ಕನ್ನಡ ಔಷಧ ಚೀಟಿ ಕಡ್ಡಾಯಕ್ಕೆ ಸಮಸ್ಯೆ ಇದೆ: ಸಚಿವ ಗುಂಡೂರಾವ್
ಈ ಬಗ್ಗೆ ಎಲ್ಲಾ ಭಾಗಿದಾರರ ಜತೆ ಪರಾಮರ್ಶೆ ಮಾಡಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬಳಿಕ ಯಾವ ರೀತಿಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂಬ ಬಗ್ಗೆ ಚರ್ಚಿಸಿ ಧನಾತ್ಮಕ ನಿಲುವು ತೆಗೆದುಕೊಳ್ಳಲಾಗುವುದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಭರವಸೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು(ಸೆ.13): ‘ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯುವುದನ್ನು ಕಡ್ಡಾಯಗೊಳಿಸಲು ಕೆಲ ತಾಂತ್ರಿಕ ಸಮಸ್ಯೆಗಳಿವೆ. ಚಿಕಿತ್ಸೆ ಪ್ರಕ್ರಿಯೆಯಲ್ಲಿ ಯಾವೊಂದು ಹಂತದಲ್ಲಿ ವೈದ್ಯಕೀಯ ಸಿಬ್ಬಂದಿಗೆ ಕನ್ನಡ ಅರ್ಥವಾಗದಿದ್ದರೂ ರೋಗಿಯ ಜೀವದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಇದು ಒಂದು ಆದೇಶದ ಮೂಲಕ ಜಾರಿಗೆ ಬರುವ ವಿಚಾರವಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇದೇ ವೇಳೆ, ‘ಈ ಬಗ್ಗೆ ಎಲ್ಲಾ ಭಾಗಿದಾರರ ಜತೆ ಪರಾಮರ್ಶೆ ಮಾಡಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬಳಿಕ ಯಾವ ರೀತಿಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂಬ ಬಗ್ಗೆ ಚರ್ಚಿಸಿ ಧನಾತ್ಮಕ ನಿಲುವು ತೆಗೆದುಕೊಳ್ಳಲಾಗುವುದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಭರವಸೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ರೈತನ ಬೆಳೆ ಕಾಯುವ ಅಮೂಲ್ಯ, ರಚಿತಾರಾಮ್ ಹಾಗೂ ರಾಧಿಕಾ ಪಂಡಿತ್: ಏನಿದು ಹೊಸ ಟ್ರಿಕ್ಸ್
ವೈದ್ಯರ ಚೀಟಿ ಕಡ್ಡಾಯವಾಗಿ ಕನ್ನಡದಲ್ಲಿ ಬರೆಯಬೇಕು ಎಂಬ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತ ಬಿಳಿಮಲೆ ಅವರ ಪ್ರಸ್ತಾವನೆಗೆ ಪತ್ರದ ಮೂಲಕ ದಿನೇಶ್ ಗುಂಡೂರಾವ್ ಈ ಉತ್ತರ ನೀಡಿದ್ದಾರೆ.