Asianet Suvarna News Asianet Suvarna News

ರಾಹುಲ್‌ ಗಾಂಧಿ ಸಂಸತ್‌ ಸದಸ್ಯತ್ವ ಅನರ್ಹತೆ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸೇಡಿನ ಕ್ರಮ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್‌ ಜಿಲ್ಲಾ ಘಟಕದಿಂದ ಬುಧವಾರ ಇಡೀ ದಿನ ನಗರದ ಡಾ. ಅಂಬೇಡ್ಕರ್‌ ವೃತ್ತದ ಬಳಿ ಮೌನ ಪ್ರತಿಭಟನೆ ನಡೆಸಲಾಯಿತು.

Rahul Gandhi Parliament membership Disqualification issue Congress protests against Central Govt at bidar rav
Author
First Published Jul 13, 2023, 4:58 AM IST

ಬೀದರ್‌ (ಜು.13) : ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸೇಡಿನ ಕ್ರಮ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್‌ ಜಿಲ್ಲಾ ಘಟಕದಿಂದ ಬುಧವಾರ ಇಡೀ ದಿನ ನಗರದ ಡಾ. ಅಂಬೇಡ್ಕರ್‌ ವೃತ್ತದ ಬಳಿ ಮೌನ ಪ್ರತಿಭಟನೆ ನಡೆಸಲಾಯಿತು.

ರಾಹುಲ್‌ ಗಾಂಧಿ ಅವರು ವಿವಿಧ ವೇದಿಕೆಗಳಲ್ಲಿ ಮೋದಿ ಹಾಗೂ ಅದಾನಿ ನಡುವಿನ ಸಂಬಂಧ ಪ್ರಶ್ನಿಸಿ, ಬಹಿರಂಗ ಪಡಿಸುತ್ತಿರುವುದನ್ನು ಸಹಿಸಿಕೊಳ್ಳದೆ, ಮೋದಿ ಹಾಗೂ ಬಿಜೆಪಿ ನಾಯಕರು ಅವರನ್ನು ದೋಷಿ ಎಂದು ಸಾಬೀತುಪಡಿಸಲು ಹಾಗೂ ಅವರ ಸಂಸತ್‌ ಸದಸ್ಯತ್ವ ಅನರ್ಹಗೊಳಿಸಲು ಕಾರಣವಾಗುವ ಸೇಡಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಮೌನ ಪ್ರತಿಭಟನೆ ನಡೆಸಲಾಯಿತು.

ರಾಹುಲ್‌ ಗಾಂಧಿಯಿಂದ ಮತ್ತೊಂದು ಭಾರತ್‌ ಜೋಡೋ ಯಾತ್ರೆ: ಈಸ್ಟ್‌ ಟು ವೆಸ್ಟ್‌ ಶೀಘ್ರ ಆರಂಭ

ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ರಾಜಶೇಖರ ಪಾಟೀಲ್‌, ಎಐಸಿಸಿ ಸದಸ್ಯ ಆನಂದ ದೇವಪ್ಪ, ಅಮೃತರಾವ ಚಿಮಕೋಡೆ. ಎಂಎ ಸಮೀ, ದತ್ತಾತ್ರಿ ಮೂಲಗೆ, ಅಜಮತ ಪಟೇಲ್‌ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಚುನಾಯಿತ ಪ್ರತಿನಿಧಿ​ಗಳು, ಮುಖಂಡರು ಜಿಲ್ಲಾ, ಮುಂಚೂಣಿ ಘಟಕಗಳ ಪದಾಧಿ​ಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಬಸವಕಲ್ಯಾಣದಲ್ಲಿಯೂ ಕಾಂಗ್ರೆಸ್‌ ಪ್ರತಿಭಟನೆ:

ಬಸವಕಲ್ಯಾಣ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿಯವರು ರಾಜಕೀಯ ಷಡ್ಯಂತ್ರವನ್ನು ನಡೆಸುತ್ತಿದ್ದಾರೆ ಎಂದು ನಗರದ ಗಾಂಧಿ ವೃತ್ತದ ಹತ್ತಿರ ಮೌನ ಪ್ರತಿಭಟನೆ ನಡೆಸಿದರು.

