Asianet Suvarna News Asianet Suvarna News

ಬೆಂಗಳೂರು ಜನರಿಗೆ ವಿದ್ಯುತ್ ಶಾಕ್; ಇಂದು ನಾಳೆ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ

ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಡಿ.16ರ ಶನಿವಾರಡಿ.17ರ ಭಾನುವಾರ ಹಾಗೂ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವೃಷಭಾವತಿ, ಸರ್ ಎಂವಿ ಹಾಗೂ ತಾವರೆಕೆರೆ ವಿದ್ಯುತ್‌ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂನ ಬೆಂಗಳೂರು ಪಶ್ಚಿಮವೃತ್ತ ಅಧೀಕ್ಷಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Power outage in these areas today and tomorrow at bengaluru rav
Author
First Published Dec 16, 2023, 8:00 AM IST

ಬೆಂಗಳೂರು (ಡಿ.16): ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಡಿ.16ರ ಶನಿವಾರಡಿ.17ರ ಭಾನುವಾರ ಹಾಗೂ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವೃಷಭಾವತಿ, ಸರ್ ಎಂವಿ ಹಾಗೂ ತಾವರೆಕೆರೆ ವಿದ್ಯುತ್‌ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂನ ಬೆಂಗಳೂರು ಪಶ್ಚಿಮವೃತ್ತ ಅಧೀಕ್ಷಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶನಿವಾರ ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯ?: 

ವೃಷಭಾವತಿ ವಿದ್ಯುತ್‌ ಕೇಂದ್ರದವ್ಯಾಪ್ತಿಯ ಬಾಪೂಜಿನಗರ, ಗಂಗೊಂಡನಹಳ್ಳಿ, ದೀಪಾಂಜಲಿನಗರ, ಅತ್ತಿಗುಪ್ಪೆ, ಪಂತರ ಪಾಳ್ಯ, ಕೆಂಚೇನಹಳ್ಳಿ, ಆ‌ರ್.ಆ‌ರ್. ನಗರ, ಬೆಟ್ಟನಪಾಳ್ಯ, ಐಡಿಯಲ್ ಹೋಮ್ಸ್, ಬಿಎಚ್‌ ಇಎಲ್ ಲೇಔಟ್,ಜ್ಞಾನಭಾರತಿ,ವಿನಾಯಕಲೇಔಟ್, ಕೆಂಗೇರಿಉಪನಗರ, ಜ್ಞಾನಭಾರತಿ ಲೇಔಟ್, ಬಂಡೇಮಠ, ,ಮೈಲಸಂದ್ರ, ವಿಶ್ವೇಶ್ವರಯ್ಯ ಲೇಔಟ್‌, ಆರ್‌ಆರ್‌ಲೇಔಟ್, ಕೆಂಗುಂಟೆ, ಕೊಡಿಗೇಹಳ್ಳಿ, ಮುದ್ದಿನ ಪಾಳ್ಯ, ಮರಿಯಪ್ಪನಪಾಳ್ಯ, ಸುಭಾಷ್‌ನಗರ, ಗಿರಿನಗರ, ಬ್ಯಾಂಕ್ ಕಾಲೋನಿ, ಶ್ರೀನಗರ, ಹನುಮಂತನಗರ, ವಿದ್ಯಾಪೀಠ, ತ್ಯಾಗರಾಜ ನಗರ, ಹೊಸಕೆರೆ ಹಳ್ಳಿ, ನಾಗೇಂದ್ರ ಬ್ಲಾಕ್, ಅವಲಹಳ್ಳಿ ಹಾಗೂ ಮೈಸೂರು ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳು.

ಸಿಲಿಕಾನ್ ಸಿಟಿ ಜನರಿಗೆ ವೀಕೆಂಡ್‌ ಶಾಕ್! ಈ ಏರಿಯಾಗಳಲ್ಲಿ ಇಂದು ಸಂಜೆವರೆಗೆ ವಿದ್ಯುತ್ ವ್ಯತ್ಯಯ

ಸರ್‌ಎಂವಿ ಲೇಔಟ್ ವಿದ್ಯುತ್ ಕೇಂದ್ರದ ವ್ಯಾಪ್ತಿಯ ಉಲ್ಲಾಳ ಮುಖ್ಯ ರಸ್ತೆ, ಪ್ರೆಸ್ ಲೇಔಟ್, ರೈಲ್ವೆಲೈ ಔಟ್, ಜ್ಞಾನಜ್ಯೋತಿನಗರ, ಮುನೇಶ್ವರನಗರ, ಎಂಪಿಎಂ ಲೇಔಟ್, ಐಟಿಐ ಲೇಔಟ್, ಕೆಂಗುಂಟೆ, ಮಲ್ಲತ್ತಹಳ್ಳಿ, ಡಿಗ್ರೂಪ್ ಲೇಔಟ್, ದೊಡ್ಡಬಸ್ತಿ, ಚಿಕ್ಕಬಸ್ತಿ, ರಾಮಸಂದ್ರ, ಗಾಯತ್ರಿ ಲೇಔಟ್, ಸೊನ್ನೇನಹಳ್ಳಿ, ಅಮ್ಮ ಆಶ್ರಮ, ಜ್ಞಾನಭಾರತಿ ಲೇಔಟ್, ಅಂಜನಾ ನಗರ, ರತ್ನಾನಗರ, ದೊಡ್ಡಗೊಲ್ಲರಹಟ್ಟಿ, ಸರ್ ಎಂವಿ ಲೇಔಟ್ 1ರಿಂದ9 ನೇಬ್ಲಾಕ್, ಹೇರೋಹಳ್ಳಿ, ಬಿಇಎಲ್‌ಬಡಾವಣೆ, ಮಂಗನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Follow Us:
Download App:
  • android
  • ios