ಬೆಂಗಳೂರು :  ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾರು ಹಾಗೂ ಬೆಂಗಾವಲು ಪಡೆ ವಾಹನಗಳ ಸಂಚಾರಕ್ಕಾಗಿ ಪೊಲೀಸರು ರಸ್ತೆ ವಿಭಜಕವನ್ನೇ (ಡಿವೈಡರ್‌) ತೆರವುಗೊಳಿಸಿದ ಘಟನೆ ಗುರು​ವಾರ ನಡೆ​ದಿ​ದೆ.

ಖುದ್ದು ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಅವರು ಬಯ​ಸದೇ ಇದ್ದರೂ, ಸಮಾ​ರಂಭದ ಆಯೋ​ಜ​ಕರೂ ಕೋರದೆ ಇದ್ದರೂ ಸಿಎಂ ಅವರ ಸುಗಮ ಸಂಚಾ​ರ​ಕ್ಕಾಗಿ ರಸ್ತೆ ವಿಭ​ಜ​ಕ​ವನ್ನು ತೆರ​ವು​ಗೊ​ಳಿ​ಸಿದ್ದು ಸಾರ್ವ​ಜ​ನಿ​ಕ​ರಿಂದ ಟೀಕೆಗೆ ಒಳ​ಗಾ​ಯಿ​ತು. 

ಗುರುವಾರ ನಿಮ್ಹಾನ್ಸ್‌ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ನಿಮ್ಹಾನ್ಸ್‌ ಮುಂಭಾಗದ ರಸ್ತೆಯುದ್ದಕ್ಕೂ ಡಿವೈಡರ್‌ ಇದ್ದಿದ್ದರಿಂದ ಡೈರಿ ವೃತ್ತದಲ್ಲಿ ‘ಯು’ ತಿರುವು ಪಡೆದೇ ವಾಪಸ್‌ ಬರಬೇಕಿತ್ತು. 

ಹಾಗಾಗಿ ಶಾಂತಿನಗರ ಕಡೆಯಿಂದ ಬಂದ ಮುಖ್ಯಮಂತ್ರಿ ಅವರ ಕಾರು ಮತ್ತು ಬೆಂಗಾವಲು ವಾಹನಗಳು ನಿಮ್ಹಾನ್ಸ್‌ ಆವರಣಕ್ಕೆ ನೇರ​ವಾಗಿ ತೆರ​ಳಲು ಅನು​ವಾ​ಗು​ವಂತೆ ನಿಮ್ಹಾನ್ಸ್‌ ಮುಖ್ಯದ್ವಾರದ ಮುಂಭಾಗದ ರಸ್ತೆಯ ಡಿವೈಡರ್‌ಅನ್ನೇ ತೆರವುಗೊಳಿಸಲಾ​ಯಿತು.