Asianet Suvarna News Asianet Suvarna News

ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ವೃತ್ತಿಯಲ್ಲಿ ಗಣನೀಯ ಸೇವೆಸಲ್ಲಿದ ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪ್ರಶಂಸನೀಯ ಪದಕ ಘೋಷಣೆ

Presidents Medal for 18 Police Officers of the Karnataka grg
Author
Bengaluru, First Published Aug 14, 2022, 11:35 AM IST

ಬೆಂಗಳೂರು(ಆ.14):  ದೇಶ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರತಿವರ್ಷ ನೀಡಲಾಗುವ ಪೊಲೀಸರ ಗಣನೀಯ ಸೇವೆಯ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿ ವೃತ್ತಿಯಲ್ಲಿ ಗಣನೀಯ ಸೇವೆಸಲ್ಲಿದ ಪೊಲೀಸ್‌ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಪ್ರಶಂಸನೀಯ ಪದಕ ಘೋಷಿಸಿದೆ. ಇದರಲ್ಲಿ ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪ್ರಶಂಸನೀಯ ಪದಕ ಲಭಿಸಿದೆ.

ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕ ಪಟ್ಟಿ ಇಂತಿದೆ

*  ನಂಜಪ್ಪ ಶ್ರೀನಿವಾಸ್, ಎಸ್‌ಪಿ ಮತ್ತು ಪ್ರಿನ್ಸಿಪಲ್ ಪೊಲೀಸ್ ತರಬೇತಿ ಶಾಲೆ ಕಡೂರು.
*  ಪ್ರತಾಪ್ ಸಿಂಗ್ ತುಕರಾಮ್ ತೋರಾಟ್, ಡಿವೈಎಸ್ ಪಿ, ಐಎಸ್ ಡಿ.
*  ನಂಬೂರು ಶ್ರೀನಿವಾಸ್ ರೆಡ್ಡಿ, ಡಿವೈಎಸ್ ಪಿ, ಸಿಐಡಿ ಫಾರೆಸ್ಟ್ ಸೆಲ್
*  ನರಸಿಂಹಮೂರ್ತಿ ಪಿಳ್ಳಮುನಿಯಪ್ಪ, ಡಿವೈಎಸ್ ಪಿ ಸಿಐಡಿ
*  ಪ್ರಕಾಶ್ .ಆರ್, ಡಿವೈಎಸ್ ಪಿ ಎಸಿಬಿ
*  ಶಿವಕುಮಾರ್ ಟಿ ಎಂ, ಎಸಿಪಿ ಸುಬ್ರಮಣ್ಯಪುರ ಬೆಂಗಳೂರು
* ಝಾಕೀರ್ ಹುಸೇನ್, ಎಸಿಪಿ ಕಲಬುರಗಿ ಉಪವಿಭಾಗ
*  ರಾಘವೇಂದ್ರ ರಾವ್, ಎಸಿಪಿ, ಬೆರಳಚ್ಚು ವಿಭಾಗ ಬೆಂಗಳೂರು
*  ರಾಜಚಿಕ್ಕಹನುಮೇಗೌಡ, ಇನ್ಸ್‌ಪೆಕ್ಟರ್ ವಿದ್ಯಾರಣ್ಯಪುರ ಮೈಸೂರು
*  ಡಿ ಬಿ ಪಾಟೀಲ್, ಸರ್ಕಲ್ ಇನ್ಸ್‌ಪೆಕ್ಟರ್, ವಿಜಯಪುರ ರೈಲ್ವೆ
*  ಮಹಮ್ಮದ್ ಅಲಿ, ಇನ್ಸ್‌ಪೆಕ್ಟರ್ ಎಸಿಬಿ
*  ರವಿ ಬೆಳವಾಡಿ, ಇನ್ಸ್‌ಪೆಕ್ಟರ್ ಶೃಂಗೇರಿ ಪೊಲೀಸ್ ಠಾಣೆ
*  ಮುಪೀದ್ ಖಾನ್, ಸ್ಪೆಷಲ್ ಆರ್ ಪಿಐ, ಕೆಎಸ್ಆರ್ ಪಿ
*  ಮುರಳಿ ರಾಮಕೃಷ್ಣಪ್ಪ, ಸ್ಪೆಷಲ್ ಎಆರ್ ಎಸ್ಐ, ಕೆಎಸ್ಆರ್ ಪಿ
* ಮಹದೇವಯ್ಯ, ಎಆರ್ ಎಸ್ಐ ಕೆಎಸ್ಆರ್ ಪಿ
*  ಡಿ.ಬಿ. ಶಿಂಧೆ, ಎಎಸ್ಐ ಬೆಳಗಾವಿ ಸ್ಪೆಷಲ್ ಬ್ರಾಂಚ್
*  ರಂಜಿತ್ ಶೆಟ್ಟಿ, ಎಎಸ್ಐ ಕೆಂಪೇಗೌಡನಗರ ಪೊಲೀಸ್ ಠಾಣೆ
*  ಬಸವರಾಜು .ಬಿ, ಸ್ಪೆಷಲ್ ಎಆರ್ ಎಸ್ಐ ರಾಜ್ಯ ಗುಪ್ತದಳ
 

Follow Us:
Download App:
  • android
  • ios