ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದಾಗಿ ಅಪಘಾತದ ಗಾಯಾಳುವಿಗೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಚಿಕಿತ್ಸೆ ನೀಡಲಾಯಿತು. ಜನರೇಟರ್‌ನ ಮ್ಯಾನ್ಯುಯಲ್ ಸ್ವಿಚ್ ಕಾರಣ ವಿಳಂಬವಾಯಿತು ಎಂದು ನಿರ್ದೇಶಕರು ತಿಳಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಯ ವಿದ್ಯುತ್ ವ್ಯವಸ್ಥೆ ಬಗ್ಗೆ ಟೀಕೆ ವ್ಯಕ್ತವಾಗಿದೆ. ಸ್ವಿಚ್ ಬದಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಸ್ಪತ್ರೆ ಹೇಳಿದೆ.
ಬಳ್ಳಾರಿ (ಫೆ.16): ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಕಡಿತವಾಗಿದ್ದರಿಂದ ಮೊಬೈಲ್ ಟಾರ್ಚ್ ಬೆಳಕಿನಲ್ಲಿಯೇ ಚಿಕಿತ್ಸೆ ನೀಡಿದ ಘಟನೆ ನಡೆದಿದೆ.
ನಗರದ ನಿವಾಸಿಯೊಬ್ಬರು ಗುರುವಾರ ಸಂಜೆ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆಗೆಂದು ಬಿಮ್ಸ್ ಗೆ ಆಗಮಿಸಿದ್ದರು. ವೈದ್ಯರು ಚಿಕಿತ್ಸೆ ನೀಡುತ್ತಿದ್ದ ವೇಳೆ ವಿದ್ಯುತ್ ಕಡಿತಗೊಂಡಿದ್ದು, ಕತ್ತಲು ಆವರಿಸಿದ ಪರಿಣಾಮ ರೋಗಿಯ ಸಂಬಂಧಿಕರು, ನೆರೆದಿದ್ದ ಜನ ಮೊಬೈಲ್ ಟಾರ್ಚ್ ಮೂಲಕ ಬೆಳಕು ಬಿಟ್ಟು ಚಿಕಿತ್ಸೆಗೆ ಸಹಕರಿಸಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಮ್ಸ್ ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆ ಅಸಮರ್ಪಕವಾಗಿರುವ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.
ಡಾಕ್ಟರ್ ಅಂತೇಳಿ ಜಿಲ್ಲಾಸ್ಪತ್ರೆಯಲ್ಲಿ ರೌಂಡ್ಸ್ ಹೊಡೆದ ಹುಚ್ಚ; ಪುಣ್ಯಕ್ಕೆ ಯಾರಿಗೂ ಚುಚ್ಚಿಲ್ಲ!
ಈ ಕುರಿತು ಬಿಮ್ಸ್ ನಿರ್ದೇಶಕ ಡಾ.ಗಂಗಾಧರ್ ಗೌಡ ಮಾತನಾಡಿ, ಬಳ್ಳಾರಿಯ ನಿವಾಸಿಯೊಬ್ಬರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗೆ ಬಂದ ವೇಳೆ ವಿದ್ಯುತ್ ಕಡಿತವಾಗಿದೆ. ಜನರೇಟರ್ ವ್ಯವಸ್ಥೆ ಇದ್ದು, ಮ್ಯಾನ್ಯುಯಲ್ ಸ್ವಿಚ್ ಇರುವ ಕಾರಣ ಆಸ್ಪತ್ರೆಯ ಸಿಬ್ಬಂದಿ ಒಂದೆರಡು ನಿಮಿಷಗಳಲ್ಲಿ ಸ್ವಿಚ್ ಆನ್ ಮಾಡಿದ್ದು, ಪುನಃ ವಿದ್ಯುತ್ ಸರಬರಾಜಾಗಿದೆ. ಮ್ಯಾನ್ಯುಯಲ್ ಸ್ವಿಚ್ ಬದಲಾವಣೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ರೋಗಿಗೆ ಚಿಕಿತ್ಸೆ ನೀಡುವಲ್ಲಿ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದರು.
ಬಳ್ಳಾರಿಯಲ್ಲಿ ಮತ್ತೊಬ್ಬ ಬಾಣಂತಿ ಸಾವು: ಬಿಮ್ಸ್ ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ
