Asianet Suvarna News Asianet Suvarna News

Karnataka Bandh : ಡಿ.31 ಕರ್ನಾಟಕ ಬಂದ್‌- ಕನ್ನಡಿಗರೇ ಬೆಂಬಲಿಸಿ

  • ರಾಜ್ಯದಲ್ಲಿ ಎಂಇಎಸ್ ಪುಂಡಾಟ ಮೆರೆಯುತ್ತಿದ್ದು, ಕನ್ನಡಿಗರ ಮೇಲೆ ಹಲ್ಲೆ ಆಸ್ತಿ-ಪಾಸ್ತಿಗಳ ಮೇಲೆ ಮನಬಂದತೆ ದಾಳಿ 
  • ಇದೇ ಡಿ.31 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ
Pro Kannada Organisations Call For Karnataka Bandh On Dec 31  snr
Author
Bengaluru, First Published Dec 22, 2021, 3:22 PM IST

 ಬೆಂಗಳೂರು (ಡಿ.22): ರಾಜ್ಯದಲ್ಲಿ ಎಂಇಎಸ್ (MES) ಪುಂಡಾಟ ಮೆರೆಯುತ್ತಿದ್ದು, ಕನ್ನಡಿಗರ (Kannadiga) ಮೇಲೆ ಹಲ್ಲೆ ಆಸ್ತಿ-ಪಾಸ್ತಿಗಳ ಮೇಲೆ ಮನಬಂದತೆ ದಾಳಿ ಮಾಡುತ್ತಿರುವುದನ್ನು ವಿರೋಧಿಸಿ ಇದೇ ಡಿ.31 ರಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಲಾಗಿದೆ.   ಅಂದು ಬೆಂಗಳೂರಿನ (Bengaluru) ಟೌನ್‌ ಹಾಲ್‌ನಲ್ಲಿ 5 ಲಕ್ಷ ಜನ ಸೇರಿಸಿ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಡಿ.31 ರಂದು ಎಲ್ಲರೂ ಕನ್ನಡಿಗರೂ ಒಗ್ಗಟ್ಟಾಗಿ ಬಂದ್‌ಗೆ ಸಾಥ್ ನೀಡಬೇಕು ಎಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಬೆಂಗಳೂರು ಟೌನ್ ಹಾಲ್ ಇಂದ ಬಂದ್ ಪ್ರಕ್ರಿಯೆಗಳು ಆರಂಭವಾಗಲಿದೆ.  ಎಲ್ಲರೂ ಇದಕ್ಕೆ ಸಾಥ್ ನೀಡಿ ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ 31ಕ್ಕೆ ಸಂಪೂರ್ಣ ಬಂದ್ ಮಾಡಬೇಕೆಂದು ಹೇಳಿವೆ.  
 
ಈ ಬಗ್ಗೆ ಮಾತನಾಡಿದ ಚಿಂತಕಿ , ಸಾಹಿತಿ ಬಿ.ಟಿ. ಲಲಿತಾ ನಾಯಕ್ (BT Lalitha Naik) ರಾಜ್ಯ ಏಕೀಕರಣ ನಂತರ ಜಾಗೃತಿ ವಹಿಸದ ಕಾರಣ ಈ ಸಮಸ್ಯೆ ಎದುರಾಗಿದೆ.  ಕನ್ನಡ ನಾಡನ್ನು ಉಳಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕನ್ನಡಿಗರು, ಕನ್ನಡ ನಾಡಿನ ರಕ್ಷಣೆಗೆ ಸರ್ಕಾರ (Govt) ಮುಂದಾಗಬೇಕು. ಡಿಸೆಂಬರ್ 31 ರ ತನಕ ಕಾಯುವ ಬದಲು ಇವತ್ತೇ ಖಡಕ್ ನಿರ್ಧಾರವನ್ನು‌ ಸರ್ಕಾರ ಕೈಗೊಳ್ಳಬೇಕು ಎಂದರು. 
 
