯಕರ್ತೆಯರಿಂದ ಮೊಟ್ಟೆ ಹಣದಲ್ಲಿ 50% ಕಮಿಷನ್ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮೇಲ್ವೀಚಾರಕಿ ಕಮಲಾಕ್ಷಿ ಎನ್ನುವವರ ಮೇಲೆ ಹಣ ವಸೂಲಿ ಆರೋಪ ಕೇಳಿಬಂದಿದೆ. ಕಮಲಾಕ್ಷಿ, ದೇವದುರ್ಗ ತಾ. ಮಸರಕಲ್​ ವಲಯದ ಮೇಲ್ವೀಚಾರಕಿ ಆಗಿದ್ದಾರೆ. ದೇವದುರ್ಗ ಮಾಜಿ ಸಚಿವ ಕೆ. ಶಿವನಗೌಡ ನಾಯಕ್ ಅವರ ಹಿರಿಯ ಸಹೋದರಿ ಆಗಿದ್ದಾರೆ. ಈ ಬಗ್ಗೆ ಸಮಸ್ಯೆ ಆಗುತ್ತೆ ಅಂದ್ರು ಧಮ್ಕಿ ಹಾಕಿ ಹಣ ವಸೂಲಿಗೆ ಮಾಡ್ತಾರೆ ಕಮಿಷನ್ ಕಮಲಾಕ್ಷ್ಮಿ ಮೇಡಂ. ಅಂಗನವಾಡಿ ‌ಕಾರ್ಯಕರ್ತರಿಗೆ ಬೆದರಿಕೆ ‌ಹಾಕಿ ಹಣ ವಸೂಲಿ. ಏನಾದರೂ ‌ಕೇಳಿದ್ರೆ ಏಕವಚನದಲ್ಲಿ ಬಾಯ್ ಮುಚ್ಚು ಮೊದಲು, ಕೊಡಬೇಕು ಅನ್ನೋದಿದೆಯೋ ಇಲ್ವೋ ಅಂತ ಧಮ್ಕಿ ಹಾಕುತ್ತಾರೆ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ರೈತರಿಗೆ ಸಿದ್ದು ಯುಗಾದಿ ಗಿಫ್ಟ್‌, ಭದ್ರಾ ಜಲಾಶಯದಿಂದ ತುಂಗಭದ್ರಾ ಕಾಲುವೆಗೆ ನೀರು!

ಮಹಿಳಾ ಮತ್ತು ಮಕ್ಕಳ ಇಲಾಖೆಯ ಸುತ್ತೋಲೆಯ ನಿಯಮ ಉಲ್ಲಂಘನೆ ಮಾಡಲಾಗಿದೆ. ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮಿತಿಗೆ ಮೊಟ್ಟೆ ಹಣ ಹಾಕಿ, ಸಮಿತಿ ಮೂಲಕ ಮೊಟ್ಟೆ ಖರೀದಿಸೋದು ನಿಯಮ. ಆದರೆ, ದೇವದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ (cdpo)ಮಾದವನಂದನರಿಂದ ನಿಯಮ ಉಲ್ಲಂಘನೆ. ಬಾಲ ವಿಕಾಸ ಸಮಿತಿಗೆ ಹಣ ಹಾಕದೇ ನೇರವಾಗಿ ಕಾರ್ಯಕರ್ತೆಯರಿಗೆ ಹಣ ವರ್ಗಾವಣೆ ಮಾಡುತ್ತದೆ. ಬಳಿಕ ಮೇಲ್ವೀಚಾರಕಿ ಕಮಲಾಕ್ಷಿ ಮೂಲಕ ಕಾರ್ಯಕರ್ತೆಯರಿಂದ ಮೊಟ್ಟೆ ಹಣದ ಕಮಿಷನ್ ವಸೂಲಿ ಮಾಡುತ್ತಾರೆ. ಕಮಿಷನ್ ಕೊಟ್ಟರೆ ಅಂಗನವಾಡಿ ಮಕ್ಕಳಿಗೆ ಸಮಸ್ಯೆ ಆಗುತ್ತದೆ ಎಂದು ಅಂಗನವಾಡಿ ಮೇಲ್ವಿಚಾರಕಿಯರು ಹೇಳಿದರೂ, ಬಿಡದೇ ಕಮಿಷನ್ ಹಣ ವಸೂಲಿ ಮಾಡುತ್ತಿದ್ದಾರೆ.

ರಾಯಚೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನವೀನ್ ಕುಮಾರ್ ಮಾತನಾಡಿ, ಈ ಬಗ್ಗೆ ನೋಟಿಸ್ ಕೊಡುತ್ತೇವೆ. ಉನ್ನತ ಮಟ್ಟದ ತನಿಖೆಗೆ ಶಿಫಾರಸ್ಸು ಮಾಡಲಾಗುವುದು. ಯಾರು ಕಾರಣ ಅನ್ನೋದನ್ನ ಬೆಳಕಿಗೆ ತರುತ್ತೇವೆ. ಜಿಲ್ಲಾ ಪಂಚಾಯತ್ ಹಂತದಲ್ಲಿ ವಿಶೇಷ ತನಿಖಾ ತಂಡ ರಚಿಸಿ, ತನಿಖೆ ಮಾಡಲಾಗುತ್ತದೆ. ಇದರಲ್ಲಿ ಯಾರ್ಯಾರ ಪಾಲಿದೆ ಅನ್ನೋದರ ಬಗ್ಗೆ ತನಿಖೆ ನಡೆಸ್ತೇವೆ. ಈಗ ಮತ್ತೊಬ್ಬ ‌ಮೇಲ್ವಿಚಾರಕಿ ವಿಡಿಯೋ ವೈರಲ್ ಆಗಿದೆ. ಮೇಲ್ವಿಚಾರಕಿ ಶಾಂತಾಬಾಯಿ ಕೂಡ ಅಂಗನವಾಡಿ ‌ಕಾರ್ಯಕರ್ತರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಮೊಟ್ಟೆ ಹಣ ವಸೂಲಿ ವಿಡಿಯೋ ‌ಮಾಡಿದ ಅಂಗನವಾಡಿ ಕಾರ್ಯಕರ್ತರು.

ಇದನ್ನೂ ಓದಿ: ಇಂದಿರಾಗಾಂಧಿ, ರಾಜೀವ್‌ಗಾಂಧಿ ಸಾವಿನ ಭವಿಷ್ಯ ಹೇಳಿದ್ದ ಧಾರವಾಡ ಗೊಂಬೆಯಿಂದ ಸಿದ್ದರಾಮಯ್ಯ ಭವಿಷ್ಯ!