ಕೊರೋನಾ ಮಹಾಮಾರಿ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದೆ. ಸಾವಿನ ಸಂಖ್ಯೆಯೂ ಇಳಿದಿದ್ದು ಕೊರೋನಾ ಕೇಸ್fಗಳು ದಿನದಿಂದ ದಿನಕ್ಕೆ ಅತ್ಯಂತ ಕಡಿಮೆಯಾಗುತ್ತಿವೆ
ಬೆಂಗಳೂರು (ನ.24): ನಗರದಲ್ಲಿ ಸೋಮವಾರ 725 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 478 ಮಂದಿ ಗುಣಮುಖರಾಗಿದ್ದಾರೆ. 10 ಮಂದಿ ಮೃತಪಟ್ಟಿದ್ದಾರೆ.
ಹೊಸ ಪ್ರಕರಣಗಳೊಂದಿಗೆ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 3,64,390ಕ್ಕೆ ಏರಿಕೆಯಾಗಿದೆ. ಗುಣಮುಖರಾದವರ ಸಂಖ್ಯೆ 3,41,902ಕ್ಕೆ ತಲುಪಿದೆ. ಆಸ್ಪತ್ರೆಗಳು, ಆರೈಕೆ ಕೇಂದ್ರ ಮತ್ತು ಹೋಂ ಐಸೋಲೇಷನ್‌ನಲ್ಲಿ 18,409 ಸಕ್ರಿಯ ಸೋಂಕಿತರಿದ್ದಾರೆ. ಇದರಲ್ಲಿ 213 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸೋಮವಾರ 60 ವರ್ಷ ಮೇಲ್ಪಟ್ಟ9 ವೃದ್ಧರು ಸೇರಿ ಒಟ್ಟು 10 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜಧಾನಿಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 4,078ಕ್ಕೆ ಏರಿಕೆಯಾಗಿದೆ.
ನ.15ರಂದು 840 ಪ್ರಕರಣ ಹಾಗೂ ನ.16ರಂದು 597, ನ.17ರಂದು 729, ನ.18ರಂದು 933 ಕೇಸ್‌ಗಳು, ಇನ್ನು ನ.21ರಂದು 972 ಪ್ರಕರಣಗಳು ವರದಿಯಾಗಿದ್ದವು.
ಕೋವಿಡ್ ಸೇವೆಯಿಂದ ಉಪನ್ಯಾಸಕರ ಬಿಡುಗಡೆ
ನಗರದಲ್ಲಿ ಕಾಲೇಜುಗಳು ಪುನರ್ ಆರಂಭಗೊಂಡ ಹಿನ್ನೆಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬಿಬಿಎಂಪಿಯ 64 ಉಪನ್ಯಾಸಕರನ್ನು ಕೋವಿಡ್ ಕಾರ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಹೊಸ ಆಶಾಕಿರಣ; ಕೇವಲ 2 ಡೋಸ್‌ನಲ್ಲಿ ಆಕ್ಸಫರ್ಡ್ ಲಸಿಕೆ ಶೇ.70 ರಷ್ಟು ಪರಿಣಾಮಕಾರಿ! .
ಪದವಿ ತರಗತಿಗೆ ಬೋಧನೆ ಮಾಡುವ ಪಾಲಿಕೆಯ ನಾಲ್ಕು ಕಾಲೇಜುಗಳ ಉಪನ್ಯಾಸಕ ಸಿಬ್ಬಂದಿಯನ್ನು ಕೋವಿಡ್ ಕಾರ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಜೆ ಮಂಜುನಾಥ್ ತಿಳಿಸಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ತೆರಳುವ ಸಿಬ್ಬಂದಿಗೆ ಕಾಲೇಜು ಮುಖ್ಯಸ್ಥರಿಂದ ಸೂಚನಾ ಪತ್ರದೊಂದಿಗೆ ಕೊರೋನಾ ಸೇವೆಯಿಂದ ಬಿಡುಗಡೆ ಮಾಡಲು ಮನವಿ ಮಾಡಿದಲ್ಲಿ ಬಿಡುಗಡೆ ಮಾಡಲಾಗುವುದು. ಬೋಧನೆಗೆ ತೆರಳುವ ಮುನ್ನ ಅವರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಿ, ನೆಗೆಟಿವ್ ಬಂದರೆ ಮಾತ್ರ ಬಿಡುಗಡೆ ಮಾಡಲಾಗುತ್ತದೆ. ಒಂದು ವೇಳೆ ಬೋಧನೆ ನೆಪದಲ್ಲಿ ಕೋವಿಡ್ ಕಾರ್ಯದಿಂದ ನುಣಿಚಿಕೊಳ್ಳಲು ಮುಂದಾದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆ ಇಲ್ಲ
ಕಾಲೇಜುಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಕೊರೋನಾ ಸೋಂಕು ಪರೀಕ್ಷೆ ಮುಂದುವರೆದಿದ್ದು, ಸೋಮವಾರ ಯಾರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.
ಸೋಮವಾರ ಒಟ್ಟು 4,156 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 259 ಶಿಕ್ಷಕರು, 3,377 ವಿದ್ಯಾರ್ಥಿಗಳು ಹಾಗೂ 527 ಇತರೆ ಸಿಬ್ಬಂದಿಯಾಗಿದ್ದಾರೆ. ಒಟ್ಟು 608 ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಗೆ ಬಿಬಿಎಂಪಿ 123 ತಂಡ ನಿಯೋಜಿಸಿದೆ.
ಈವರೆಗಿನ ಸೋಂಕು ದೃಢಪಟ್ಟ167 ಮಂದಿಯ ಪೈಕಿ 116 ಜನ ವಿದ್ಯಾರ್ಥಿಗಳು ಹಾಗೂ 51 ಮಂದಿ ಸಿಬ್ಬಂದಿಯಾಗಿದ್ದಾರೆ. ಆರ್‌ಆರ್‌ನಗರ ಮತ್ತು ಪೂರ್ವ ವಲಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿ ಶಿಕ್ಷಕರನ್ನು ಸೋಂಕು ದೃಢಪಟ್ಟಿದೆ. ಈವರೆಗೆ ಆರ್‌ಆರ್‌ನಗರದಲ್ಲಿ 7,668 ಮಂದಿಯನ್ನು ಪರೀಕ್ಷೆ ನಡೆಸಲಾಗಿದ್ದು, 35 ವಿದ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿದೆ. ಪೂರ್ವ ವಲಯದಲ್ಲಿ 6,064 ಮಂದಿ ಪರೀಕ್ಷೆ ನಡೆಸಿದ್ದು, 36 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಉಳಿದಂತೆ ಬೊಮ್ಮನಹಳ್ಳಿ ವಲಯದಲ್ಲಿ ನಾಲ್ವರಲ್ಲಿ, ದಾಸರಹಳ್ಳಿಯಲ್ಲಿ 20, ಮಹದೇವಪುರದಲ್ಲಿ ಇಬ್ಬರು, ಪಶ್ಚಿಮದಲ್ಲಿ 26, ಯಲಹಂಕದಲ್ಲಿ 29 ಹಾಗೂ ದಕ್ಷಿಣ ವಲಯದಲ್ಲಿ 15 ವಿದ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 24, 2020, 7:04 AM IST