ಬೀದಿ ಬದಿ  ವ್ಯಾಪಾರಿಗಳ  ಕರ್ನಾಟಕ ಬಂದ್ ಗೆ  (Karnataka Bandh) ಕರ್ನಾಟಕ  ರಾಜ್ಯಾದ್ಯಂತ ಬೀದಿಬದಿ ವ್ಯಾಪಾರಿಗಳ ಬೆಂಬಲ ನೀಡುತ್ತಿದ್ದು,  ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ (Rangaswamy)  ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 31 ರಂದು ಕರ್ನಾಟಕ ಬಂದ್ ಕರೆ ನೀಡಲಾಗಿದ್ದು ಎಂಇಎಸ್ ಪುಂಡರ ಪುಂಡಾಟಿಕೆ ಮಟ್ಟ ಹಾಕಲು ನಡೆಯುತ್ತಿರುವ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲ‌ ಇದೆ ಎಂದು ಹೇಳಿದ್ದಾರೆ

ಆದರೆ 31ರ ಕರ್ನಾಟಕ ಬಂದ್‌ಗೆ (Karnataka Bandh) ಹೋಟೆಲ್ (Hotel) ಅಸೋಸಿಯೇಷನ್ ನಿಂದ ನೈತಿಕ ಬೆಂಬಲ ನೀಡಲು ಚಿಂತನೆ ನಡೆಸಲಾಗುತ್ತಿದೆ. ನಾಳೆ ಹೋಟೆಲ್ ಅಸೋಸಿಯೇಷನ್ನಿಂದ ಸಭೆ  ನಡೆಯಲಿದ್ದು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.  ಕೊರೋನಾ ಸಂದರ್ಭದಲ್ಲಿ ಹೋಟೆಲ್ ಉದ್ಯಮಗಳು ನಷ್ಟ ಅನುಭವಿಸಿವೆ. ಪ್ರತಿ ಎರಡು ಗಂಟೆಗೆ ಮನುಷ್ಯನ ಊಟದ ಅಗತ್ಯ ಇದ್ದು, ಹೋಟೆಲ್ ಅಗತ್ಯ ಸೇವೆಯಾಗಿದೆ. ಹಾಗಾಗಿ ನಾವು ನೈತಿಕ ಬೆಂಬಲ ಸೂಚಿಸಲು ಆಲೋಚನೆ ನಡೆಸಿದ್ದು ನಾಳೆ ನಿರ್ಧಾರ ತಿಳಿಸಲಿದ್ದೇವೆ ಎಂದು ನಿಸರ್ಗ ಹೋಟೆಲ್ ಮಾಲಿಕ ಕೃಷ್ಣಾ ರಾಜು ಹೇಳಿದರು. 
 
ತಲೆ ತಗ್ಗಿಸೋ ಕೇಲಸ ಆಗ್ತಿದೆ :  ನಾವೆಲ್ಲಿ ಬದುಕುತ್ತಾ ಇದ್ದೀವಿ ಎಂದು  ಅನುಮಾನ ಕಾಡುತ್ತಿದೆ. MES ನಿಂದಾಗಿ ಪೊಲೀಸ್ (Police) ಇಲಾಖೆ ತಲೆ ತಗ್ಗಿಸೋ ಕೆಲಸ ಆಗುತ್ತಿದೆ.   ಕನ್ನಡ ಪರ ಹೋರಾಟ ಸಂಘಟನೆಯಿಂದ ಈ ರಾಜ್ಯ ಉಳಿದಿದೆ.  ಎಂಇಎಸ್ ದಬ್ಬಾಳಿಕೆ ಯಿಂದ ಪೊಲೀಸರಿಗೆ ದಬ್ಬಾಳಿಕೆ ಆಗಿದೆ. ರಾಜ್ಯದಲ್ಲಿ ಕನ್ನಡ ಉಳಿದಿದ್ದರೇ ಕನ್ನಡ ಪರ ಹೋರಾಟಗಾರರಿಂದಲೇ ಎಂದು  ಸಾರಾ ಗೋವಿಂದ್ ಹೇಳಿದರು.  

