Asianet Suvarna News Asianet Suvarna News

ಬ್ಯಾನರ್‌ನಲ್ಲಿ ಹೆಸರು ಅದಲು ಬದಲು; ಕೇಂದ್ರ ಸಚಿವ ಜೋಶಿ ಫೋಟೊ ಪಕ್ಕ ಬೆಲ್ಲದ್ ಅಚ್ಚು!

 ಶಾಸಕ ಅರವಿಂದ ಬೆಲ್ಲದ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಅಭಿವೃದ್ಧಿ ಹರಿಕಾರ ಎಂದು ಕರೆಯುತ್ತಾರೆ.ಆದರೆ ಇತ್ತೀಚೆಗೆ ಅವರು ಮಾಡಿದ ಕಾಮಗಾರಿಗಳನ್ನ ಜನರು ಮಾತನಾಡಿಕ್ಕೊಳ್ಳುತ್ತಿದ್ದಾರೆ. ಅವರು ಮಾಡಿದ ಕಾಮಗಾರಿಗಳಿಗೆ ಅಭಿನಂದನೆ ಸಲ್ಲಿಸಿದ ಬ್ಯಾನರ್ ನಲ್ಲಿ ಕಾರ್ಯಕರ್ತರು ಎಡವಟ್ಟು ಮಾಡಿದ್ದಾರೆ.

Pralhad Joshi Arvind Bellads name in the banner instead at dharwad rav
Author
First Published Aug 24, 2023, 7:15 PM IST

ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡ (ಆ.24):  ಶಾಸಕ ಅರವಿಂದ ಬೆಲ್ಲದ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಅಭಿವೃದ್ಧಿ ಹರಿಕಾರ ಎಂದು ಕರೆಯುತ್ತಾರೆ.ಆದರೆ ಇತ್ತೀಚೆಗೆ ಅವರು ಮಾಡಿದ ಕಾಮಗಾರಿಗಳನ್ನ ಜನರು ಮಾತನಾಡಿಕ್ಕೊಳ್ಳುತ್ತಿದ್ದಾರೆ. ಅವರು ಮಾಡಿದ ಕಾಮಗಾರಿಗಳಿಗೆ ಅಭಿನಂದನೆ ಸಲ್ಲಿಸಿದ ಬ್ಯಾನರ್ ನಲ್ಲಿ ಕಾರ್ಯಕರ್ತರು ಎಡವಟ್ಟು ಮಾಡಿದ್ದಾರೆ.

ಶಾಸಕ ಅರವಿಂದ‌ ಬೆಲ್ಲದ(Arvind bellad MLA) ಅವರ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad joshi)‌ ಅವರಿಗೆ ಅಂಬಿನಂದನೆ ಸಲ್ಲಿಸಿರುವ ಬ್ಯಾನರ್ ಗಳಲ್ಲಿ ಎಡವಟ್ಟು ಮಾಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪೋಟೋ ಪಕ್ಕ ಅರವಿಂದ ಬೆಲ್ಲದ ಅಂತ ಹೆಸರು ಬರೆಸಿದ್ದಾರೆ. ಇನ್ನು‌ ಶಾಸಕ ಅರವಿಂದ ಅವರ ಪೋಟೋ ಪಕ್ಕ ಪ್ರಹ್ಲಾದ ಜೋಶಿ ಅಂತ ಹೆಸರು ಬರೆಸಿದ್ದಾರೆ. ಇದರಿಂದ ಜನರಿಗೆ ಶಾಸಕರು ಯಾರು ಸಂಸದರು ಯಾರು ಅಂತ ಸ್ವಲ್ಪ‌ ಗೊಂದಲ ಸೃಷ್ಟಿಯಾಗಿದೆ.

 

ಶಿಕ್ಷಣ ಇಲಾಖೆಯಲ್ಲೂ ಭ್ರಷ್ಟಾಚಾರ: ಲಂಚ ಸ್ವೀಕರಿಸುವಾಗಲೇ ಲೋಕಾ ಬಲೆಗೆ ಬಿದ್ದ ಡಿಡಿಪಿಯು ಸಿಬ್ಬಂದಿ

ಧಾರವಾಡದ ಹಳೆ ಎಸ್ಪಿ ಕಚೇರಿಯಿಂದ ಶಿವಾಜಿ ಸರ್ಕಲ್‌ವರೆಗೆ ಟೆಂಡರ್ ಶೂರ್ ರಸ್ತೆ ಮತ್ತು ರಸ್ತೆಯ ಎರಡು ಬದಿಯಲ್ಲಿ ವಿದ್ಯುತ್ ದೀಪಗಳನ್ನ ಅಳವಡಿಸಿದ್ದಾರೆ. ಆದರೆ ಅದರಲ್ಲಿ ಇನ್ನು 15 ಕ್ಕೂ ಕಂಬಗಳಲ್ಲಿ ವಿದ್ಯುತ್ ಬಲ್ಬ ಗಳು ಬೆಳಗುತ್ತಿಲ್ಲ. ಆದರೆ ಸದ್ಯ ಅಭಿನಂದನೆ ಬ್ಯಾನರ್ ನ್ನು ಶಿವಾಜಿ ಸರ್ಕಲ್ ಬಳಿ ಹಾಕಿದ್ದಾರೆ. ಇನ್ನೊಂದಡೆ ಕಾರ್ಪೋರೇಷನ್ ನಿಂದ ಜಿಲ್ಲಾಸ್ಪತ್ರೆ ಮಾರ್ಗವಾಗಿ ಶಿವಾಜಿ ಸರ್ಕಲ್ ನವರೆಗೆ ಸಿ ಸಿ ರಸ್ತೆಯನ್ನ‌ ಕೋಟ್ಯಂತರ ರೂ. ಖರ್ಚು ಮಾಡಿ ರಸ್ತೆ ಅಭಿವೃದ್ಧಿ ಮಾಡುತ್ತಿದ್ದಾರೆ.  ಎಲ್ಲ ಕಡೆ ಸದ್ಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಶಾಸಕ ಅರವಿಂದ ಬೆಲ್ಲದ ಅವರಿಗೆ ಅಭಿನಂದನೆಯನ್ನ ಸಲ್ಲಿಸಲು ಬಿಜೆಪಿ ಕಾರ್ಯಕರ್ತರು ಹಿರಿಯ ನಾಗರಿಕರು ಅಭಿನಂನೆಯನ್ನ ಸಲ್ಲಿಸಿದ್ದಾರೆ. ಅಭಿನಂದನೆ ಸಲ್ಲಿಸುವ ತವಕದಲ್ಲಿ ಶಾಸಕ ಮತ್ತು ಸಂಸದರು ಹೆಸರುಗಳನ್ನ ಅದಲು ಬದಲು ಮಾಡಿದ್ದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೆಸ್ಕಾಂಗೆ ವಿವಿಧ ಇಲಾಖೆಯಿಂದ ₹885 ಕೋಟಿ ವಿದ್ಯುತ್‌ ಬಿಲ್‌ ಬಾಕಿ!

Follow Us:
Download App:
  • android
  • ios