Asianet Suvarna News Asianet Suvarna News

ಪ್ರಣವಾನಂದ ಸ್ವಾಮೀಜಿಗೆ ಗಂಡು ಮಗು: ನೀ ಮಠದ ಉತ್ತರಾಧಿಕಾರಿ ಆಗು!

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರ ಶರಣಬಸವೇಶ್ವರ ಮಠ! ಶರಣಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿಗೆ ಗಂಡು ಮಗು ಜನನ! ಕೇರಳ ಮೂಲದ ಮೀರಾ ಅವರನ್ನು ಮದುವೆಯಗಿದ್ದ ಪ್ರಣವಾನಂದ ಸ್ವಾಮೀಜಿ! ಶರಣಬಸವೇಶ್ವರ ಮಠಕ್ಕೆ ಉತ್ತರಾಧಿಕಾರಿ ಸಿಕ್ಕಂತಾಗಿದೆ ಎಂದ ಸ್ವಾಮೀಜಿ! ಪ್ರಣವಾನಂದ ಸ್ವಾಮೀಜಿ ಕಟ್ಟಾ ಹಿಂದುತ್ವದ ಪ್ರತಿಪಾದಕರು
 

Pranavanand Swamiji Blessed With Baby Boy
Author
Bengaluru, First Published Nov 29, 2018, 4:33 PM IST

ಹಾವೇರಿ(ನ.29): ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದ ಶರಣಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿಗೆ ಗಂಡು ಮಗು ಜನನವಾಗಿದೆ.

ಕೇರಳ ಮೂಲದ ಮೀರಾ ಎಂಬುವರನ್ನು ಎರಡು ವರ್ಷದ ಹಿಂದೆ ಪ್ರಣವಾನಂದ ಸ್ವಾಮೀಜಿ ಮದುವೆ ಆಗಿದ್ದರು. ಈಗ ಗಂಡು ಮಗು ಜನಿಸಿದ್ದಕ್ಕೆ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಗುವನ್ನು ನೋಡಲು ಸ್ವಾಮೀಜಿ ಕೇರಳಕ್ಕೆ ತೆರಳಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ವಾಮೀಜಿ, ಮಗು ಜನನದಿಂದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಅರೇಮಲ್ಲಾಪುರದ ಶರಣಬಸವೇಶ್ವರ ಮಠಕ್ಕೆ ಉತ್ತರಾಧಿಕಾರಿ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Pranavanand Swamiji Blessed With Baby Boy

ತಮ್ಮ ಧರ್ಮಪತ್ನಿ ಮೀರಾ ದೇವರ ಆಶೀರ್ವಾದದಿಂದ ಗಂಡು ಮಗುವಿಗೆ ಜನ್ಮನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಈ ಮಧ್ಯೆ ಸ್ವಾಮೀಜಿಗೆ ಗಂಡುಮಗು ಜನಿಸಿರುವ ವಿಷಯ ತಿಳಿದ ಅರೇಮಲ್ಲಾಪುರ ಗ್ರಾಮದ ಭಕ್ತರು ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸಾಹಿತಿ ಎಂ.ಎಂ.ಕಲಬುರ್ಗಿ ಹತ್ಯೆಯ ನಂತರದಲ್ಲಿ ಕೆಲವು ವಿವಾದಾತ್ಮಕ ಹೇಳಿಕೆಗಳಿಂದ ಪ್ರಚಾರ ಪಡೆದುಕೊಂಡಿದ್ದ ಸ್ವಾಮೀಜಿ, ಶ್ರೀರಾಮಸೇನೆ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದರು.  ಪ್ರಣವಾನಂದ ಸ್ವಾಮೀಜಿ ಕಟ್ಟಾ ಹಿಂದುತ್ವದ ಪ್ರತಿಪಾದಕರು ಎಂಬುದು ವಿಶೇಷ.

Follow Us:
Download App:
  • android
  • ios