ರಾಹುಲ್ ವಿರುದ್ಧ ಪ್ರಧಾನಿ ಮೋದಿ ಪ್ರಚೋದನಕಾರಿ ಹೇಳಿಕೆ: ಕಾಂಗ್ರೆಸ್ ಪ್ರತಿಭಟನೆ
ದ್ವೇಷದ ರಾಜಕಾರಣದ ವಿರುದ್ಧ ಭಾರತ್ ಜೋಡೋ ಯಾತ್ರೆಯ ಮೂಲಕ ಜನರ ಪ್ರೀತಿ ಗಳಿಸಿದ ರಾಹುಲ್ ಗಾಂಧಿ ವಿರುದ್ಧ ಅಧಿಕಾರದ ದುರಾಸೆಯಿಂದ ಪ್ರಧಾನಿ ಮೋದಿ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಮಂಗಳೂರು (ಅ.8) : ದ್ವೇಷದ ರಾಜಕಾರಣದ ವಿರುದ್ಧ ಭಾರತ್ ಜೋಡೋ ಯಾತ್ರೆಯ ಮೂಲಕ ಜನರ ಪ್ರೀತಿ ಗಳಿಸಿದ ರಾಹುಲ್ ಗಾಂಧಿ ವಿರುದ್ಧ ಅಧಿಕಾರದ ದುರಾಸೆಯಿಂದ ಪ್ರಧಾನಿ ಮೋದಿ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಬಳಿಯ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಶನಿವಾರ ರಾಹುಲ್ ಗಾಂಧಿ ಅವರ ವಿರುದ್ಧ ಪ್ರಧಾನಿ ಪ್ರಚೋದನಕಾರಿ ಹೇಳಿಕೆ ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮೀನುಗಾರರ ಯಾವ ಭರವಸೆ ರಾಹುಲ್ ಗಾಂಧಿ ಈಡೇರಿಸಿದ್ದಾರೆ? ವೇದವ್ಯಾಸ್ ಕಾಮತ್
ದ್ವೇಷದ ವಿರುದ್ಧ ಪ್ರೀತಿಯನ್ನು ಹಂಚುತ್ತಿರುವ ರಾಹುಲ್ ಅವರಲ್ಲಿ ನಾವು ರಾಮನ ಗುಣಗಳನ್ನು ಕಾಣುತ್ತಿದ್ದೇವೆ. ಅಂತಹ ನಾಯಕನನ್ನು ಈ ಹಿಂದೆ ಸಂಸತ್ತಿನಿಂದ ಹೊರಹಾಕುವುದು ಸೇರಿದಂತೆ ಬಹಳಷ್ಟು ರೀತಿಯಲ್ಲಿ ಅವಮಾನಿಸುವ ಕೃತ್ಯ ನಡೆಯುತ್ತಿದೆ. ಇದನ್ನು ಕಾಂಗ್ರೆಸ್ ಪ್ರತಿಯೊಬ್ಬ ಕಾರ್ಯಕರ್ತರೂ ವಿರೋಧಿಸಬೇಕು ಎಂದು ರೈ ಹೇಳಿದರು.
ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ರಾಹುಲ್ ಗಾಂಧಿ ಜನರ ಜತೆ ಬೆರೆಯುವ ರೀತಿ, ಅವರಿಗೆ ಜನರಿಂದ ಸಿಗುತ್ತಿರುವ ಪ್ರೀತಿಯಿಂದ ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿ ಎಂದರೆ ನಿದ್ದೆಯಲ್ಲೂ ಭಯ ಪಡುವಂತಾಗಿದೆ ಎಂದರು.
ಶಿವಮೊಗ್ಗದಲ್ಲಿ ಗಲಭೆ ಹೇಳಿಕೆಯ ಬಗ್ಗೆ ಉಲ್ಟಾ ಹೊಡೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಮಾಜಿ ಶಾಸಕರಾದ ಜೆ.ಆರ್. ಲೋಬೊ, ಐವನ್ ಡಿಸೋಜ, ನಾಯಕರಾದ ಇಬ್ರಾಹಿಂ ಕೋಡಿಜಾಲ್, ಶಾಹುಲ್ ಹಮೀದ್, ಶಶಿಧರ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ಶಾಲೆಟ್ ಪಿಂಟೊ, ಹರಿನಾಥ್, ಪ್ರಕಾಶ್ ಸಾಲ್ಯಾನ್, ಲ್ಯಾನ್ಸಿಲಾಟ್ ಪಿಂಟೊ, ನವೀನ್ ಡಿಸೋಜ, ಅಬ್ದುಲ್ ಲತೀಫ್, ಸಂಶುದ್ದೀನ್, ವಿಶ್ವಾಸ್ ಕುಮಾರ್ ದಾಸ್, ಆರ್. ಪದ್ಮರಾಜ್, ಮುಹಮ್ಮದ್ ಮೋನು, ಟಿ.ಕೆ. ಸುಧೀರ್, ಅಬ್ದುಲ್ ಸಲೀಂ, ಪುರುಷೋತ್ತಮ ಚಿತ್ರಾಪುರ, ನೀರಜ್ ಪಾಲ್, ಸದಾಶಿವ ಶೆಟ್ಟಿ, ಅಬ್ಬಾಸ್ ಅಲಿ, ಸುಹಾನ್ ಆಳ್ವ, ಅಶೋಕ್ ಡಿ.ಕೆ., ಅಪ್ಪಿ, ಮಂಜುಳಾ ನಾಯಕ್, ಶಶಿಕಲಾ ಕದ್ರಿ, ಶಾಂತಲಾ ಗಟ್ಟಿ ಮತ್ತಿತರರು ಇದ್ದರು.