ಮಾಜಿ ವಿಧಾನ ಪರಿಷತ್‌ ಸದಸ್ಯರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವಿಜಯ್‌ ಸಿಂಗ್‌ ಮಾತನಾಡಿ, ಬಿಜೆಪಿ ನಡೆಸುತ್ತಿರುವ ಕುತಂತ್ರವನ್ನು ದೇಶದ ಜನತೆ ಗಂಭೀರವಾಗಿ ಪರಿಗಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಸೋನಿಯಾ ಬಂಗಲೆಯಿಂದ ಮಾಜಿ ಸಿಎಂ ಶೀಲಾ ದೀಕ್ಷಿತ್ ಮನೆಗೆ ಸ್ಥಳಾಂತರಕ್ಕೆ ನಿರ್ಧರಿಸಿದ ರಾಹುಲ್!

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ನೀಲಕಂಠ ರಾಠೋಡ್‌ ಮಾತನಾಡಿದರು. ಮೀರ್‌ ಅಜ್ಹರ್‌ ಅಲಿ ನವರಂಗ್‌, ಶಾಂತಪ್ಪ ಪಾಟೀಲ…, ಬಸವರಾಜ್‌ ಸ್ವಾಮಿ, ಆನಂದ್‌ ಪಾಟೀಲ…, ಜಗನಾತ್‌ ಪಾಟೀಲ್‌ ಮಂಠಾಳ,ಅಮಾನತ್‌ ಅಲಿ ಅಡ್ವಕೆಚ್‌, ಶಂಕರ್‌ ಜಮಾದಾರ್‌, ಚಂದ್ರಕಾಂತ್‌ ಮೇತ್ರೆ, ಸುಧಾಕರ್‌, ರಾಯೀಸ್‌ ಶೇಕ…, ಡಾ. ಖದೀರುದ್ದಿನ್‌, ಪ್ರುಥ್ವಿಗಿರಿ ಗೋಸ್ವಾಮಿ, ನಗರಸಭೆ ಸದಸ್ಯರಾದ ರವೀಂದ್ರ ಬೊರಳೆ, ರಾಮ್‌ ಜಾಧವ…, ಮಹೋನಾರ್‌ ಮೈಸೆ, ಖಲೀಲ್‌ ಸಾಬ…, ಸೈಯದ್‌ ನವಾಜ್‌, ಸಿದ್ರಾಮಪ್ಪ ಗುದಗೆ, ಮಿರ್‌ ತಹಸಿನ್‌ ಅಲಿ ಜಮಾರ್ದಾ, ಸವಿತಾ ಕಾಂಬಳೆ, ಶಿವಕುಮಾರ್‌ ಶೆಟಕಾರ, ಸಂತೋಷ್‌ ಗುತ್ತೇದಾರ, ಶರಣು ಅಲಗೂಡ, ಶಿವಕುಮಾರ್‌ ಬಿರಾದರ, ಬಸು ಬಿರಾದರ, ಮೇಘನಾಥ ಕಾರಬಾರಿ, ರಾಮದಾಸ್‌ ಭಕನಳ, ಯುುವರಾಜ ಭೆಂಡೆ, ಯೋಗೇಶ್‌ ಗುತ್ತೇದಾರ, ಆನಂದ್‌ ಹೊನ್ನನಾಯಕ…, ರಾಜಕುಮಾರ್‌ ಸುಗುರೆ ಸೇರಿದಂತೆ ಅನೇಕ ಕಾಂಗ್ರೆಸ್‌ ನಾಯಕರು ಕಾರ್ಯಕರ್ತರು ಪದಾಧಿಕಾರಿಗಳು ಉಪಸ್ಥಿತರಿದ್ದರು

Latest Videos
Follow Us:
Download App:
  • android
  • ios