Asianet Suvarna News Asianet Suvarna News

ಬಾಗಲಕೋಟೆಯಲ್ಲಿ ರೈತನ ಬೆಳೆ ಕಾಯುವ ಅಮೂಲ್ಯ, ರಚಿತಾರಾಮ್ ಹಾಗೂ ರಾಧಿಕಾ ಪಂಡಿತ್: ಏನಿದು ಹೊಸ ಟ್ರಿಕ್ಸ್

ಸಾಮಾನ್ಯವಾಗಿ ರೈತ್ರು ತಮ್ಮ ತಮ್ಮ ಹೊಲದಲ್ಲಿ ಬೆಳೆದ ಬೆಳೆಗಳನ್ನ ಕಾಯೋಕೆ ಇನ್ನಿಲ್ಲದ ಕಸರತ್ತು ಮಾಡೋದನ್ನ ನೋಡಿದಿವಿ, ಕೇಳಿದಿವಿ, ಆದ್ರೆ ಇಲ್ಲೊಬ್ಬ ರೈತ ಮಾತ್ರ ತನ್ನ ಹೊಲದ ಬೆಳೆ ಕಾಯೋಕೆ ಕನ್ನಡದ ಸಿನಿ ತಾರೆಯರನ್ನ ಬಳಸಿಕೊಂಡಿದ್ದಾನೆ ಅಂದ್ರೇ ನಂಬ್ತೀರಾ.

Sandalwood heroines tending the farmers crop in Bagalkote gvd
Author
First Published Sep 12, 2024, 11:38 PM IST | Last Updated Sep 16, 2024, 3:34 PM IST

ವರದಿ: ಮಲ್ಲಿಕಾರ್ಜುನ ಹೊಸಮ‌ನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಸೆ.12): ಸಾಮಾನ್ಯವಾಗಿ ರೈತ್ರು ತಮ್ಮ ತಮ್ಮ ಹೊಲದಲ್ಲಿ ಬೆಳೆದ ಬೆಳೆಗಳನ್ನ ಕಾಯೋಕೆ ಇನ್ನಿಲ್ಲದ ಕಸರತ್ತು ಮಾಡೋದನ್ನ ನೋಡಿದಿವಿ, ಕೇಳಿದಿವಿ, ಆದ್ರೆ ಇಲ್ಲೊಬ್ಬ ರೈತ ಮಾತ್ರ ತನ್ನ ಹೊಲದ ಬೆಳೆ ಕಾಯೋಕೆ ಕನ್ನಡದ ಸಿನಿ ತಾರೆಯರನ್ನ ಬಳಸಿಕೊಂಡಿದ್ದಾನೆ ಅಂದ್ರೇ ನಂಬ್ತೀರಾ, ಹೌದು, ನಂಬಲೇಬೇಕಾದ ವಿಷಯ ಹಾಗಾದ್ರೆ ಹೇಗೆ ? ಎಲ್ಲಿ ಅಂತೀರಾ, ಈ ಕುರಿತು ವರದಿ ಇಲ್ಲಿದೆ. 

ಒಂದೆಡೆ ಹೊಲದಲ್ಲಿ ಆಕರ್ಷಕವಾಗಿ ಕಾಣುವ ಸಿನಿಮಾ ನಟಿಯರ ಪ್ಲೆಕ್ಸ್ ಗಳು,  ಮತ್ತೊಂದೆಡೆ ಹೊಲದಲ್ಲಿ ನಳನಳಿಸೋ ಬೆಳೆಗಳು, ಇವುಗಳ ಮಧ್ಯೆ ಖುಷಿಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿರೋ ರೈತರು, ಅಂದಹಾಗೆ ಇಂತಹವೊಂದು ಚಿತ್ರಣಕ್ಕೆ ಸಾಕ್ಷಿಯಾಗೋದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಮಟಗೇರಿ ಗ್ರಾಮದಲ್ಲಿ‌. ಹೌದು, ಈ ರೈತನ ಹೆಸರು ಮಹಾಂತೇಶ ತಿಮ್ಮನಾಯ್ಕರ್, ಈ ರೈತ ತಮ್ಮ ಎರಡು ಎಕರೆ ಹೊಲದಲ್ಲಿ ಮೆಣಸಿನಕಾಯಿ, ಬದನೆಕಾಯಿ ಸೇರಿದಂತೆ ಕೆಲವು ಬೆಳೆ ಬೆಳೆದಿದ್ದ, ಆದ್ರೆ ಇವುಗಳಿಗೆ ಸಿಡಿ ರೋಗ, ಚಂಡುರೋಗ ಸೇರಿದಂತೆ ವಿವಿಧ ರೋಗಗಳು ಬಂದು ಬೆಳೆಯೆಲ್ಲಾ ನಾಶವಾದವು, 

