ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್ ಅಗಲಿಕೆಗೆ ಸಂತಾಪ ಸೂಚಿಸಿ ಪ್ರಧಾನಿಗೆ ಪತ್ರ ಬರೆದಿದ್ದ ಬೆಂಗಳೂರಿನ ಎರಡನೇ ತರಗತಿ ವಿದ್ಯಾರ್ಥಿ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಆ ವಿದ್ಯಾರ್ಥಿಗೆ ಮರು ಪತ್ರ ಬರೆಯುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಬೆಂಗಳೂರು (ಫೆ.12) : ದೇಶಾದ್ಯಂತ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುತ್ತಾರೆ. ಕೆಲವು ವಿದ್ಯಾರ್ಥಿಗಳು ಶೈಕ್ಷಣಿಕ ಸಮಸ್ಯೆ ಹೇಳಿಕೊಂಡು, ಇನ್ನು ಕೆಲವು ವಿದ್ಯಾರ್ಥಿಗಳು ಪ್ರಧಾನಿಗಳ ಕಾರ್ಯ, ದೇಶ ಸೇವೆ, ಅವಿರತ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬರೆಯುತ್ತಾರೆ. ಹೀಗೆ ಬರೆಯುವ ಪ್ರತಿ ವಿದ್ಯಾರ್ಥಿಯೂ ಪ್ರಧಾನಿಯಿಂದ ಬರುವ ಪ್ರತಿಕ್ರಿಯೆಗೆ ಚಾತಕಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಅಂತೆಯೇ ಮುಖ್ಯವಾದ ಪತ್ರಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಬರೆಯದೇ ಇರಲಾರರು. ಸಣ್ಣವರು, ದೊಡ್ಡವರು ಎನ್ನದೇ ಪ್ರತಿಯೊಬ್ಬರಿಗೂ ಪತ್ರದ ಮೂಲಕವೇ ಬರೆದು ಕಳಿಸುತ್ತಾರೆಂಬುದು ಗೊತ್ತಿರುವ ವಿಚಾರ.
ಇತ್ತೀಚೆಗೆ ಪ್ರಧಾನಿ ಮೋದಿ(PM Narendra Modi) ತಾಯಿ ಆನಂದಿ ಬೆನ್(Anandi ben) ನಿಧನರಾದಾಗ, ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದ ವಿದ್ಯಾರ್ಥಿ ಮಲ್ಲೇಶ್ವರಂನ MES ಕಿಶೋರ ಕೇಂದ್ರ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಆರುಶ್ ಶ್ರೀವಾತ್ಸ್ ಪತ್ರ ಬರೆದು ಸಂತಾಪ ಸೂಚಿಸಿದ್ದ. ಪತ್ರ ಬರೆದಿದ್ದ ವಿದ್ಯಾರ್ಥಿಗೆ ಪ್ರಧಾನಿ ನರೇಂದ್ರ ಮೋದಿಯವರು ಪತ್ರದ ಮೂಲಕವೇ ಧನ್ಯವಾದ ತಿಳಿಸಿದ್ದಾರೆ.
ಪ್ರಧಾನಿ ಬರೆದ ಪತ್ರದಲ್ಲಿ ಏನಿದೆ?
ತಾಯಿಯ ಅಗಲಿಕೆ ತುಂಬಲಾರದ ನಷ್ಟವಾಗಿದ್ದು, ಅದರ ನೋವು ಹೇಳತೀರದು ಎಂದಿದ್ದಾರೆ. ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳಲ್ಲಿ ನನ್ನನ್ನು ಸೇರಿಸಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ಪ್ರೀತಿ, ಸಾಂತ್ವನ ನನಗೆ ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ಮತ್ತು ಧೈರ್ಯವನ್ನು ನೀಡುತ್ತವೆ ಎಂದು ಪತ್ರ ಬರೆಯುವ ಮೂಲಕ ಧನ್ಯವಾದ ಅರ್ಪಿಸಿರುವ ಪ್ರಧಾನಿ ಮೋದಿ.
ಪ್ರಧಾನಿಯಿಂದ ಪತ್ರ ಬಂದ ಹಿನ್ನೆಲೆ ವಿದ್ಯಾರ್ಥಿ ಹರ್ಷ ವ್ಯಕ್ತಪಡಿಸಿದ್ದಾನೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ
ಪ್ರಧಾನಿ ಅಮ್ಮನಾದರೂ , ಶ್ರೀ ಸಾಮಾನ್ಯರಂತೆಯೇ ನಡೆಯಿತು ಅಂತ್ಯ ಸಂಸ್ಕಾರ!
ವಿದ್ಯಾರ್ಥಿ ಬರೆದಿರುವ ಪತ್ರ:
ಪ್ರಧಾನಿ ನರೇಂದ್ರ ಮೋದಿಯವರ ತಾಯಿ ನಿಧನಕ್ಕೆ ಸಂತಾಪ ಸೂಚಿಸಿ ಎಂಇಎಸ್ ಕಿಶೋರ್ ಕೇಂದ್ರದ ೨ನೇ ತರಗತಿ ವಿದ್ಯಾರ್ಥಿ ಆರುಷ, ಬರೆದಿರುವ ಪತ್ರದಲ್ಲಿ 'ಪ್ರಧಾನಿ ನರೇಂದ್ರ ಮೊದಿ ಸರ್, ನಿಮ್ಮ ಪ್ರೀತಿಯ ತಾಯಿ ಶತಾಯುಷಿ ಶ್ರೀಮತಿ ಹೀರಾಬೆನ್ ನಿಧನರಾಗಿದ್ದಾರೆಂಬ ವಿಚಾರ ಸುದ್ದಿವಾಹಿನಿಯಲ್ಲಿ ನೋಡಿ ನನಗೆ ಅತೀವ ದುಃಖವಾಯಿತು' ಎಂದು ಬರೆದಿದ್ದಾರೆ.
ಮುಂದುವರಿದು, 'ದಯವಿಟ್ಟು ನನ್ನ ಹೃದಯಪೂರ್ವಕ ಸಂತಾಪವನ್ನು ಸ್ವೀಕರಿಸಿ ಮತ್ತು ತಾಯಿಯವರ ಆತ್ಮಕ್ಕೆ ಸರ್ವಶಕ್ತನಾದ ಭಗವಂತನ ಪಾದಗಳಲ್ಲಿ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ. ಪ್ರಜ್ಞಮ್ ' ಎಂದು ತಿಳಿಸಿರುವ ಬಾಲಕ.