ರಾಜ್ಯದಲ್ಲಿ ಸರ್ಕಾರ ಇದ್ಯಾ? : ರಾಜ್ಯದಲ್ಲಿ ಸರ್ಕಾರ (Govt) ಹಾಗೂ ಪೊಲೀಸರು ಇದ್ದಾರಾ? ರಾಜ್ಯವನ್ನು ಯಾರು ನೋಡಿಕೊಳ್ಳುತ್ತಿದ್ದಾರೆ.  ಎಂಇಎಸ್ 70 ವರ್ಷದಿಂದ ನಿರಂತರವಾಗಿ ದಬ್ಬಾಳಿಕೆ ಮಾಡಿಕೊಂಡು ಬಂದಿದ್ದಾರೆ.  ಅವರು ಎಲ್ಲಿಯವರು? ಬೆಳಗಾವಿಯಲ್ಲಿ ಇವರಿಗೆ ಇರೋದಕ್ಕೆ‌ ಯಾವ ಅಧಿಕಾರವೂ ಇಲ್ಲ. ರಾಜ್ಯದ ಯಾವ ಮೂಲೆಯಲ್ಲೂ ಇರೋದಕ್ಕೆ ಅಧಿಕಾರ ಇಲ್ಲ. ರಾಜ್ಯ ಸರ್ಕಾರಗಳು ಇವರನ್ನು ಪೋಷಿಸಿಕೊಂಡು ಬಂದಿದ್ದಾರೆ.  ಬೆಳಗಾವಿಯ ರಾಜಕಾರಣಿಗಳೇ ಇವರ ಏಜೆಂಟ್ಗಳು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು. 
 
ಕನ್ನಡಕ್ಕೆ ಬಾವುಟಕ್ಕೆ (Kannada Flag) ಬೆಂಕಿ ಇಟ್ಟಿರೋದು ನಮ್ಮ ಮೇಲೆ ಬೆಂಕಿ ಇಟ್ಟ ಎಂಇಎಸ್ ಹಾಗೂ ಉದ್ಧವ ಠಾಕ್ರೆ ತಮ್ಮ ಹಾರಾಟವನ್ನು ಮಹಾರಾಷ್ಟ್ರ ದಲ್ಲಿ ಇಟ್ಟುಕೊಳ್ಳಲಿ.  ಇಲ್ಲಿ ಹಾರಾಟ ಬೇಡ ಎಂದರು. 

 ಮಸಿ ಬಳೆದರು ಅಂತ ಜೈಲಿಗೆ ಹಾಕಿದ್ದಾರೆ :  ನಗರದಲ್ಲಿ ಶಿವಾಜಿ (Shivaji) ಪ್ರತಿಮೆ ಬಳಿ ಗದ್ದಲ ಮಾಡಿದ್ದಕ್ಕೆ ಕೊಲೆಗಡುಕರಂತೆ‌ ನಡೆಸಿಕೊಳ್ಳುತ್ತಿದ್ದಾರೆ. ತನಿಖೆ ಮಾಡೋದು‌ ಏನಿದೆ ಅವರ ಮೇಲೆ.  ಅವರನ್ನು ಬಿಡುಗಡೆ ಮಾಡಬೇಕು. ಪೊಲೀಸರ ಆಟ ಆಟಬೇಡಿ. ಡಿಜಿ, ಕಮೀಷನರ್ ಎಲ್ಲರೂ ಹೊರಗಡೆಯವರು. ರಾಜ್ಯದ‌ ಬಗ್ಗೆ ಅವರಿಗೇನೂ ಗೊತ್ತಿಲ್ಲ. ಕನ್ನಡ‌ ಬಾವುಟಕ್ಕೆ ಬೆಂಕಿ ರಾಜ್ಯದ ಇತಿಹಾಸದಲ್ಲಿ ನಡೆದಿರಲಿಲ್ಲ. ಕನ್ನಡಿಗರ ಮೇಲೆ ಕನ್ನಡ‌ ಭಾಷೆಯ ಮೇಲೆ ಬೆಂಕಿ ಇಟ್ಟ‌ ಹಾಗೆ  ಆಗಿದೆ ಎಂದು ಕನ್ನಡ ಪರ ಸಂಘಟನಾ ಮುಖ್ಯಸ್ಥ ದೀಪಕ್ ಆಕ್ರೋಶ ವ್ಯಕ್ತಪಡಿಸಿದರು.
 