ಹೀಗಾಗಿ ರೈತ ಮಹಾಂತೇಶನ ಬಳಿ ಬಂದಿದ್ದೇ ಸಿನಿಮಾ ನಟಿಯರ ಪ್ಲೆಕ್ಸ್ ಪ್ರಯೋಗದ ಚಿಂತನೆ. ಹೊಲಕ್ಕೆ ಜನರ ನೆದರು ಉಂಟಾಗಿ ಬೆಳೆ ಹಾನಿಯಾಗುತ್ತಿವೆ ಎಂದರಿತು, ಕನ್ನಡದ ಖ್ಯಾತ ಸಿನಿಮಾ ನಟಿಯರಾದ ಅಮೂಲ್ಯ, ರಚಿತಾರಾಮ್ ಮತ್ತು ರಾಧಿಕಾ ಪಂಡಿತ್ ಅವರ ಫ್ಲೆಕ್ಸ್ ಅಳವಡಿಸಿದ್ದಾರೆ, ಈಗಾಗಿ ಈಗ ಯಾರೇ ಬಂದ್ರೂ ಅವರ ದೃಷ್ಟಿ ಬೆಳೆಗಳಿಗೆ ಹೋಗದೆ ನಟಿಯರತ್ತ ಹೋಗೋದ್ರಿಂದ ಸಹಜವಾಗಿ ಬೆಳೆ ರಕ್ಷಣೆಯಾಗಿ ಉತ್ತಮ ಇಳುವರಿ ಬಂದಿದೆ ಅಂತಾರೆ ರೈತ ಮಹಾಂತೇಶ ತಿಮ್ಮನಾಯ್ಕರ್.

ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಪಕ್ಕದಲ್ಲಿ ಕಾಣಿಸಿಕೊಂಡ ಅಪರೂಪದ ಎರಡು ತಲೆ ಹಾವು!

ಮೆಣಸಿನಕಾಯಿ ಮತ್ತು ಬದನೆಕಾಯಿಯಿಂದ ಉತ್ತಮ ಲಾಭ: ಇನ್ನು ಮಹಾಂತೇಶ ಅವರ ಎರಡು ಎಕರೆ ಹೊಲ ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಇದ್ದಿದ್ದರಿಂದ ಜನರ ದೃಷ್ಟಿಯೆಲ್ಲಾ ಬೆಳೆಗಳ ಮೇಲಿರುತ್ತಿತ್ತು, ಆದ್ರೆ ಈಗ ನೇರವಾಗಿ ಅಮೂಲ್ಯ, ರಚಿತಾರಾಮ್, ರಾಧಿಕಾಪಂಡಿತ್ ಅವರ ಕಡೆಗೆ ಹೋಗುತ್ತಿದೆಯಂತೆ. ಇನ್ಮು ಅಚ್ಚರಿ ಅಂದ್ರೆ  ಈ ಬಾರಿ ಬೆಳೆ ಹಾನಿ ತಪ್ಪಿ ಅಂದಾಜು ಶೇಕಡಾ ೬೦ ರಷ್ಟು  ಮೆಣಸಿನಕಾಯಿ ಮತ್ತು ಬದನೆಕಾಯಿಯಿಂದ ಉತ್ತಮ ಲಾಭವಾಗಿದೆಯಂತೆ. ಇದು ಹೊಲದಲ್ಲಿ ಕೆಲಸ ಮಾಡೋ ಕೆಲಸಗಾರರಿಗೂ ಖುಷಿ ಜೊತೆಗೆ ಅಚ್ಚರಿ ಮೂಡಿಸಿದೆ ಅಂತಾರೆ ಬಸವರಾಜ್. ಒಟ್ಟಿನಲ್ಲಿ ರೈತರು ತಮ್ಮ ತಮ್ಮ ಹೊಲದ್ದೆಗಳ ಬೆಳೆಗಳನ್ನ ಕಾಯೋಕೆ ಇ‌ನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ ಇತ್ತ ರೈತ ಮಹಾಂತೇಶ ಮಾತ್ರ ಕನ್ನಡದ ಸಿನಿಮಾ ನಟಿಯರಿಗೆ ಮೊರೆ ಹೋಗಿದ್ದು ನಿಜಕ್ಕೂ ಅಚ್ಚರಿ ತರುವಂತಹದ್ದು.

Latest Videos
Follow Us:
Download App:
  • android
  • ios