ಬೆಂಗಳೂರು(ಜ. 31)ರಾಜ್ಯದ ನೂತನ ಡಿಜಿ ಮತ್ತು ಐಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ನೇಮಕವಾಗಿದ್ದಾರೆ.

"

ನೂತನ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಹುದ್ದೆಗೆ ಹಿರಿಯ ಐಪಿಎಸ್ ಅಧಿಕಾರಿ ಎ.ಎಂ.ಪ್ರಸಾದ್  ಮತ್ತು ಸೂದ್ ನಡುವೆ ಪೈಪೋಟಿ ಇತ್ತು ಅಂತಿಮವಾಗಿ ಪ್ರಸಾದ್ ಅವರಿಗೆ ಹುದ್ದೆ ಒಲಿದಿದೆ. 1985 ರ ಬ್ಯಾಚ್ ನ ಹಿಮಾಚಲ ಪ್ರದೇಶ ಮೂಲದ ಪ್ರವೀಣ್‌ ಸೂದ್‌ ಪ್ರಸ್ತುತ ಸಿಐಡಿ ಡಿಜಿಪಿ ಆಗಿದ್ದಾರೆ.

ಒಮ್ಮೆ ಡಿಜಿಪಿಯಾದರೆ ಎರಡು ವರ್ಷ ಬದಲಾಯಿಸುವ ಹಾಗಿಲ್ಲ!

ಯಾರೀ ಪ್ರವೀಣ್ ಸೂದ್? 1986 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಸೂದ್ ಬಿಟೆಕ್ ಹಾಗೂ ಸಿವಿಲ್ ಇಂಜಿನಿಯರಿಂಗ್‌‌ನಲ್ಲಿ ಪದವಿ ಪಡೆದಿದ್ದಾರೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆ ಮೂಲದವರಾದ ಇವರು ಪ್ರಸ್ತುತ ಸಿಐಡಿ ಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1989 ಎಎಸ್ಪಿ ಮೈಸೂರು, ಬಳ್ಳಾರಿ, ರಾಯಚೂರಿನಲ್ಲಿ ಎಸ್‌ಪಿ ಆಗಿ ಕರ್ತವ್ಯ ನಿರ್ವಹಣೆ, 1999ರಲ್ಲಿ ಮಾರಿಷಸ್ ದೇಶದ ಪೊಲೀಸ್ ಸಲಹೆಗಾರರಾಗಿ ಮೂರು ವರ್ಷ ಸೇವೆ, 2002ರಲ್ಲಿ ಪೊಲೀಸ್ ಪದಕ, 2004-07 ರವರೆಗೆ ಮೈಸೂರು ಕಮೀಷನರ್ ಆಗಿ ಸೇವೆ, 2008 ಬೆಂಗಳೂರು ನಗರ ಹೆಚ್ಚುವರಿ ಆಯುಕ್ತ ಸಂಚಾರ ವಿಭಾಗದಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ.

2011 ರಲ್ಲಿ ರಾಷ್ಟ್ರಪತಿ ಪದಕ ಪಡೆದಿರುವ ಸೂದ್, 2013-14 ಎಂಡಿ, ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್, 2017ರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಬೆಂಗಳೂರು ನಾಗರಿಕರ ಸುರಕ್ಷತೆಗೆ ಒತ್ತು ನೀಡಿದ್ದು ಸೂದ್, ಕಮೀಷನರ್ ಆಗಿ ಹಲವು ಸುಧಾರಣೆಗಳನ್ನು ತಂದಿದ್ದಾರೆ. ನಮ್ಮ 100, ಪಿಂಕ್ ಹೊಯ್ಸಳ, ಸುರಕ್ಷಾ ಆ್ಯಪ್ ಪರಿಚಯಿಸಿದ ಕೀರ್ತಿಯೂ ಇವರಿಗಿದೆ.