Asianet Suvarna News Asianet Suvarna News

PSI Recruitment Scam; ಕಡೆಗೂ ದಿವ್ಯಾ ಹಾಗರಗಿ ಪತಿ ರಾಜೇಶ್‌ಗೆ ಬೇಲ್

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಳೆದ ಆರು ತಿಂಗಳಿಂದ ಜೈಲಿನಲ್ಲಿದ್ದ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ ಅವರ ಪತಿ ರಾಜೇಶ್ ಹಾಗರಗಿಗೆ ಕಡೆಗೂ ಜಾಮೀನು ಸಿಕ್ಕಿದೆ.

PSI Recruitment Scam Divya Hagargi husband Rajesh Hagaragi get bail gow
Author
First Published Sep 27, 2022, 3:59 PM IST

ಕಲಬುರಗಿ ‌(ಸೆ.27): ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಳೆದ ಆರು ತಿಂಗಳಿಂದ ಜೈಲಿನಲ್ಲಿದ್ದ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ ಅವರ ಪತಿ ರಾಜೇಶ್ ಹಾಗರಗಿಗೆ ಕಡೆಗೂ ಜಾಮೀನು ಸಿಕ್ಕಿದೆ. ರಾಜೇಶ್ ಹಾಗರಗಿ, ಕಲ್ಬುರ್ಗಿಯ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಪ್ರಕರಣದ ಪ್ರಮುಖ ಕಿಂಗ್ ಪಿನ್ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಯವರ ಪತಿ. ಇವರ ಒಡೆತನದ ಜ್ಞಾನಜೋತಿ ಆಂಗ್ಲ ಮಾಧ್ಯಮ ಶಾಲಾ ಪರೀಕ್ಷೆ ಕೇಂದ್ರದಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿತ್ತು. ಹಾಗಾಗಿ ಈ ಪರೀಕ್ಷಾ ಕೇಂದ್ರದ ಕಾರ್ಯದರ್ಶಿ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮತ್ತು ಅಧ್ಯಕ್ಷ ರಾಜೇಶ್ ಹಾಗರಿಗಿ, ಪರೀಕ್ಷಾ ಮೇಲ್ವಿಚಾರಕರಾಗಿದ್ದ ಶಾಲಾ ಶಿಕ್ಷಕರು ಸೇರಿದಂತೆ ಹಲವರನ್ನು ಸಿಐಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಕಳೆದ ಏಪ್ರೀಲ್ 18 ರಂದು ಬಂಧನಕ್ಕೊಳಗಾಗಿದ್ದ ರಾಜೇಶ ಹಾಗರಗಿಗೆ ಐದುವರೆ ತಿಂಗಳ ನಂತರ ಇಂದು ಜಾಮೀನು ದೊರೆತಿದೆ. ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ರಾಜೇಶ ಹಾಗರಗಿ, ದಿವ್ಯಾ ಹಾಗರಗಿ ಸೇರಿದಂತೆ ಆರೋಪಿಗಳೆಲ್ಲಾ ಕಲಬುರಗಿ ಜಿಲ್ಲಾ ಕೋರ್ಟನಲ್ಲಿ ಹಲವು ಬಾರಿ ಸಲ್ಲಿಸಿದ್ದ ಜಾಮೀನು ತಿರಸ್ಕಾರಗೊಂಡಿದ್ದವು. ಆದ್ರೆ ಕಲಬುರಗಿ ಹೈಕೋರ್ಟ ಏಕಸದಸ್ಯ ಪೀಠ ರಾಜೇಶ ಹಾಗರಗಿಗೆ ಇಂದು ಜಾಮೀನು ಮಂಜೂರು ಮಾಡಿದೆ. ಕಲಬುರಗಿ ಹೈಕೋರ್ಟನ ನ್ಯಾಯಮೂರ್ತಿ ಎಂ.ಜಿ ಉಮಾ ಅವರು ರಾಜೇಶ ಹಾಗರಗಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಕಲ್ಬುರ್ಗಿ ಹೈಕೋರ್ಟಿನ ವಕೀಲರಾದ ಅವಿನಾಶ ಉಪಳಾಂವ ಅವರು ಆರೋಪಿ ರಾಜೇಶ್ ಹಗರಗಿ ಬೇಲ್ ಗಾಗಿ ವಾದ ಮಾಡಿದ್ದರು.

ಈ ವರೆಗೆ ಮೂರು ಆರೋಪ ಪಟ್ಟಿ ಸಲ್ಲಿಸಿರುವ ಸಿಐಡಿ: ಪೊಲೀಸ್‌ ಇಲಾಖೆಯ 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳ ತಂಡ ಈ ಹಗರಣದಲ್ಲಿ ಈಗಾಗಲೇ ಕಲಬುರಗಿಯ ಒಂದನೇಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮೂರು ಆರೋಪ ಪಟ್ಟಿಸಲ್ಲಿಸಿದೆ. ಕಲಬುರಗಿಯ ನೋಬಲ್‌ ಶಾಲೆಯ ಪರೀಕ್ಷಾ ಕೇಂದ್ರದಲ್ಲಾದಂತಹ ಬ್ಲೂಟೂತ್‌ ಬಳಸಿ ನಡೆಸಲಾಗಿರುವ ಅಕ್ರಮದ ಕುರಿತಂತೆ ಕಿಂಗ್‌ಪಿಎನ್‌ ಆರ್‌ಡಿ ಪಾಟೀಲ್‌, ಜ್ಞಾನಜ್ಯೋತಿ ಶಾಲೆಯ ಮುಖ್ಯ ಗುರು ಕಾಶೀನಾಥ ಜಿಲ್ಲೆ ಸೇರಿದಂತೆ 7 ಜನರ ವಿರುದ್ಧ ವಿವರವಾದಂತಹ ಮಾಹಿತಿ, ಸಾಕ್ಷಿಗಳು, ದಾಲೆಗಳಿರುವ ಆರೋಪ ಪಟ್ಟಿಇದಾಗಿದೆ. 

