Asianet Suvarna News Asianet Suvarna News

ಬೆಂಗಳೂರು: ಎಲ್ಲೆಂದ್ರಲ್ಲೇ ಆಟೋ ಫುಡ್ ಕ್ಯಾಂಟೀನ್; ಪರ್ಮಿಷನ್ ಕೊಟ್ಟು ವಸೂಲಿಗಿಳಿದ್ರಾ ಪೊಲೀಸ್, ಅಧಿಕಾರಿಗಳು?

ನಗರದಲ್ಲಿ ಪೊಲೀಸರ ಕೈ ಬಿಸಿ ಮಾಡಿದ್ರೆ ಸಾಕು ಎಲ್ಲಿ ಬೇಕಾದ್ರೂ ಆಟೋ ಕ್ಯಾಂಟೀನ್ ಮಾಡಬಹುದು. ಬೀದಿ ಬದಿ ವ್ಯಾಪಾರಕ್ಕೆ  ಪರ್ಮಿಷನ್ ಕೊಟ್ಟು ವಸೂಲಿಗಿಳಿದ್ರ ಪೊಲೀಸ್ ಅಧಿಕಾರಿಗಳು ಎಂಬ ಅನುಮಾನ ಮೂಡಿಸಿದೆ.

public nuisance Unauthorized food canteen in bengaluru rav
Author
First Published Sep 28, 2024, 12:33 PM IST | Last Updated Sep 28, 2024, 2:12 PM IST

ಬೆಂಗಳೂರು (ಸೆ.28): ನಗರದಲ್ಲಿ ಪೊಲೀಸರ ಕೈ ಬಿಸಿ ಮಾಡಿದ್ರೆ ಸಾಕು ಎಲ್ಲಿ ಬೇಕಾದ್ರೂ ಆಟೋ ಕ್ಯಾಂಟೀನ್ ಮಾಡಬಹುದು. ಬೀದಿ ಬದಿ ವ್ಯಾಪಾರಕ್ಕೆ  ಪರ್ಮಿಷನ್ ಕೊಟ್ಟು ವಸೂಲಿಗಿಳಿದ್ರ ಪೊಲೀಸ್ ಅಧಿಕಾರಿಗಳು ಎಂಬ ಅನುಮಾನ ಮೂಡಿಸಿದೆ. ನಗರದ ಮುಖ್ಯ ರಸ್ತೆಗಳಲ್ಲಿ ಎಲ್ಲಿ ನೋಡಿದ್ರೂ ಆಟೋ ಕ್ಯಾಂಟೀನ್, ತಡರಾತ್ರಿವರೆಗೆ ನಡೆಯುತ್ತೆ ವ್ಯಾಪಾರ. ಪ್ರತಿದಿನ ಸಂಜೆ ಬೀದಿ ವ್ಯಾಪಾರಿಗಳಿಂದ ಮಾಮೂಲಿ ಕಲೆಕ್ಟ್ ಮಾಡ್ಕೊಂಡು ಹೋಗ್ತಾರಂತೆ ಪೊಲೀಸರು. ಸಂಜೆ ವೇಳೆ  ಬರುವ ಪೊಲೀಸರ ಕೈಗೆ ಬಿಸಿಬಿಸಿ ನೋಟು ಕೊಟ್ರೆ ತಡರಾತ್ರಿವರೆಗೆ ಕ್ಯಾಂಟೀನ್ ನಡೆಸಿದ್ರೂ ನಡೆಯುತ್ತೆ.

