PSI Recruitment Scam ಕಿಂಗ್‌ಪಿನ್ ಆರ್.ಡಿ ಪಾಟೀಲ್ ಮನೆ ಕೆಲಸದಾಳು ಅರೆಸ್ಟ್!

ಪಿ.ಎಸ್.ಐ ನೇಮಕಾತಿ ಅಕ್ರಮದಲ್ಲಿ  ಆರ್.ಡಿ ಪಾಟೀಲ್ ಮನೆಯ ಕೆಲಸದಾಳೂ ಸಹ ಶಾಮೀಲಾಗಿದ್ದಾನೆ. ಪಿ.ಎಸ್.ಐ ನೇಮಕಾತಿ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ, ಆರ್.ಡಿ ಪಾಟೀಲ್ ಮನೆಯ ಕೆಲಸದಾಳುವನ್ನು ಬಂಧಿಸಿದೆ.

PSI Recruitment Scam kingpin  RD Patil Home Worker arrested in kalaburagi gow

ವರದಿ : ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್   

ಕಲಬುರಗಿ (ಮೇ 28): ಪಿ.ಎಸ್.ಐ ನೇಮಕಾತಿ ಅಕ್ರಮ ಪ್ರಕರಣ ಬಗೆದಷ್ಟು ಬಯಲಾಗುತ್ತಲೇ ಇದೆ. ಇದರಲ್ಲಿ ರಾಜಕಾರಣಿಗಳು, ದೊಡ್ಡ ದೊಡ್ಡ ಅಧಿಕಾರಿಗಳು ಸೇರಿದಂತೆ ಪ್ರಮುಖರ ಹೆಸರುಗಳು ತಳುಕು ಹಾಕಿಕೊಳ್ಳುತ್ತಲೇ ಇವೆ. ಇಷ್ಟೇ ಅಲ್ಲ, ಮನೆಯ ಕೆಲಸದಾಳುಗಳೂ ಸಹ ಈ ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ.

ಪಿ.ಎಸ್.ಐ ನೇಮಕಾತಿ ಅಕ್ರಮ (PSI Recruitment Scam) ಪ್ರಕರಣ ರಾಜ್ಯಾಧ್ಯಂತ ಮಿಂಚಿನ ಸಂಚಲನ ಸೃಷ್ಟಿಸಿದೆ. ಈ ಅಕ್ರಮ ಬಯಲಾದ ನಂತರ ಬೇರೆ ಬೇರೆ ಪರೀಕ್ಷೆಗಳ ಅಕ್ರಮಗಳೂ ಬಯಲಾಗುತ್ತಿವೆ. ಪಿ.ಎಸ್.ಐ ನೇಮಕಾತಿ ಅಕ್ರಮದಲ್ಲಿ ದೊಡ್ಡ ದೊಡ್ಡವರೇ ಜೈಲು ಸೇರಿದ್ದಾಗಿದೆ. ಈ ಅಕ್ರಮದಲ್ಲಿ ಇನ್ನೂ ದೊಡ್ಡವರ ಹೆಸರುಗಳು ಕೇಳಿ ಬರುತ್ತಲೇ ಇವೆ. 

ದೊಡ್ಡವರಷ್ಟೇ ಸಣ್ಣವರ ಪಾತ್ರವೂ ಬೆಳಕಿಗೆ: ಪಿ.ಎಸ್.ಐ ನೇಮಕಾತಿ (Recruitment) ಪರೀಕ್ಷಾ ಅಕ್ರಮದಲ್ಲಿ ದೊಡ್ಡವರಷ್ಟೇ ಅಲ್ಲ ಸಣ್ಣವರ ಪಾತ್ರವೂ ಕಂಡು ಬಂದಿದೆ. ದೊಡ್ಡ ದೊಡ್ಡವರಿಂದ ಸಣ್ಣವರ ವರೆಗಿನ ಎಲ್ಲಾ ಸ್ಥರದವರೂ, ಎಲ್ಲಾ ಪಕ್ಷದವರೂ ಈ ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ. 