ಹಗರಣದ ಕಿಂಗ್‌ಪಿಎನ್‌ ಆರ್‌ಡಿ ಪಾಈಲ್‌, ಜ್ಞಾನಜ್ಯೋತಿ ಶಾಲೆಯ ಮುಖ್ಯಗುರು ಕಾಶೀನಾಥ ಜಿಲ್ಲೆ, ಧಾರವಾಡದಲ್ಲಿ ಪೇದೆಯಾಗಿದ್ದ ಕರಜಗಿ ಮೂಲದ ಇಸ್ಮಾಯಿಲ್‌ ಖಾದರ್‌, ಹೈದ್ರಾ ಅರ್ಚಕ ಮನೆತನದ ಮಣ್ಣೂರು ಮೂಲದ ಅಸ್ಲಂ ಭಾಷಾ, ಮುನಾಫ್‌, ಅಭ್ಯರ್ಥಿ ವಿಶ್ವನಾಥ ಮಾನೆ ಇವರ ವಿರುದ್ಧ ಈ ಆರೋಪ ಪಟ್ಟಿಯಲ್ಲಿ ಪ್ರಮುಖ ವಿಚಾರಗಳನ್ನು ಸಿಐಡಿ ಪ್ರಸ್ತಾಪಿಸಿದೆ.

PSI Recruitment Scam: ಮುಂದಿನ ತಿಂಗಳು ಎಸ್‌ಐ ಕೇಸ್‌ ಚಾರ್ಜ್‌ಶೀಟ್‌: ಡಿಜಿಪಿ ಪ್ರವೀಣ್‌ ಸೂದ್‌

ದಿವ್ಯಾ ಹಾಗರಗಿ ಒಡೆತನದ ಜ್ಞಾನ ಜ್ಯೋತಿ ಹೈಸ್ಕೂಲ್‌ ಪರೀಕ್ಷಾ ಕೇಂದ್ರ ಹಾಗೂ ಹೈಕಶಿ ಸಂಸ್ಥೆಯ ಎಂಎಸ್‌ಐ ಕಾಲೇಜು ಪರೀಕ್ಷಾ ಕೇಂದ್ರದಲ್ಲಿನ ಹಗರಣಗಳ ಕುರಿತಂತೆ ಈಗಾಗಲೇ ಸಿಐಡಿ ಕ್ರಮವಾಗಿ 1, 960 ಹಾಗೂ 1, 000 ಪುಟಗಳ ಗಾತ್ರದ 2 ಆರೋಪ ಪಟ್ಟಿ ಸಲ್ಲಿಸಿದೆ.  ಮತ್ತು  2,060 ಪುಟಗಳ ಮೂರನೇ ಆರೋಪ ಪಟ್ಟಿಯಲ್ಲಿ ನೋಬಲ್‌ ಶಾಲೆ ಪರೀಕ್ಷಾ ಕೇಂದ್ರದಲ್ಲಿ ನಡೆದಂತಹ ಹಗರಣದ ಎಳೆಎಳೆಯಾದಂತಹ ಮಾಹಿತಿ ತನಿಖೆ ಮೂಲಕ ವಿವರಿಸಲಾಗಿದೆ. 7 ಆರೋಪಿಗಳು, 124 ದಾಖಲೆಗಳು, 104 ಸಾಕ್ಷಿ ಪುರಾವೆಗಳ ಸಂಗ್ರಹ ಇದಾಗಿದೆ ಸಿಐಡಿ ಮೂಲ ತಿಳಿಸಿದೆ.

PSI Scam: ಯಾವ ಹೋರಾಟ ನಡೆಸಿ ಹಾಗರಗಿ ಜೈಲಲ್ಲಿ ಇದ್ದಾರೆ?: ಹೈಕೋರ್ಟ್‌

ಸಿಐಡಿ ತನಿಖಾಧಿಕಾರಿ, ಡಿವೈಎಸ್ಪಿ ಶಂಕರಗೌಡ ಪಾಟೀಲ್‌, ಪ್ರಕಾಶ ರಾಠೋಡ, ಇನ್ವೆಸ್ಟಿಗೇಷನ್‌ ಇನ್ಸಪೆಕ್ಟರ್‌ಗಳಾದ ಆನಂದ ಹಾಗೂ ಯ್ವಶ್ವಂತ, ಸಿಬ್ಬಂದಿಗಳಾದ ಬಡೆಪ್ಪ, ಭೀಮಾಶಂಕರ, ಕುಮಾರವ್ಯಾಸ ಸೇರಿದಂತೆ ಹಲವು ಸಿಬ್ಬಂದಿಗಳನ್ನೊಳಗೊಂಡಿರುವ ಸಿಐಡಿ ತಂಡ ಈ ಪ್ರಕರಣದ ತನಿಖೆ ನಡೆಸಿ ಆರೋಪ ಪಟ್ಟಿಸಿದ್ಧಪಡಿಸಿದೆ.

ನೇಮಕಾತಿ ಅವ್ಯವಹಾರ ಪ್ರಕರಣ ಸಂಬಂಧ ತನಿಖೆ ಮಾಡುತ್ತಿರುವ ಸಿಐಡಿ ಅಕ್ಟೋಬರ್‌ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಿದೆ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಈಗಾಗಲೇ ತಿಳಿಸಿದ್ದಾರೆ. 

Follow Us:
Download App:
  • android
  • ios