ಬೆಂಗಳೂರು, (ಡಿ.13):  ಈಗಾಗಲೇ ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಬಸ್ ಸಂಚಾರವಿಲ್ಲ. ಇದೀಗ ಸೋಮವಾರವೂ ಸಹ ಬಸ್‌ಗಳು ರಸ್ತೆಗಳಿಯುವುದು ಬಹುತೇಕ ಡೌಟ್.  

 ಭಾನುವಾರ ಬೆಳಗ್ಗೆಯಿಂದ ಸಾರಿಗೆ ನೌಕರರ ಹಾಗೂ ಸರ್ಕಾರದ ಸರಣಿ ಸಭೆ ನಡೆಸಿದ್ದು, ಎಲ್ಲವೂ ಓಕೆ ಎನ್ನುವಾಗಲೇ ನೌಕರರು ಮತ್ತೆ ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ.

ಹೌದು... ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವವರೆಗೆ ಮುಷ್ಕರ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ.

ಸಾರಿಗೆ ನೌಕರರ ಜೊತೆಗಿನ ಸರ್ಕಾರದ ಸಂಧಾನ ಸಕ್ಸಸ್: ಮುಷ್ಕರ್ ವಾಪಸ್

ಫ್ರೀಂಡಂ ಪಾರ್ಕ್​ನಲ್ಲಿ ಮಾತನಾಡಿದ KSRTC ಸಂಘದ ರಾಜ್ಯಾಧ್ಯಕ್ಷ ಚಂದ್ರು, ಸಾರಿಗೆ ಸಚಿವರ ಜತೆ ನಡೆಸಿದ ಸಂಧಾನ ವಿಫಲವಾಗಿದೆ. ನಮ್ಮ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಲೇಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಘೋಷಣೆ ಮಾಡುವವರೆಗೂ ಯಾರೂ ಬಸ್​ ತೆಗೆಯಬೇಡಿ ಎಂದು ಮನವಿ ಮಾಡಿದ್ದಾರೆ.

ವಿಕಾಸಸೌಧದಲ್ಲಿ ಇಂದು (ಭಾನುವಾರ) ನಡೆದ ಸರಣಿ ಸಭೆಯಲ್ಲಿ ಚಂದ್ರು ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೇರಿ ಅನೇಕರು ಸಂಧಾನ ಮಾತುಕತೆ ನಡೆಸಿದ್ದರು. ಮಾತುಕತೆ ಮುಗಿಸಿ ಹೊರ ಬಂದ ನಂತರ ಮಾತನಾಡಿದ್ದ ಚಂದ್ರು, ಸಂಧಾನ ಯಶಸ್ವಿ ಆಗಿದೆ ಎಂದು ಹೇಳಿದ್ದರು.

ಆದರೆ, ಫ್ರೀಂಡಂ ಪಾರ್ಕ್​ ಬಂದ ನಂತರದಲ್ಲಿ ಚಂದ್ರು ಉಲ್ಟಾ ಹೊಡೆದಿದ್ದಾರೆ. ಸರ್ಕಾರದ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಬೇಕಿದೆ. ಈಗಿನ ಮಾತುಕತೆ ವಿಫಲವಾಗಿದೆ. ಹೀಗಾಗಿ, ಯಾರೂ ಬಸ್​ ತೆಗೆಯಬಾರದು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರವೂ ಸಹ ಬಸ್‌ಗಳು ಸಂಚಾರ ಮಾಡುವುದಿಲ್ಲ.