ದೇಶಪ್ರೇಮ ಹೆಸರಾಗಿರುವ ರಾಯಣ್ಣ ಪ್ರತಿಮೆ ಧ್ವಂಸ ಮಾಡುತ್ತಿದ್ದಾರೆ. ಇದು ಕನ್ನಡಿಗರ ಕೆಣಕುವ ಕೆಲಸ ಮಾಡುತ್ತಿದೆ. ಎಮ್ ಇಎಸ್ ಮತ್ತು ಶಿವಸೇನಾವನ್ನು ಕರ್ನಾಟಕದಲ್ಲಿ ನಿಷೇಧ ಮಾಡಬೇಕು. ಓಟ್ ಗಾಗಿ ರಾಜಕೀಯ ಮಾಡಬೇಡಿ, ಕನ್ನಡಿಗರಿಗಾಗಿ ರಾಜಕೀಯ ಮಾಡಿ. ಎಲ್ಲಾ ನಾಯಕರು, ಒಟ್ಟಾಗಿ ಎಮ್ ಇಎಸ್ ವಿರುದ್ಧ ಸಿಡಿದೇಳಬೇಕು. ಎಮ್ ಇಎಸ್ ನ ಕಾನೂನಾತ್ಮವಾಗಿ ನಿಷೇಧ ಮಾಡಬೇಕು. ದಿಲ್ಲಿಯವರನ್ನ ಮೆಚ್ಚಿಸುವ ರಾಜಕಾರಣ ಮಾಡಬೇಡಿ. ಅವರೇ ನಿಮ್ಮ ಹಿಂದೆ ಬರುವಂತಹ ರಾಜಕಾರಣ ಮಾಡಿ.  ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಜನ ಪ್ರತಿನಿಧಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ದೀಪಕ್ ಆಕ್ರೋಶ ಹೊರಹಾಕಿದರು. 
 
ನೀವು‌ ಒಂದು ಲೆಟರ್ ಬರೀತೀರಾ. ಅದಕ್ಕೆ ಏನು ಬೆಲೆ‌ ಇದೆ. ಆ ಲೆಟರ್ (Letter) ಈಗ ಗೃಹ ಸಚಿವರ ಕಸದ ಬುಟ್ಟಿಗೆ ಹೋಗಿದೆ. ಸಿಎಂ ಬೊಮ್ಮಾಯಿ ಮೇಲೆ ಅಪಾರ ಗೌರವ ಇದೆ. ನೀವು‌ ಒಂದು ಕೆಲಸ ಮಾಡಲೇ ಬೇಕು. ಎಂಇಎಸ್ ನಿಷೇಧ ಆಗಲೇ ಬೇಕು. ಒಳಗೊಳಗೆ ಪಿತೂರಿ ನಡೆಯುತ್ತಿದ್ದು,  ನಿಷೇಧ ಆಗೋವರೆಗೂ ನಿರಂತರ ಹೋರಾಟ ಮಾಡುತ್ತೇವೆ.  ಸಿಎಂ ಮೇಲೆ ನಂಬಿಕೆ ಹಾಗು ಗೌರವ ಇದೆ. ನೀವು ಈ ಬಗ್ಗೆ ಖಡಕ್ ತೀರ್ಮಾನ ತೆಗೆದುಕೊಳ್ಳಿ ಎಂದರು. 

Follow Us:
Download App:
  • android
  • ios