Asianet Suvarna News Asianet Suvarna News

ಬ್ಲೂಕಾರ್ನರ್‌ ತಪ್ಪಿಸಲು ಪ್ರಜ್ವಲ್‌ ರೇವಣ್ಣ ಶೆನ್‌ಜೆನ್‌ ಮೊರೆ?

ಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬಳಿಕ ಏ.26 ರಂದು ರಾತ್ರಿ ಜರ್ಮನಿಗೆ ಪ್ರಜ್ವಲ್ ತೆರಳಿದ್ದರು. ಜರ್ಮನಿ ಸೇರಿದ ಬಳಿಕ ಮತ್ತೆ ಪಾಸ್‌ಪೋರ್ಟ್ ಅನ್ನು ಅವರು ಬಳಸಿಲ್ಲ. ಅಂದರೆ ಜರ್ಮನಿ ನಂತರ ಬೇರೆ ದೇಶಕ್ಕೆ ಪಾಸ್‌ಪೋರ್ಟ್ ಬಳಸಿ ಹೋಗದ ಪರಿಣಾಮ ಸಂಸದರ ಇರುವಿಕೆಯ ಸ್ಥಳದ ಕುರಿತು ಖಚಿತ ಮಾಹಿತಿ ಸಿಕ್ಕಿಲ್ಲ. ಹೀಗಾಗಿಯೇ ಪ್ರಜ್ವಲ್ ವಿರುದ್ಧ ಹೊರಡಿಸಿದ್ದ ಬ್ಲೂ ಕಾರ್ನರ್ ನೋಟಿಸ್‌ಗೆ ಪ್ರತಿಕ್ರಿಯೆ ಬಂದಿಲ್ಲ. 

Prajwal Revanna Shenzhen to Avoid Blue Corner Notice grg
Author
First Published May 25, 2024, 8:56 AM IST

ಬೆಂಗಳೂರು(ಮೇ.25):  ವಿದೇಶಕ್ಕೆ ತೆರಳಿದ ಬಳಿಕ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಮತ್ತೆ ಬಳಸದಿರುವುದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಕುರಿತು ಬ್ಲೂಕಾರ್ನರ್‌ ನೋಟಿಸ್‌ಗೆ ಹೊರದೇಶಗಳು ಪ್ರತಿಕ್ರಿಯಿಸದೇ ಇರಲು ಪ್ರಮುಖ ಕಾರಣವಾಗಿದೆ.

ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬಳಿಕ ಏ.26 ರಂದು ರಾತ್ರಿ ಜರ್ಮನಿಗೆ ಪ್ರಜ್ವಲ್ ತೆರಳಿದ್ದರು. ಜರ್ಮನಿ ಸೇರಿದ ಬಳಿಕ ಮತ್ತೆ ಪಾಸ್‌ಪೋರ್ಟ್ ಅನ್ನು ಅವರು ಬಳಸಿಲ್ಲ. ಅಂದರೆ ಜರ್ಮನಿ ನಂತರ ಬೇರೆ ದೇಶಕ್ಕೆ ಪಾಸ್‌ಪೋರ್ಟ್ ಬಳಸಿ ಹೋಗದ ಪರಿಣಾಮ ಸಂಸದರ ಇರುವಿಕೆಯ ಸ್ಥಳದ ಕುರಿತು ಖಚಿತ ಮಾಹಿತಿ ಸಿಕ್ಕಿಲ್ಲ. ಹೀಗಾಗಿಯೇ ಪ್ರಜ್ವಲ್ ವಿರುದ್ಧ ಹೊರಡಿಸಿದ್ದ ಬ್ಲೂ ಕಾರ್ನರ್ ನೋಟಿಸ್‌ಗೆ ಪ್ರತಿಕ್ರಿಯೆ ಬಂದಿಲ್ಲ ಎಂದು ಮೂಲಗಳು ಹೇಳಿವೆ. ಅಲ್ಲದೆ ಯೂರೋಪ್ ಖಂಡದಲ್ಲಿ ಬ್ರಿಟನ್ ಹಾಗೂ ಸ್ವಿಜರ್ಲೆಂಡ್ ಹೊರತು ಪಡಿಸಿ ಜರ್ಮನಿ ಒಳಗೊಂಡಂತೆ 21 ದೇಶಗಳಿಗೆ ಪೆನ್‌ಜೆನ್ ವೀಸಾ ಬಳಸಿ ಪ್ರಯಾಣಿಸಬಹುದು. ಈ ಅವಕಾಶ ವನ್ನು ಬಳಸಿಕೊಂಡು ಆ ದೇಶಗಳಲ್ಲಿ ಪ್ರಜ್ವಲ್ ಅಡ್ಡಾಡುತ್ತಿರುವ ಸಾಧ್ಯತೆಗಳಿವೆ. ಒಂದು ವೇಳೆ ಅವರು ಶೆನ್‌ಜೆನ್ ವೀಸಾ ಬಿಟ್ಟು ರಾಜತಾಂತ್ರಿಕ ಪಾಸ್‌ಪೋರ್ಟ್ ಉಪಯೋಗಿಸಿದರೆ ತಕ್ಷಣವೇ ಮಾಹಿತಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್‌ಗೆ ಕೇಂದ್ರದ ಕುಣಿಕೆ

ಎರಡು ವಾರಗಳ ಹಿಂದೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಪ್ರಜ್ವಲ್ ಪತ್ತೆಗೆ ಇಂಟರ್‌ಪೋಲ್ ಮೂಲಕ ಎಸ್‌ಐಟಿ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು. ಆದರೆ ಇದು ವರೆಗೆ ಇಂಟರ್‌ಪೋಲ್ ವ್ಯಾಪ್ತಿಯ 197 ದೇಶಗ ಳಿಂದ ಈ ನೋಟಿಸ್‌ಗೆ ಪ್ರತಿಕ್ರಿಯೆ ಬಂದಿಲ್ಲ.

ಪ್ರಜ್ವಲ್ ವಿಡಿಯೋ ಹಂಚಿದ 4 ಆರೋಪಿಗಳು ಕೋರ್ಟ್‌ಗೆ

ಬೆಂಗಳೂರು: ಸಂಸದ ಪ್ರಜ್ವಲ್ ಅವರದ್ದು ಎನ್ನಲಾದ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ನಾಲ್ವರು ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಪ್ರಕರಣದ ಆರೋಪಿಗಳಾದ ನವೀನ್ ಗೌಡ ಅಲಿಯಾಸ್ ಎನ್.ಆರ್. ನವೀನ್ ಕುಮಾರ್, ಎನ್. ಕಾರ್ತಿಕ್, ಬಿ.ಸಿ. ಚೇತನ್ ಕುಮಾರ್ ಮತ್ತು ಎಚ್.ವಿ. ಪುಟ್ಟರಾಜು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಪ್ರತ್ಯೇಕ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ರಜಾಕಾಲದ ಪೀಠ, ಪ್ರತಿವಾದಿಯಾಗಿರುವ ಹಾಸನದ ಸಿಇಎನ್ ಠಾಣಾ (ರಾಜ್ಯ ಸರ್ಕಾರ) ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

Latest Videos
Follow Us:
Download App:
  • android
  • ios