ಯಾವುದೇ ಅನುಮತಿ ಇಲ್ಲದೆ ಆಟೋ ಹಾಗೂ ಕಾರಿನ ಕ್ಯಾಂಟೀನ್‌ಗಳಲ್ಲಿ ವ್ಯಾಪಾರ ಜೋರು. ತಡರಾತ್ರಿ 2 ರಿಂದ 3 ಗಂಟೆವರೆಗೂ ನಡೆಯುತ್ತೆ ಫುಡ್‌ಸ್ಟ್ರೀಟ್.  ಸಂಜೆಯಿಂದ ರಾತ್ರಿವರೆಗೆ ವ್ಯಾಪಾರ ನಡೆಯುತ್ತೆ. ರಸ್ತೆ ನಡುವೆ ಅಡ್ಡಾದಿಡ್ಡಿ ನಿಲ್ಲಿಸಿ ಬೈಕ್, ಕಾರು ಮೇಲೆ ಕುಳಿತು ತಿಂತಾರೆ. ಟ್ರಾಫಿಕ್ ಆದ್ರೂ ಓಕೆ, ಯಾರು ಎನ್ಮಾಡಿದ್ರು ಡೋಂಟ್ ಕೇರ್. ಹೊಸಕೆರೆಹಳ್ಳಿ ಫ್ಲೈ ಓವರ್ ನಲ್ಲಿ ನಡೆಯುತ್ತಿದೆ ಮಿನಿ ಫುಡ್ ಸ್ಟ್ರೀಟ್‌. ಅನುಮತಿ ಇದೆಯಾ? ಫುಡ್ ಕ್ವಾಲಿಟಿ ಏನು? ಉಹೂಂ ಯಾವುದೂ ಅಧಿಕೃತ ಅಲ್ಲ. ಎಲ್ಲಿಂದಲೇ ಬರ್ತಾರೆ ಏನೇನೋ ಮಾರ್ತಾರೆ. ರಾತ್ರಿಯಾದ್ರೆ ಇದೇ ಸ್ಟ್ರೀಟ್‌ಗೆ ಬರ್ತಾರೆ ಪುಡಿರೌಡಿಗಳು. ತಿನ್ನೋಕೆ ಅಂತಾ ಬರ್ತಾರೆ. ಕುಡಿದು ಗಲಾಟೆ ಮಾಡ್ತಾರೆ, ಹೊಡೆದಾಟ ಮಾಡ್ತಾರೆ ಸಿಕ್ಕಸಿಕ್ಕವರ ಮೇಲೆ ಹಲ್ಲೆ ಮಾಡ್ತಾರೆ. ಏನೇ ಗಲಾಟೆ ಆದ್ರೂ ಪೊಲೀಸರು ಬರಲ್ಲ. ಕುಡಿದು ತೂರಾಡುವ ಪುಂಡರನ್ನು ಕೇಳೊಲ್ಲ.  

ಬೆಂಗಳೂರು ಐಟಿ ಹಬ್ ಮಂದಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ! ಡಿಕೆ ಶಿವಕುಮಾರ ಕೊಟ್ಟ ಶುಭ ಸುದ್ದಿ ಏನು?

ಬಿಬಿಎಂಪಿ ಫುಡ್, ಸ್ಥಳೀಯ ಪೊಲೀಸರು ಇದ್ರೂ ನೋ ಯೂಸ್.  ಸಂಜೆ ಇದೇ ಕ್ಯಾಂಟೀನ್‌ಗೆ ಬರುವ ಕೆಲ ಪೊಲೀಸರು ಮಾಮೂಲಿ ವಸೂಲಿ ಮಾಡಿಕೊಂಡು ಹೋದರೆ ಮತ್ತೆ ಇತ್ತ ತಲೆಹಾಕೊಲ್ಲ. ಹೊಸಕೆರೆಹಳ್ಳಿ, ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆತೀದೆ ಮಿನಿ ಫುಡ್‌ಸ್ಟ್ರೀಟ್ ಕತ್ತಲಾದರೆ ಕುಡಿದು ಟೈಟಾಗಿ ಬರ್ತಿದ್ದಾರೆ ಪುಡಿರೌಡಿಗಳು. ಅಲ್ಲೇ ಊಟ , ಎಣ್ಣೆ ಕುಡಿದು ಗಲಾಟೆ. ಇವರಿಂದ ಸಾರ್ವಜನಿಕರಿಗೆ ದಿನನಿತ್ಯ ತೊಂದರೆ ಆಗ್ತಿದೆ. ಮಹಿಳೆಯರು  ಮಕ್ಕಳು ಓಡಾಡಲು ಭಯ ಪಡ್ತಾರೆ.  ಸಾರ್ವಜನಿಕರು ಗಿರಿನಗರ ಠಾಣೆಗೆ ದೂರು ಕೊಟ್ರು ಕ್ಯಾರೆ ಎನ್ನದ ಪೊಲೀಸರು. ಹಲವು ಬಾರಿ ಪುಡಿರೌಡಿಗಳಿಂದ ಗಲಾಟೆ ಆಗಿದ್ರೂ ಕಡಿವಾಣ ಹಾಕದ ಪೊಲೀಸರು. 

Latest Videos
Follow Us:
Download App:
  • android
  • ios