ಕರ್ನಾಟಕದಲ್ಲಿ ದೇಶದಲ್ಲೇ ಅತಿ ಹೆಚ್ಚು ಟೆಸ್ಟ್: ಕಡಿಮೆ ಪಾಸಿಟಿವಿಟಿ| ಪ್ರತಿ ಲಕ್ಷ ಜನರಲ್ಲಿ 16360 ಮಂದಿಗೆ ಕೋವಿಡ್ ಪರೀಕ್ಷೆ| ಪಾಸಿಟಿವಿಟಿ ದರ ಶೇ.3.2ರಿಂದ ಶೇ.1.8ಕ್ಕೆ ಇಳಿಮುಖ|
ನವದೆಹಲಿ(ನ.24): ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ತಿಂಗಳ ಹಿಂದಿನವರೆಗೂ ಎರಡನೇ ಸ್ಥಾನ ಅಲಂಕರಿಸಿ ಆತಂಕ ಮೂಡಿಸಿದ್ದ ಕರ್ನಾಟಕದ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ದೇಶದಲ್ಲೇ ಅತಿ ಹೆಚ್ಚು ಕೊರೋನಾ ಟೆಸ್ಟ್‌ಗಳು ಕರ್ನಾಟಕದಲ್ಲಿ ನಡೆಯುತ್ತಿವೆ. ಆದಾಗ್ಯೂ ಪಾಸಿಟಿವಿಟಿ ದರ ತೀರಾ ಕಡಿಮೆ ಇರುವುದು ಆಶಾದಾಯಕವಾಗಿದೆ.
ಮತ್ತೆ 3 ಅಂಕಿಗಿಳಿದ ಸೋಂಕಿತರ ಸಂಖ್ಯೆ : ಗುಣಮುಖರು ಏರಿಕೆ
6.11 ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕದಲ್ಲಿ ಪ್ರತಿ ಲಕ್ಷ ಜನರಲ್ಲಿ ಭಾನುವಾರ 16360 ಮಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ದೇಶದ ಯಾವುದೇ ರಾಜ್ಯದಲ್ಲೂ ಇಷ್ಟುಪರೀಕ್ಷೆ ಮಾಡಲಾಗಿಲ್ಲ. ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನಲ್ಲಿ 2.90 ಲಕ್ಷ ಜನರಿದ್ದು, ಪ್ರತಿ ಲಕ್ಷ ಜನರಿಗೆ ಸರಾಸರಿ 14769 ಪರೀಕ್ಷೆಗಳನ್ನು ಮಾಡಲಾಗಿದೆ. ಕೊರೋನಾ ಟೆಸ್ಟಿಂಗ್‌ನಲ್ಲಿ ಅದು 2ನೇ ಸ್ಥಾನದಲ್ಲಿದೆ.
ಕೊರೋನಾ ಟೆಸ್ಟ್‌ಗಳು ಅಧಿಕ ಪ್ರಮಾಣದಲ್ಲಿದ್ದರೂ, ಪಾಸಿಟಿವಿಟಿ ದರ ಕಡಿಮೆ ಇರುವುದು ಗಮನಾರ್ಹ. ಪ್ರತಿ 100 ಮಂದಿಗೆ ಕೊರೋನಾ ಟೆಸ್ಟ್ ಮಾಡಿದಾಗ ಆ ಪೈಕಿ ಎಷ್ಟುಮಂದಿಗೆ ಸೋಂಕು ದೃಢಪಡುತ್ತದೆ ಎನ್ನುವುದನ್ನು ಪಾಸಿಟಿವಿಟಿ ದರ ಎನ್ನಲಾಗುತ್ತದೆ. ಅ.26ರಿಂದ ನ.8ರ 14 ದಿನಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಶೇ.3.2ರಷ್ಟಿದ್ದ ಪಾಸಿಟಿವಿಟಿ ದರ ನ.8ರಿಂದ ನ.21ರವರೆಗಿನ 14 ದಿನಗಳ ಅವಧಿಯಲ್ಲಿ ಶೇ.1.8ಕ್ಕೆ ಇಳಿಕೆಯಾಗಿದೆ. ಅಂದರೆ ಪ್ರತಿ 100 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ಕರ್ನಾಟಕದಲ್ಲಿ ಇಬ್ಬರಿಗಿಂತ ಕಡಿಮೆ ಜನರಲ್ಲಿ ಸೋಂಕು ದೃಢಪಡುತ್ತಿದೆ.
ಹೊಸ ಆಶಾಕಿರಣ; ಕೇವಲ 2 ಡೋಸ್‌ನಲ್ಲಿ ಆಕ್ಸಫರ್ಡ್ ಲಸಿಕೆ ಶೇ.70 ರಷ್ಟು ಪರಿಣಾಮಕಾರಿ!
ಆದರೆ ಇದೇ ಅವಧಿಯಲ್ಲಿ ಹಿಮಾಚಲದಲ್ಲಿ ಪಾಸಿಟಿವಿಟಿ ದರ ಶೇ.8.1ರಿಂದ ಶೇ.15.3ಕ್ಕೆ, ದೆಹಲಿಯಲ್ಲಿ ಶೇ.11.3ರಿಂದ ಶೇ.12.8ಕ್ಕೆ, ರಾಜಸ್ಥಾನದಲ್ಲಿ ಶೇ.9.1ರಿಂದ ಶೇ.11.1ಕ್ಕೆ, ಹರಾರಯಣದಲ್ಲಿ ಶೇ.8ರಿಂದ ಶೇ.10.5ಕ್ಕೆ, ಕೇರಳದಲ್ಲಿ ಶೇ.12.1ರಿಂದ ಶೇ.10ಕ್ಕೆ ಏರಿಕೆಯಾಗಿದೆ. ತನ್ಮೂಲಕ ಈ ರಾಜ್ಯಗಳು ಸದ್ಯದ ಮಟ್ಟಿಗೆ ಕೊರೋನಾ ಹಾಟ್‌ಸ್ಪಾಟ್ ಆಗಿವೆ.
ಅಸ್ಸಾಂ, ಬಿಹಾರದಲ್ಲಿ ಪಾಸಿಟಿವಿ ದರ ಶೇ.1ಕ್ಕಿಂತ ಕಡಿಮೆ ಇದೆ. ಮಹಾರಾಷ್ಟ್ರದಲ್ಲಿ ಕೆಲ ತಿಂಗಳ ಹಿಂದೆ ಶೇ.18ರಷ್ಟಿದ್ದ ಪಾಸಿಟಿವಿಟಿ ದರ ಈಗ ಶೇ.8ಕ್ಕೆ ಇಳಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಲಹಾವಳಿ ಪ್ರಕಾರ 14 ದಿನಗಳ ಕಾಲ ಪಾಸಿಟಿವಿಟಿ ದರ ಶೇ.5ಕ್ಕಿಂತ ಮೇಲಿದ್ದರೆ ಅದನ್ನು ಅಪಾಯಕಾರಿ ವಲಯ ಎಂದು ಪರಿಗಣಿಸಲಾಗುತ್ತದೆ. ಆ ನಿಟ್ಟಿನಲ್ಲಿ ನೋಡಿದರೆ ಕರ್ನಾಟಕ ಸುರಕ್ಷಿತ ವಲಯದಲ್ಲಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 24, 2020, 8:14 AM IST