Asianet Suvarna News Asianet Suvarna News

ನಾನು ಬಿಜೆಪಿಯವನಾಗಿ ಈ ಹೋರಾಟಕ್ಕೆ ಬೆಂಬಲ: ಸರ್ಕಾರಿ ಜೊತೆಗ ಖಾಸಗಿ ಬಸ್​ ಕೂಡ ಬಂದ್

ಸರ್ಕಾರಿ ಬಸ್​ಗಳಿಲ್ಲದಿದ್ದರೆ ಖಾಸಗಿ ಬಸ್​ನಲ್ಲಿ ಓಡಾಡಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ಅವರಿಗೂ ಈಗ ನಟರಾಜ್​ ಶಾಕ್​..

private bus Union supports to Transportation employee Strike rbj
Author
Bengaluru, First Published Dec 13, 2020, 10:08 PM IST

ಬೆಂಗಳೂರು, (ಡಿ.11): ಇಂದು (ಭಾನುವಾರ) ಸಂಜೆ ಮುಷ್ಕರ ಹಿಂಪಡೆಯುತ್ತೇವೆ ಎಂದು ಘೋಷಿಸಿದ್ದ ಸಾರಿಗೆ ನಿಗಮಗಳ ನೌಕರರ ಸಂಘಟನೆ ನಾಯಕರು, ಪ್ರತಿಭಟನಾ ಸ್ಥಳ ಫ್ರೀಡಂ ಪಾರ್ಕ್​ನಲ್ಲಿ ವರಸೆ ಬದಲಿಸಿದ್ದಾರೆ.  

ಈ ಹಿನ್ನೆಲೆಯಲ್ಲಿ ಮತ್ತೆ ಮುಷ್ಕರ ಮುಂದುವರಿಸಲು ಸಾರಿಗೆ ನೌಕರರು ತೀರ್ಮಾನಿಸಿದ್ದಾರೆ.  ಸೋಮವಾರ ಸರ್ಕಾರಿ ಬಸ್​ಗಳಷ್ಟೇ ಅಲ್ಲ, ಖಾಸಗಿ ಬಸ್​ಗಳೂ ಇರುವುದಿಲ್ಲ. 

ಹೌದು.. ಖಾಸಗಿ ಬಸ್​ ಮಾಲೀಕರ ಸಂಘವು ಸರ್ಕಾರಿ ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇದರಿಂದ ಸೋಮವಾರ (ಡಿ.14) ಸರ್ಕಾರಿ ಹಾಗೂ ಖಾಸಗಿ ಬಸ್​ಗಳ ಸಂಚಾರವಿಲ್ಲ ಇಡೀ ರಾಜ್ಯವೇ ಸ್ತಬ್ಧವಾಗಲಿದೆ.

ಸರ್ಕಾರಕ್ಕೆ ಮತ್ತೆ ಶಾಕ್​ ಕೊಟ್ಟ ಸಾರಿಗೆ ನೌಕರರು: ಬಸ್ ಬಂದ್...!

ಈ ಬಗ್ಗೆ ಪ್ರತಿಕ್ರಿಯಿಸಿರುವ  ಖಾಸಗಿ ಬಸ್​ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, ಹೋರಾಟಗಳು ಬ್ರೋಕರ್​ಗಳ ಕೈಯಲ್ಲಿ ಇರಬಾರದು. ನಾನು ಬಿಜೆಪಿಯವನಾಗಿ ಈ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. 

ಇದು ಸಾರಿಗೆ ಸಚಿವ ಸವದಿಯವರ ವೈಫಲ್ಯ. ನಾವು ಕೊಟ್ಟಿದ್ದ ಹಲವಾರು ಮನವಿಗಳು ಕಸದ ಬುಟ್ಟಿಯಲ್ಲಿವೆ. ಪೊಳ್ಳು ಭರವಸೆಗಳಿಗೆ ಯಾರೂ ಕೂಡ ಬಗ್ಗಬೇಡಿ ಎಂದು ನೌಕರರ ಬಳಿ ಕೋರಿದ್ದಾರೆ.

ಒಟ್ಟಿನಲ್ಲಿ ಸರ್ಕಾರಿ ಬಸ್​ಗಳಿಲ್ಲದಿದ್ದರೆ ಖಾಸಗಿ ಬಸ್​ನಲ್ಲಿ ಓಡಾಡಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ಅವರಿಗೂ ಈಗ ನಟರಾಜ್​ ಶಾಕ್​ ನೀಡಿದ್ದಾರೆ. 

Follow Us:
Download App:
  • android
  • ios