Asianet Suvarna News Asianet Suvarna News

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಿಯು ಉಪನ್ಯಾಸಕರ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಿಯುಸಿ ಉಪನ್ಯಾಸಕರು ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದರು.ರ್ಕಾರ ಬೇಡಿಕೆ ಈಡೇರಿಸದಿದ್ದರೆ 2ನೇ ಹಂತದಲ್ಲಿ ಸಾಂಕೇತಿಕವಾಗಿ, 3ನೇ ಹಂತದಲ್ಲಿ ಕಪ್ಪು ಧರಿಸಿ ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತೇವೆ. 4ನೇ ಹಂತದಲ್ಲಿ ಮೌಲ್ಯಮಾಪನವನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಎಂದು ತಿಳಿಸಿದರು.

PUC lecturers launch protest over pay raise
Author
Bengaluru, First Published Jan 31, 2020, 1:12 PM IST
  • Facebook
  • Twitter
  • Whatsapp

ಬೆಂಗಳೂರು [ಜ.31]: ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೆ ವೇತನ ತಾರತಮ್ಯಕ್ಕೆ ಸಂಬಂಧಿಸಿ ಕುಮಾರ ನಾಯಕ್‌ ಸಮಿತಿ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉಪನ್ಯಾಸಕರು ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದರು.

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹಾಗೂ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಚಾರ್ಯರು ಪಾಲ್ಗೊಂಡಿದ್ದರು. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ 2ನೇ ಹಂತದಲ್ಲಿ ಸಾಂಕೇತಿಕವಾಗಿ, 3ನೇ ಹಂತದಲ್ಲಿ ಕಪ್ಪು ಧರಿಸಿ ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತೇವೆ. 4ನೇ ಹಂತದಲ್ಲಿ ಮೌಲ್ಯಮಾಪನವನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಎಂದು ತಿಳಿಸಿದರು.

ಇನ್ನು ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸುವುದರ ಬಗ್ಗೆ ಜ.31ರ ಬಳಿಕ ನಿರ್ಧರಿಸುತ್ತೇನೆ. ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ತಮ್ಮ ಸ್ಥಾನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಉಪನ್ಯಾಸಕರು ವಿದ್ಯಾರ್ಥಿಗಳ ಮರೆಯುವುದು ಹಿಂಸಾತ್ಮಕ ಕೆಲಸ’

ರಾಜಕೀಯ ಕಾರಣಗಳಿಗಾಗಿ ಪಿಯು ಉಪನ್ಯಾಸಕರು ವಿದ್ಯಾರ್ಥಿಗಳ ಹಿತ ಮರೆಯುವುದು ಹಿಂಸಾತ್ಮಕ ಕೆಲಸ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಉಪನ್ಯಾಸಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗಾಗಿ ವಿದ್ಯಾರ್ಥಿಗಳ ಹಿತವನ್ನು ಒತ್ತೆ ಇಡುವುದನ್ನು ಒಪ್ಪಲಾಗದು. ಸಂಘಟನೆಗಳ ಪ್ರತಿಭಟನೆಗೆ ಬೇರೆಯೇ ‘ಅಹಿಂಸಾತ್ಮಕವಾದ’ ಮಾರ್ಗವನ್ನು ಹಿಡಿಯಬೇಕಾದ ತುರ್ತು ಅಗತ್ಯವಿದೆ ಎಂದು ತಿಳಿಸಿದರು.

"

ಈ ಬಾರಿಯ ಮೌಲ್ಯಮಾಪನ ಶುಲ್ಕವನ್ನು ಇತಿಮಿತಿಯಲ್ಲಿ ಹೆಚ್ಚಿಸಲಾಗುವುದು. ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಪ್ರಾಂಶುಪಾಲರ ಹುದ್ದೆಗೆ ಪಾರದರ್ಶಕ ರೀತಿಯಲ್ಲಿ ಕೌನ್ಸೆಲಿಂಗ್‌ ಮೂಲಕ ಪದೋನ್ನತಿ ನೀಡಲಾಗುವುದು. ಜೆಒಸಿ ವಿಲೀನಗೊಂಡ ಉಪನ್ಯಾಸಕರಿಗೆ ಬಿ.ಇಡಿ, ವಿನಾಯಿತಿ ನೀಡುವಲ್ಲಿ ಸಚಿವ ಸಂಪುಟ ಅನುಮೋದನೆ ಕೊಡಬೇಕಿದೆ. ಶಿಕ್ಷಕರ ಹಾಗೂ ಉಪನ್ಯಾಸಕರ ಹಿತ ಕಾಯುವ ಯಾವ ನಿರ್ಣಯಕ್ಕೂ ನಾನು ಅಡ್ಡಗಾಲು ಹಾಕುವುದಿಲ್ಲ. ಆದ್ದರಿಂದ ಉಪನ್ಯಾಸಕರು ವಿದ್ಯಾರ್ಥಿಗಳ ಹಿತ ಕಾಯಲಿ ಎಂದು ಮನವಿ ಮಾಡಿದರು.

Follow Us:
Download App:
  • android
  • ios