ಈ ಅಕ್ರಮದ ಕಿಂಗ್ ಪಿನ್ ಆರ್.ಡಿ ಪಾಟೀಲ್ ಅಲಿಯಾಸ್ "ಬ್ಲ್ಯೂಟೂತ್ ಆರ್.ಡಿ" ಈಗಾಗಲೇ ಜೈಲು ಸೇರಿ ಒಂದು ತಿಂಗಳಾಯಿತು. ಈ ಪ್ರಕರಣದಲ್ಲಿ ಈತನಿಗಂತಲೂ ಮುಂಚೆಯೇ ಈತನ ಅಣ್ಣನೂ ಜೈಲು ಸೇರಿದ್ದಾನೆ. ಈತನಿಂದ ಬ್ಲ್ಯೂಟೂತ್ ಪಡೆದು ಅಕ್ರಮವಾಗಿ ಪಾಸ್ ಆದವರು, ಅಕ್ರಮಕ್ಕೆ ಸಹಾಯ ಮಾಡಿದ ಪೊಲೀಸ್ ಅಧಿಕಾರಿಗಳು ಈಗಾಗಲೇ ಜೈಲು ಸೇರಿದ್ದಾಗಿದೆ. ಈಗ ಈ ಆರ್.ಡಿ ಪಾಟೀಲ್ ಮನೆಯ ಕೆಲಸದಾಳಿನ ಸರದಿ. 

HIJAB BAN; ಹೈಕೋರ್ಟ್ ಆದೇಶದ ವಿರುದ್ಧದ ಮೇಲ್ಮನವಿ ಪರಿಶೀಲನೆಗೆ ಸುಪ್ರೀಂ ಒಪ್ಪಿಗೆ

 ಪಿ.ಎಸ್.ಐ ನೇಮಕಾತಿ ಅಕ್ರಮ  ಪ್ರಕರಣದ ಕಿಂಗ್ ಪಿನ್  ಆರ್.ಡಿ ಪಾಟೀಲ್ ಮನೆಯ ಕೆಲಸದಾಳೂ ಸಹ ಶಾಮೀಲಾಗಿದ್ದಾನೆ. ಪಿ.ಎಸ್.ಐ ನೇಮಕಾತಿ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ (CID), ಆರ್.ಡಿ ಪಾಟೀಲ್ ಮನೆಯ ಕೆಲಸದಾಳು ಪ್ರಕಾಶನನ್ನು ಬಂಧಿಸುವ ಮೂಲಕ ಅಚ್ಚರಿ ಮೂಡಿಸಿದೆ. ಈ ಅಕ್ರಮದಲ್ಲಿ  ಯಾರ್ಯಾರು ಶಾಮೀಲಾಗಿದ್ದಾರೆ ಎನ್ನುವುದನ್ನು ಈ ಬಂಧನ ಬಯಲಿಗೆಳೆದಿದೆ. 

ಪ್ರಕಾಶ ಯಾರು ? ಏನು ಕೆಲಸ ಮಾಡ್ತಿದ್ದ?
ಈ ಅಕ್ರಮದಲ್ಲಿ ಭಾಗಿದಾರನಾಗಿ ಬಂಧಿತನಾಗಿರುವ ಪ್ರಕಾಶ, ಮೂಲತಃ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದವನು. ಆರ್.ಡಿ ಪಾಟೀಲ್ ಮನೆಯಲ್ಲಿ ಎರಡು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದನು ಎನ್ನಲಾಗಿದೆ. ಮನೆ ಗೆಲಸ ಮಾಡುತ್ತಿದ್ದ ಈತ, ಅತಿ ಕಡಿಮೆ ಅವಧಿಯಲ್ಲಿಯೇ ಆರ್.ಡಿ ಪಾಟೀಲ್ ನ  ವಿಶ್ವಾಸ ಬೆಳೆಸಿಕೊಂಡಿದ್ದ. ಹಾಗಾಗಿ ಅತ್ಯಂತ ಸೂಕ್ಷ್ಮ ಗೌಪ್ಯ ಕೆಲಸಗಳನ್ನೂ ಆರ್.ಡಿ ಪಾಟೀಲ್ ಈತನಿಂದ ಮಾಡಿಸುತ್ತಿದ್ದ ಎಂದು ತಿಳಿದುಬಂದಿದೆ. 

