ದಸರಾ ನೆಪದಲ್ಲೇ ಖಾಸಗಿ ಬಸ್ಗಳ ದರ್ಬಾರ್: ಟಿಕೆಟ್ ದರ 3 ಪಟ್ಟು ಹೆಚ್ಚಳ, ಕಂಗಾಲಾದ ಪ್ರಯಾಣಿಕರು..!
ಅಕ್ಟೋಬರ್ 21ರಿಂದ 24ರ ಸಾಲು ಸಾಲು ರಜೆಯಿದೆ. ಹೀಗಾಗಿ ಅ. 20ರಂದು ಊರಿಗೆ ತೆರಳಲು ಜನರು ಈಗಾಗಲೇ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಅ.20ಕ್ಕೆ ಬುಕ್ಕಿಂಗ್ ಮಾಡಲು ಮುಂದಾದ ಜನರಿಗೆ ದೊಡ್ಡ ಶಾಕ್ ನೀಡಿದ ಖಾಸಗಿ ಬಸ್ ಮಾಲೀಕರು.

ಬೆಂಗಳೂರು(ಅ.15): ದಸರಾ ಹಬ್ಬದ ನೆಪದಲ್ಲಿ ಖಾಸಗಿ ಬಸ್‌ಗಳು ಸುಲಿಗೆಗೆ ಇಳಿದಿವೆ. ಹೌದು, ದಸರಾ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಇರುವುದರಿಂದ ಬಸ್ ಟಿಕೆಟ್ ದರವನ್ನು ಖಾಸಗಿ ಬಸ್‌ಗಳು ದುಪ್ಪಟ್ಟು ಮಾಡಿವೆ.
ಬೆಂಗಳೂರಿನಿಂದ ಬಹುತೇಕ ಎಲ್ಲಾ ಕಡೆಗಳಿಗೆ ದುಪ್ಪಟ್ಟು ದರ ನಿಗದಿಯಾಗಿದೆ. ಎಸಿ ವೋಲ್ವೋ ಮಲ್ಟಿ ಆ್ಯಕ್ಸಲ್ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
ಅಕ್ಟೋಬರ್ 21ರಿಂದ 24ರ ಸಾಲು ಸಾಲು ರಜೆಯಿದೆ. ಹೀಗಾಗಿ ಅ. 20ರಂದು ಊರಿಗೆ ತೆರಳಲು ಜನರು ಈಗಾಗಲೇ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಅ.20ಕ್ಕೆ ಬುಕ್ಕಿಂಗ್ ಮಾಡಲು ಮುಂದಾದ ಜನರಿಗೆ ಖಾಸಗಿ ಬಸ್ ಮಾಲೀಕರು ದೊಡ್ಡ ಶಾಕ್ ನೀಡಿದ್ದಾರೆ.
ಕಾವೇರಿ ಬಂದ್ - ವೀಕೆಂಡ್ ಮಸ್ತಿಗಾಗಿ ಊರಿಗೆ ಹೊರಟವರಿಗೆ ಶಾಕ್! ಖಾಸಗಿ ಬಸ್ ದರ 3 ಪಟ್ಟು ಹೆಚ್ಚಳ
ಖಾಸಗಿ ಬಸ್ ಗಳ ದಸರಾ ದರ್ಬಾರ್
1. ಬೆಂಗಳೂರು-ಶಿವಮೊಗ್ಗ
ಅಕ್ಟೋಬರ್ 16 ದರ ₹450-₹650
ಅಕ್ಟೋಬರ್ 20 ದರ ₹1150-₹1400
2. ಬೆಂಗಳೂರು- ಹುಬ್ಬಳಿ
ಅಕ್ಟೋಬರ್ 16 ದರ ₹600-₹850
ಅಕ್ಟೋಬರ್ 20 ದರ ₹1600-₹2000
3. ಬೆಂಗಳೂರು-ಮಂಗಳೂರು
ಅಕ್ಟೋಬರ್ 16 ದರ ₹650-₹900
ಅಕ್ಟೋಬರ್ 20 ದರ ₹1600-₹2000
4. ಬೆಂಗಳೂರು - ಉಡುಪಿ
ಅಕ್ಟೋಬರ್ 16 ದರ ₹700-₹850
ಅಕ್ಟೋಬರ್ 20 ದರ ₹1600-₹1900
5. ಬೆಂಗಳೂರು-ಧಾರವಾಡ
ಅಕ್ಟೋಬರ್ 16 ದರ ₹650-₹850
ಅಕ್ಟೋಬರ್ 20 ದರ ₹1500-₹2100
6. ಬೆಂಗಳೂರು-ಬೆಳಗಾವಿ
ಅಕ್ಟೋಬರ್ 16 ದರ ₹700-₹900
ಅಕ್ಟೋಬರ್ 20 ದರ ₹1500-₹2100
7. ಬೆಂಗಳೂರು - ದಾವಣಗೆರೆ
ಅಕ್ಟೋಬರ್ 16 ದರ ₹450-₹650
ಅಕ್ಟೋಬರ್ 20 ದರ ₹1300-₹1650
8. ಬೆಂಗಳೂರು - ಚಿಕ್ಕಮಗಳೂರು
ಅಕ್ಟೋಬರ್ 16 ದರ ₹600-₹650
ಅಕ್ಟೋಬರ್ 20 ದರ ₹1250-₹1500
9. ಬೆಂಗಳೂರು - ಹಾಸನ
ಅಕ್ಟೋಬರ್ 16 ದರ ₹650-₹850
ಅಕ್ಟೋಬರ್ 20 ದರ ₹1600-₹1850
ಬೆಂಗಳೂರಿನಿಂದ ಹೊರರಾಜ್ಯಕ್ಕೆ
1. ಬೆಂಗಳೂರು-ಚೆನೈ
ಅಕ್ಟೋಬರ್ 16 ದರ ₹620-₹850
ಅಕ್ಟೋಬರ್ 20 ದರ ₹1800-₹2100
2. ಬೆಂಗಳೂರು- ಹೈದರಾಬಾದ್
ಅಕ್ಟೋಬರ್ 16 ದರ ₹1300-₹1900
ಅಕ್ಟೋಬರ್ 20 ದರ ₹2800-₹3300
3. ಬೆಂಗಳೂರು-ಕೊಯಮತ್ತೂರು
ಅಕ್ಟೋಬರ್ 16 ದರ ₹700-₹1100
ಅಕ್ಟೋಬರ್ 20 ದರ ₹2300-₹2800
4. ಬೆಂಗಳೂರು - ಮುಂಬೈ
ಅಕ್ಟೋಬರ್ 16 ದರ ₹1300-₹1600
ಅಕ್ಟೋಬರ್ 20 ದರ ₹2300-₹2700
5. ಬೆಂಗಳೂರು-ಗೋವಾ
ಅಕ್ಟೋಬರ್ 16 ದರ ₹1000-₹1300
ಅಕ್ಟೋಬರ್ 20 ದರ ₹2800-₹3100