ಅಭ್ಯರ್ಥಿಗೆ ಬ್ಲ್ಯೂಟೂತ್ ಕೊಟ್ಟು ಬಂದಿದ್ದೇ ಈ ಪ್ರಕಾಶ: ಅಕ್ರಮವಾಗಿ ಪಿ.ಎಸ್.ಐ ಪರೀಕ್ಷೆ ಬರೆದು ಪಾಸಾದವರು ಅದೆಷ್ಟೋ ಜನರಿದ್ದಾರೆ. ಈ ರೀತಿ ಅಕ್ರಮವಾಗಿ ಪಿ.ಎಸ್.ಐ ಪರೀಕ್ಷೆ ಬರೆದ ಅಭ್ಯರ್ಥಿ ಪ್ರಭು ಎನ್ನುವಾತನ ಕೈಗೆ ಬ್ಲ್ಯೂಟೂತ್ ಕೊಟ್ಟು ಬಂದಿದ್ದೇ ಈಗ ಬಂಧಿತನಾಗಿರುವ ಪ್ರಕಾಶ ಎನ್ನಲಾಗಿದೆ. ಇದೇ ಮಾಹಿತಿ ಆಧಾರದ ಮೇಲೆ ಸಿಐಡಿ, ಪ್ರಕಾಶನನ್ನು ಅರೆಸ್ಟ್ ಮಾಡಿದೆ. 

BMRCL: ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ರಾತ್ರಿ 9.30ರಿಂದ ಸಂಚಾರ ಸ್ಥಗಿತ

ಪ್ರಭು ಯಾರು ಗೊತ್ತಾ?
ಬಂಧಿತ ಪ್ರಕಾಶ, ಪ್ರಭು ಎನ್ನುವಾತನಿಗೆ ಬ್ಲ್ಯೂಟೂತ್ ಕೊಟ್ಟಿದ್ದಾನೆ ಎನ್ನುವ ಕಾರಣಕ್ಕೆ ಅರೆಸ್ಟ್ ಮಾಡಿದ್ದಾರೆ. ಆದ್ರೆ ಈ ಪ್ರಭು ಯಾರು ಎನ್ನುವ ಪ್ರಶ್ನೆ ಮೂಡುವುದು ಸಹಜ.‌ ಕಲಬುರಗಿಯ ಎಂ.ಎಸ್. ಇರಾನಿ ಕಾಲೇಜಿನಲ್ಲಿ ಪಿ.ಎಸ್.ಐ ಪರೀಕ್ಷೆ ಬರೆದ ಕಲಬುರಗಿಯ ರಾಜಾಪೂರ ಬಡಾವಣೆಯ ನಿವಾಸಿ ಪ್ರಭು, ಆರ್.ಡಿ ಪಾಟೀಲ್ ಜೊತೆ ಡೀಲ್ ಮಾಡಿಕೊಂಡು ಆತನಿಗೆ 50 ಲಕ್ಷ ರೂಪಾಯಿ ಕೊಟ್ಟು ಪಾಸಾಗಿದ್ದ. ಪರೀಕ್ಷಾ ಕೇಂದ್ರದ ಹೊರಗಡೆಯ ಹೂಕುಂಡದಲ್ಲಿ ಬ್ಲ್ಯೂಟೂತ್ ಡಿವೈಸ್ ಬಚ್ಚಿಟ್ಟು ಇಯರ್ ಬಡ್ ಬಳಸಿ ಹೊರಗಿಯಿಂದ ಉತ್ತರ ಕೇಳಿ ಪರೀಕ್ಷೆ ಬರೆದು ಪಾಸಾಗಿದ್ದಾತ ಈ ಪ್ರಭು. ಈ ಅಕ್ರಮದ ಕಾರಣ ಪ್ರಭು ಮತ್ತು ಈತನ ತಂದೆ ಶರಣಪ್ಪನನ್ನು ಸಿಐಡಿ ಈಗಾಗಲೇ ಬಂಧಿಸಿದೆ. ಈ ಪ್ರಭು ಕೈಗೆ ಬ್ಲ್ಯೂಟೂತ್ ಡಿವೈಸ್ ತಲುಪಿಸಿ ಬಂದಿದ್ದೇ ಈ ಮನೆಗೆಲಸದ ಪ್ರಕಾಶ‌. ಈ ಕಾರಣಕ್ಕಾಗಿ ಪ್ರಕಾಶ ಸಹ ಸಿಐಡಿಯಿಂದ ಬಂಧಿತನಾಗಿದ್ದಾನೆ. 

6 ದಿನ ಕಸ್ಟಡಿಗೆ: ಆರ್.ಡಿ ಪಾಟೀಲ್ ಮನೆ ಕೆಲಸದ ಪ್ರಕಾಶ ನನ್ನು ಬಂಧಿಸಿರುವ ಸಿಐಡಿ, ಹೆಚ್ಚಿನ ವಿಚಾರಣೆಗಾಗಿ ಆರು ದಿನಗಳ ಕಾಲ ತನ್ನ ಕಸ್ಟಡಿಗೆ ಪಡೆದಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡಬೇಕೆಂದು ಸಿಐಡಿ ಕೇಳಿಕೊಂಡಿತ್ತು. ನ್ಯಾಯಾಲಯ ಆರು ದಿನಗಳ ಕಾಲ ಪ್ರಕಾಶನನ್ನು ಸಿಐಡಿ ವಶಕ್ಕೆ ನೀಡಿದ್ದು, ಆತನನ್ನು ಸಿಐಡಿ ಅಧಿಕಾರಿಗಳು ಬಗೆ ಬಗೆಯ ಪ್ರಶ್ನೆಗಳ ಮೂಲಕ ಪ್ರಕರಣದ ರಹಸ್ಯಗಳನ್ನು ಬಯಲಿಗೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಇದರಲ್ಲಿ ಇನ್ನಷ್ಟು ಜನರು ಬಂಧನವಾಗುವ ಸಾಧ್ಯತೆ ಇದೆ. 

ಒಟ್ಟಾರೆ ದೊಡ್ಡವರ ಮನೆಯಲ್ಲಿ ಕೆಲಸ ಮಾಡಿದ ತಪ್ಪಿಗೆ, ಅವರು ಹೇಳಿದ ಕೆಲಸ ಮಾಡಿದ ತಪ್ಪಿಗೆ ಪಿ.ಎಸ್.ಐ ಅಕ್ರಮದಂತಹ ದೊಡ್ಡ ಪ್ರಕರಣದಲ್ಲಿ ಮನೆಗೆಲಸದ ವ್ಯಕ್ತಿ ಜೈಲು ಸೇರಬೇಕಾಗಿ ಬಂದಿದ್ದು ಗಮನಾರ್ಹ. ಅದಾಗ್ಯೂ ಈ ಅಕ್ರಮದಲ್ಲಿ ಈ ಪ್ರಕಾಶನ ಪಾತ್ರ ಇನ್ನೇನು ಇದೆ ಎನ್ನುವುದರ ಬಗ್ಗೆ ಇನ್ನೂ ತನಿಖೆಯಿಂದ ಗೊತ್ತಾಗಬೇಕಾಗಿದೆ.

Latest Videos
Follow Us:
Download App:
  • android
  • ios